ಕರ್‍ನಾಟಕದ ಹೋರಾಟಗಳು ಮತ್ತು ಮುಸ್ಲಿಮರು
ಕನ್ನಡಪರ ಮತ್ತು ಜನಪರ ಹೋರಾಟಗಳಲ್ಲಿ ಮುಸ್ಲಿಮರ ಪಾತ್ರ ಎಂಬ ವಿಷಯವನ್ನು ಕುರಿತು ಚರ್ಚಿಸುವುದು ವಿಪರ್ಯಾಸವಾದರೂ ಇವತ್ತು ಅನಿವಾರ್ಯವಾದ ವಿಚಾರವಾಗಿದೆ. ಕಾರಣ, ನೂರಾರು ವರ್ಷಗಳಿಂದ ಅಕ್ಷರ ವಂಚಿತ ಸಮುದಾಯವಾದ ಇದು ಅಕ್ಷರಗಳಿಂದ ಪ್ರಕಟವಾದ ಇತಿಹಾಸದಲ್ಲಿ ತನ್ನನ್ನು...