ನೂರು ನೆರಳುಗಳು

ನಕ್ಕವರೆಲ್ಲ ನನ್ನವರೆಂದು
ಮಳೆಗರೆಯಿತು ಮನಸು
ಸುತ್ತ ಮುತ್ತಿದ ಕಂಡ ಕಂಡವರಿಗೆ
ಹದವಾಯಿತು ಕನಸು

ಕಳಕಳ ಎನ್ನುವ ಕನಸಿಗೆ ಅವರು
ಅಮಲಿನ ಹಾಸಿಗೆ ಹಾಸಿದರು
ನರಳಿತು ಕನಸು ಸುಖ ಸಂತಸದಲಿ
ಮರೆತು ಹೋಯಿತು ಮಳೆ ಮನಸು

ಬಸಿರಿನ ಕನಸಿಗೆ ಹುಟ್ಟಿದ ಮಕ್ಕಳು
ನೆಟ್ಟಗಿದ್ದರೆ ತಮ್ಮವರು
ಮೂಗೊ ಕಿವುಡೊ ಕುಂಟೊ ಕುರುಡೊ
ಸೊಟ್ಟಗಿದ್ದರೆ ನನ್ನವರು

ಗಜಿಬಿಜಿ ಕೆಸರಿನ ಜನ ಜೈಲಿನಲಿ
ಹೂತ ಮನಸಿದು ಕಂಬಿ ಎಣಿಸಿದೆ
ಬಿಡುಗಡೆ ಬೇಡದೆ, ಒಳಗೇ ಸಾಯದೆ
ದುಗುಡದ ದಿನಗಳ ದಿನ್ನೆಯೇರಿದೆ

ಕಂಬಿಯ ನಡುವೆ ತೂರುವ ಬೆಳಕಿಗೆ
ಕಾಯುತ ಕಾಯುತ ಕಾಯುತ ನಿಂತೆ
ಒಬ್ಬನೆ ಎಂದು ಒಳಗಡೆ ಹುಡುಕಿದೆ
ನೂರು ನೆರಳುಗಳು ನನ್ನಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಮತೀಂದ್ರ ನಾಡಿಗರ “ದಾಂಪತ್ಯ ಗೀತ”
Next post ಒಮ್ಮೆ ಪ್ರೀತಿಯಲಿ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys