ನಾನು ನೋಡಿ, ತಾರೆಗಳಿಗೆ ತಮ್ಮ ಪಾಡಿಗೆ
ಮಿನುಗಿ ಮಿಂಚೋದಕ್ಕೆ ಧಾರಾಳವಾಗಿ ಬಿಡ್ತೇನೆ
ಪ್ರತಿ ಅಮಾವಾಸ್ಯೆಗೂ ಅವರುಗಳಿಗೇ ಇಡೀ
ಆಕಾಶ ಬಿಟ್ಟುಕೊಡ್ತೇನೆ. ಆದರೆ ಆ ಸ್ವಾರ್ಥಿ ಸೂರ್ಯ
ಬಂದಾ ಅಂದರೆ ಆಯ್ತು ಇಡೀ ಆಕಾಶ
ಅವನಿಗೇ ಬೇಕು. ಅವನು ಇಟ್ಟಾ ಕಾಲು
ಪಾಪ ಈ ತಾರೆಗಳೆಲ್ಲ ಕಣ್ಣಿಗೆ ಕಾಣದಂತೆ
ದಿಕ್ಕಾಪಾಲು.
*****