ಅಯ್ಯ ನಾ ಕಾಂಬುದಕ್ಕೆ ನನ್ನ ಶಕ್ತಿಯಿಲ್ಲ.
ನಿಮ್ಮಿಂದವೆ ಕಂಡೆನಯ್ಯ.  ಅದೇನು ಕಾರಣವೆಂದರೆ,
ತನುವ ತೋರಿದಿರಿ, ಮನವ ತೋರಿದಿರಿ,
ಧನವ ತೋರಿದಿರಿ, ತನುವ ಗುರುವಿಗಿತ್ತು,
ಮನವ ಲಿಂಗಕಿತ್ತು, ಧನವ ಜಂಗಮಕಿತ್ತು,
ಇವೆಲ್ಲವು ನಿಮ್ಮೊಡವೆ ಎಂದು ನಿಮಗಿತ್ತು,
ತಳ್ಳಿಬಳ್ಳಿಯನೆ ಹರಿದು, ನಿಮ್ಮಲ್ಲಿಯೆ
ನೆಲೆಗೊಂಡ ಕಾರಣ ಚನ್ನ ಮಲ್ಲೇಶ್ವರನ
ಪಾದದಲ್ಲೆ ನಿರ್ಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ