ಕಂಡೆವು ನಾವು ನಿಮ್ಮಲ್ಲಿ

ಕಂಡೆವು ನಾವು ನಿಮ್ಮಲ್ಲಿ
ಚುಕ್ಕಿ ಚಂದ್ರಮರ ಹೊಳಪಲ್ಲಿ
ಶಾಂತಿ ಧಾಮವೂ ಕಣ್ಣಲ್ಲಿ
ನಾವುಗಳಾಗುವೆವು ನಿಮ್ಮಲ್ಲಿ ||

ಓ ಮಕ್ಕಳೇ
ನಗು ಮೊಗದಾ ಹೂವುಗಳೆ
ಕವಲೊಡೆದಾ ದಾರಿಯಲ್ಲಿ
ನೆಟ್ಟ ಸಸಿಗಳ ಹಸಿರಲ್ಲಿ||

ಪಚ್ಚೆ ಪೈರಿನ ಬೆಳೆಯಲ್ಲಿ
ಅರಳಿದ ಗುಲಾಬಿಯ ಹೂವಲ್ಲಿ
ದಟ್ಟ ಕಾಡಿನ ಸುಂದರ ವನದಲ್ಲಿ||

ಹರಿಯುವ ನೀರಂಚಿನ ಅಲೆಯಲ್ಲಿ
ಕೋಗಿಲೆ ಹಾಡಿನ ರಾಗದಲ್ಲಿ
ನಾವುಗಳಾಗುವೆವು ನಿಮ್ಮಲ್ಲಿ ||

ಕಾಣುವೆವು ಹಂದರ ಪಕ್ಷಿಗಳಿಂಚರ
ಚಿಲಿಪಿಲಿ ಗುಟ್ಟುವ ದನಿಯಲ್ಲಿ
ಮಮತೆಯ ಕಾಣುವ ಮಡಿಲಲ್ಲಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂಜಿಗಣ್ಣು

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…