ಹೊಸ ಜಗತನ್ನು ಸೃಷ್ಟಿಸುವ ಶಿಲ್ಪಿಯಾಗಿದಿ
ವಿದ್ಯೆ ಎಂಬ ಅವಿನಾಶಿ ಅಮೃತ ಪಡಕೊಂಡಿದಿ
ಖಡ್ಗಕ್ಕಿಂತ ಮಿಗಿಲಾದ ಅಸ್ತ್ರ ಹಿಡಕೊಂಡಿದಿ
ಗಜಮುಖನಂತೆ ವಿದ್ಯೆಯ ಸಾಗರನಾದಿ.
ಅಜ್ಞಾನವೆಂಬ ಕತ್ತಲೆಯ ಕಳಕೊಂಡಿದಿ
ಸುಜ್ಞಾನವೆಂಬ ಬೆಳಕು ನೀ ಪಡಕೊಂಡಿದಿ
ಭಾವಿ ಜೀವನದ ಅಮರ ಜ್ಯೋತಿಯಾಗಿದಿ
ಅವಗುಣಗಳೆಂಬ ಬೇರು ಅಳಿಸಿಕೊಂಡಿದಿ.
ಗುರುವಿನ ಕಷ್ಟವನು ನೋಡಿ ಮರುಗಿದಿ
ಕಷ್ಟದಲ್ಲಿ ಗುರುವಿಗೆ ಸಹಾಯಕನಂತೆ ಎದೆತಟ್ಟಿ ನಿಂತಿದಿ
ಗುರಿ ಮುಟ್ಟಿಸುವುದಕ್ಕೆ ಸತತ ಸಹಾಯ ಮಾಡಿದಿ
ಗುರುವಿನ ಜಯ (ಮೋಕ್ಷ) ಕಂಡು ಸಂತಸ ಪಟ್ಟಿದಿ.
ಪರರ ಸುಖವನ್ನು ಕಂಡು ಹರ್ಷಿತನಾಗಿದಿ
ಪರರ ಕಷ್ಟದಲ್ಲಿ ಸಹಭಾಗಿಯಾಗಲು ಧೈರ್ಯದಿಂದ ನಿಂತಿದಿ
ನೀತಿ ಮಾರ್ಗದಿ ಕೀರ್ತಿಗಳಿಸಬೇಕೆಂದು ಬಯಸಿದಿ
ಸುವಿಚಾರ ಕಲಿತು ಸುಹೃದಯಿ ಆಗಿದಿ.
ಒರಟು ಕಲ್ಲನ್ನು ಕೆತ್ತಿಕೊಂಡು ಸುಂದರ ಮೂರ್ತಿಯಾದಿ
ಝಕಣಚಾರಿಯಂತೆ ಹಗಲಿರುಳು ನಿದ್ರೆಗೆಟ್ಟು ಬಳಲಿದಿ
ಗುರುವಿನ ಮನಶಾಂತಿಗೆ ಎಲ್ಲವೂ ತಿಳಕೊಂಡಿದಿ
ಯಾರು ಕದಿಯಲಾರದಂಥ ಐಶ್ವರ್ಯ ಗಳಿಸಿದಿ.
ಜಾತಿ ಮತ ಪಂಥಗಳ ಭೇದವ ಆರಿಸಿದಿ
ನಾವೆಲ್ಲರೂ ಒಂದೇ ತಾಯಿ ಮಕ್ಕಳೆಂದು ತಿಳಕೊಂಡಿದಿ
ಪ್ರಾಮಾಣಿಕತೆಗಾಗಿ ಪ್ರಾಣ ಅರ್ಪಿಸಲು ನಿಂತಿದಿ
ಅಂಧಕಾರದ ವಿರುದ್ಧ ಭಂಡೇಳಲು ಸಿದ್ಧನಾದಿ.
ಎಲೆ ಕಾಂಡದಲ್ಲಿ ಅಡಗಿದ ಹೂವಿನಂತಿರದೆ
ಎಲ್ಲರ ದೃಷ್ಟಿಗೆ ಕಾಣುವ ಕುಸುಮದಂತಾದಿ
ಗುರುವಿಗಾಗಿ ತನುಮನ ಧನವು ನೀಡಿದಿ
ಜಗವಿರುವವರೆಗೆ ಜಗಭರಿತ ಶಿಷ್ಯನಾದಿ.
*****
೦೬/೧೧/೧೯೯೭