ಕೀಳರಿಮೆ ಏಕೆ?

ಪ್ರಿಯ ಸಖಿ, ಬಸ್ಸಿನ ಪ್ರಯಾಣದಲ್ಲೊಮ್ಮೆ ಕಾಲೇಜು ಯುವತಿಯೊಬ್ಬಳು ಜೊತೆಯಾದಳು. ಏನೇನೋ ಕಾಡು ಹರಟೆ ಹೊಡೆಯುತ್ತಾ ದಾರಿ ಸವೆಸುತ್ತಿರಲು, ಇದ್ದಕ್ಕಿದ್ದಂತೆ ಆ ಯುವತಿ ಕೂತ ಸೀಟಿನಲ್ಲೆ ಮಿಸುಕಾಡಲಾರಂಭಿಸಿದಳು. ಹಿಂದೆ ಮುಂದೆ, ಅಕ್ಕಪಕ್ಕಕ್ಕೆ ಜರುಗುತ್ತಾ ಹೇಗೆ ಕುಳಿತರೂ...

ಕಿವೀಗೆ ರಿಂಗು

ಕಿವೀಗೆ ರಿಂಗು ಕೊಡಿಸಣ್ಣ ಕಾಲಿಗೆ ಉಂಗುರ ಇಡಿಸಣ್ಣ ಕೈಗೆ ಬಳೇನ ತೊಡಿಸಣ್ಣ ತಟ್ಟೆಗೆ ತಿಂಡಿ ಬಡಿಸಣ್ಣ ಹಾಕಣ್ಣಾ ಹಾಕಣ್ಣಾ ಹತ್ತೇ ಜಿಲೇಬಿ ಸಾಕಣ್ಣಾ ಕೈಗೆ ಗೋಲಿ ಬರಬೇಕು ಫುಟ್‌ಬಾಲ್ ಕಾಲಿಗೆ ಸಿಗಬೇಕು ಬಲೂನು ಗಾಳಿಗೆ...

ನನಗೆ ಚೆನ್ನಾಗಿ ಗೊತ್ತು

ಅವನು ನನಗೆ ಬೆವರಿಳಿಸ್ಬೇಕೂಂತ ಏನ್ಮಾಡಿದರೂ ನಾನು ಜಪ್ಪೈಯಾ ಅನ್ನದಿರೋದು ನನ್ನಗತ್ತು. ಅವನು ನನ್ಮೇಲೆ ಸುರಿಸಿದ ಬೆಂಕಿನೆಲ್ಲಾ ಬೆಳದಿಂಗಳು ಮಾಡೋದ್ಹೇಗೇಂತ ನನಗೆ ಚೆನ್ನಾಗಿ ಗೊತ್ತು. *****

ಹಳೆ ಮಾರ್ಗಗಳು

೧ ಕುಂಬಳೆ ಮಂಜೇಶ್ವರ ಪೆರ್ಲ ಪುತ್ತೂರು ಬದಿಯಡ್ಕ ಕಾರಡ್ಕ ಸುಳ್ಯ ಹೀಗೆ ಇಲ್ಲಿಗೆ ಹಲವು ಮಾರ್ಗಗಳು ಬಂದು ಸೇರಿದವು ಮೊದಲು ಯಾರೂ ಕಡಿಯಲಿಲ್ಲ ಇವನ್ನು ಕವಿತೆಯ ಸಾಲುಗಳಂತೆ ಹುಟ್ಟಿದವು. ೨ ನಡೆದದ್ದೆ ಮಾರ್ಗ ಆಗ. ...

ಲಿಂಗಮ್ಮನ ವಚನಗಳು – ೩೮

ಅಯ್ಯ ನಾ ಕಾಂಬುದಕ್ಕೆ ನನ್ನ ಶಕ್ತಿಯಿಲ್ಲ. ನಿಮ್ಮಿಂದವೆ ಕಂಡೆನಯ್ಯ.  ಅದೇನು ಕಾರಣವೆಂದರೆ, ತನುವ ತೋರಿದಿರಿ, ಮನವ ತೋರಿದಿರಿ, ಧನವ ತೋರಿದಿರಿ, ತನುವ ಗುರುವಿಗಿತ್ತು, ಮನವ ಲಿಂಗಕಿತ್ತು, ಧನವ ಜಂಗಮಕಿತ್ತು, ಇವೆಲ್ಲವು ನಿಮ್ಮೊಡವೆ ಎಂದು ನಿಮಗಿತ್ತು,...

ಮೌಲ್ಯಮಾಪನ

"ಆಕಾಶ" ನೀಲಿ ಇದ್ದಾಗೆಲ್ಲ ನಮ ರಕ್ತ ಕೆಂಪು, ಕಂಪಾಗಿ ಕವಲೊಡೆಯುತ್ತದೆ. ಅದಕ್ಕೆ ಮೋಡ ತುಂಬುತ್ತ ಗಟ್ಟಿಯಾಗುತ್ತಿದ್ದರೆ ನಮ್ಮ ರಕ್ತ ಕಲಬೆರಕೆಯಾಗುತ್ತದೆ "ಬ್ರಹ್ಮಾಂಡ" ತೇಜ ಪುಂಜವಾಗಿದ್ದರೆ ನಮ್ಮ ಮಿದುಳು, ನರತಂತುಗಳು ಚಿಗಿಯುತ್ತವೆ ಅವುಗಳಿಗೆ ಗ್ರಹಣ ಬಡಿದರೆ...

ಎರಡೆಳೆ ದಾರ

ಎರಡಳೆ ದಾರವು ಬುಡದೊಳಗಿರುವಾಗ ಹರವಿಕೊಂಡಿದೆ ಬಲೆಯು ಬಿಡಿಸದ ಗಂಟು ಬಿಡಿಸಿಕೊಳ್ಳುವೆನೆಂದು ಹೆಣಗುವ ಮಾನವ ತೊಡರಿಕೊಂಡಿಲ್ಲಿಯೆ ಕೊಳೆಯುವನು ಸಿಕ್ಕು ಹುಟ್ಟಿ ಬಂದುದಕಾಗಿ ಹೊಟ್ಟೆ ಕೊಟ್ಟಿಹ ಶಿವನು ಹುಟ್ಟಿದ ಸೂರ್ಯನು ಮುಳುಗುವವರೆಗೆ ಅದನು ತುಂಬಿಸಲಿಕ್ಕೆ ಕಷ್ಟಗಳ ಪಡುವನು...

ಮಿತಿ

ಪ್ರಿಯ ಸಖಿ, ಇತ್ತೀಚೆಗೆ ಆತ್ಮೀಯರೊಬ್ಬರಿಗೆ ಅಪಘಾತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿರುವ ವಿಷಯ ತಿಳಿದು ಅವರನ್ನು ನೋಡಲು ಹೋದೆ. ಆಸ್ಪತ್ರೆಯ ಎಲ್ಲ ವಾರ್ಡುಗಳಲ್ಲೂ ವಿವಿಧ ರೋಗಗಳಿಗಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಾಲು ಕಾಣಿಸಿತು. ನನ್ನ ಪರಿಚಿತರು ಎಲ್ಲೆಂದು...

ಮನೆಗೆ ಮಾತ್ರ ಕಿಟಕಿ ಇದೆ

"ಮನೆಗೆ ಮಾತ್ರ ಕಿಟಕಿ ಇದೆ ನಮಗೆ ಕಿಟಕಿ ಇಲ್ಲ" "ನಮಗೂ ಕೂಡ ಕಿಟಕಿ ಇದೆ ನಿನಗದು ತಿಳಿದಿಲ್ಲ" "ನಮಗೆ ಕಿಟಕಿ ಎಲ್ಲಿ ಇದೆ?" "ಮನಸಿನಾಳದಲ್ಲಿ, ನೋಡಲಿಕ್ಕೆ ಬರದ ಹಾಗೆ ಎದೆಯ ಗೂಡಿನಲ್ಲಿ" "ಮನೆಗೆ ಕಿಟಕಿ...

ದಿಕ್ಕಾಪಾಲು

ನಾನು ನೋಡಿ, ತಾರೆಗಳಿಗೆ ತಮ್ಮ ಪಾಡಿಗೆ ಮಿನುಗಿ ಮಿಂಚೋದಕ್ಕೆ ಧಾರಾಳವಾಗಿ ಬಿಡ್ತೇನೆ ಪ್ರತಿ ಅಮಾವಾಸ್ಯೆಗೂ ಅವರುಗಳಿಗೇ ಇಡೀ ಆಕಾಶ ಬಿಟ್ಟುಕೊಡ್ತೇನೆ.  ಆದರೆ ಆ ಸ್ವಾರ್ಥಿ ಸೂರ್ಯ ಬಂದಾ ಅಂದರೆ ಆಯ್ತು ಇಡೀ ಆಕಾಶ ಅವನಿಗೇ...