ನಕ್ಕವರೆಲ್ಲ ನನ್ನವರೆಂದು ಮಳೆಗರೆಯಿತು ಮನಸು ಸುತ್ತ ಮುತ್ತಿದ ಕಂಡ ಕಂಡವರಿಗೆ ಹದವಾಯಿತು ಕನಸು ಕಳಕಳ ಎನ್ನುವ ಕನಸಿಗೆ ಅವರು ಅಮಲಿನ ಹಾಸಿಗೆ ಹಾಸಿದರು ನರಳಿತು ಕನಸು ಸುಖ ಸಂತಸದಲಿ ಮರೆತು ಹೋಯಿತು ಮಳೆ ಮನಸು...
ಸ್ವಾತಂತ್ರ್ಯಪೂರ್ವದಲ್ಲಿ ಬದುಕಿನಲ್ಲಿ ತುಂಬಿದ್ದ ಆದರ್ಶ ಭರವಸೆ ಕನಸುಗಳು ಅಂದಿನ ಕಾವ್ಯಮಾರ್ಗವಾದ ನವೋದಯ ಕಾವ್ಯದಲ್ಲಿ ಪ್ರತಿಬಿಂಬಿಸಿದವು. ಆದರೆ ಸ್ವಾತಂತ್ರ್ಯಾನಂತರ ಬದುಕಿನಲ್ಲಿ ಕಂಡುಬಂದ ಹುಸಿತನ, ಭೀಭತ್ಸತೆ, ಭ್ರಷ್ಟತೆ ಇವು ನವ್ಯಕಾವ್ಯದಲ್ಲಿ ಒಡಮೂಡಿ ಒಂದು ಬಗೆಯ ಸಿನಿಕತನವನ್ನು ಹರಡುತ್ತಿದ್ದಂತೆ...