ನಿನ್ನೊಳೆನ್ನಯ ಭಕ್ತಿ, ಅವಳೊಳನುರಕ್ತಿ-
ತೋರದನುರಕ್ತಿ, ಭಕ್ತಿಯನೆಂತು ಕಾಂಬೆ?
ನನ್ನ ಕೃಷ್ಣೆಗೊ, ನನ್ನ ಕೃಷ್ಣನಿಗೊ, ವ್ಯಕ್ತಿ
ದ್ವಯಗಳದ್ವಯಕೊ, ಕೃಷ್ಣಾರ್ಪಣಮಿದೆಂಬೆ.
*****