ಭೂಮಿ ಆಟದ ಮೈದಾನ

ಸುತ್ತಲೂ ಕತ್ತಲು
ನಂಬುವಂತಿಲ್ಲ ಯಾರೊಬ್ಬರನೂ
ಕತ್ತಿ ಹಿಡಿದು
ಮೇಲೇರಿ ಬಂದಂತೆ
ಕಡ್ಡಿ ಗೀರಿದೆ ಮೆಲ್ಲಗೆ
ದೀಪ ಹಚ್ಚಿದೆ
ಬೆಳೆಯುತ್ತಾ ಹೋಯಿತು
ಬೆಳಕು

ಮುಟ್ಟಿದರೆ ಎದೆಯಾಳಕ್ಕೆ
ಚುಚ್ಚಿಕೊಳ್ಳುವ
ಮುಳ್ಳು
ಪ್ರತಿ ಕೊಂಬೆಗೂ
ತುದಿಯಲೊಂದು ಸಣ್ಣ ಮೊಗ್ಗು
ನಗುತ್ತಿವೆ ಹೂವುಗಳು
ಅರಳಿ
ತೋಟದ ತುಂಬಾ

ಭಯದ ನೆರಳು ಸುತ್ತಮುತ್ತ
ಆಕಾಶಕ್ಕೆ ಹೆಣೆದ
ಬಲೆ
ಮೌನ ಮುರಿಯಿತು ಹಕ್ಕಿ
ರೆಕ್ಕೆ ಪಟಪಟ ಸದ್ದು
ಬಾನ ತುಂಬಾ
ಕಲರವ

ಕೈ ಕೈ ಹಿಡಿದ ಜನ
ಕೆಡವಿದರು
ಎಲ್ಲಾ ಗೋಡೆಗಳ

ಆಟದ ಮೈದಾನವಾಯಿತು
ಭೂಮಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರವು ತೂಗಾಡಿದವು
Next post ಹತ್ತೊಂಬತ್ತನೇ ಶತಮಾನ ಕನ್ನಡ ಜನತೆಗೆ ದೌರ್ಭಾಗ್ಯದ ಶತಮಾನ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys