ಹೆಣ್ಣು: ಸೌಂದರ್ಯೋದ್ಯಮದ ಸರಕೆ?

ಹೆಣ್ಣು: ಸೌಂದರ್ಯೋದ್ಯಮದ ಸರಕೆ?

ಪ್ರಪಂಚವು ಹಳ್ಳಿಯಾಗುತ್ತಿದೆ. ವಿವಿಧ ಸಮೂಹ ಮಾಧ್ಯಮಗಳು, ವಿಜ್ಞೆನ ಮತ್ತು ತಂತ್ರಜ್ಞೆನಗಳ ಅಭೂತಪೂರ್ವ ಬೆಳವಣಿಗೆ ಇಂತಹ ಕೆಲಸವನ್ನು ಮಾಡುತ್ತಿದೆ. ಪರಿಣಾಮವಾಗಿ, ಜಾಗತಿಕ ನೆಲೆಯಲ್ಲಿ ಯಜಮಾನ ಸಂಸ್ಕೃತಿ ಮತ್ತು ಭಾಷೆಯೊಂದು ತನ್ನ ವಿರಾಟ್ ಸ್ವರೂಪವನ್ನು ಪ್ರಕಟಿಸುತ್ತಿದೆ. ಇದರ ಪ್ರಮುಖ ವಕ್ತಾರನಾಗಿ ಅಮೆರಿಕೆಯು ಬಹುತೇಕ ಎಲ್ಲಾ ದೇಶಗಳ ಒಳಕ್ಕೂ ಧಾವಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಬಹುಮುಖಿ ಸಂಸ್ಕೃತಿಗಳನ್ನು ಹೊಂದಿರುವ ಎಲ್ಲ ದೇಶಗಳು ತಮ್ಮ ಅನನ್ಯತೆಯ ವಿಚಾರದಲ್ಲಿ ಗಮನಾರ್ಹ ಪಲ್ಲಟಗಳನ್ನು, ಭವಿಷ್ಯವನ್ನು ವಿವಕ್ಷಿಸುವ ಆತಂಕಗಳನ್ನೂ ಅನುಭವಿಸುತ್ತಿವೆ. ಇಂತಹ ಸಂಕೀರ್ಣಮಯ ಸ್ಥಿತಿಯಲ್ಲಿ ಹೆಣ್ಣಿನ ಸೌಂದರ್ಯವು ಅಂತರರಾಷ್ಟ್ರೀಯ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟದ ಸರಕಾಗಿ ಮಾರ್ಪಡುತ್ತಿದೆ. ಇದು ಹಲವು ಭ್ರಮೆ ಮತ್ತು ಸಂಭ್ರಮ-ಎರಡನ್ನೂ ಒಟ್ಟಿಗೆ ತರುತ್ತಿರುವುದು ವಿಪರ್‍ಯಾಸದ ಸಂಗತಿ.

‘ಹೆಣ್ಣು ಭೋಗದ ವಸ್ತು’ ಎಂಬುದು ಭಾರತವನ್ನೊಳಗೊಂಡ ಅನೇಕ ದೇಶಗಳ ಸಾಂಪ್ರಾದಾಯಿಕ ತಿಳುವಳಿಕೆ. ಇದಕ್ಕೆ ಸಾಕ್ಷ್ಯ ಎನ್ನುವಂತೆ ಹೆಣ್ಣನ್ನು ವರ್ಣರಂಜಿತವಾಗಿ ಶೃಂಗಾರಮಯವಾಗಿ ವೈಭವೀಕರಿಸುವ ಕಾವ್ಯ, ಶಿಲ್ಪ, ಕಾಮಶಾಸ್ತ್ರ, ನೃತ್ಯ ಮುಂತಾದ ವಿವಿಧ ಕಲಾ ಪ್ರಕಾರಗಳು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಇವನ್ನು ಮೀರಲು ಹೆಣ್ಣು ಪುರುಷ ಪ್ರಧಾನ ಸಮಾಜವು ಪುರುಷ ಪರವಾಗಿ ನಿರ್ಮಿಸಿದ ಮೌಲ್ಯಗಳ ಸಾಕಾರ ರೂಪವಾಗಿ ಜಾಗತಿಕ ಸಂಸ್ಕೃತಿ ಪ್ರಕಟವಾದ್ದರಿಂದ ಇದು ಸಾಧ್ಯವಾಗಲಿಲ್ಲ. ಆದರೆ ಈ ತೆರನ ಹುನ್ನಾರಗಳನ್ನು ಅರಿತಿರುವ ಚಿಂತಕರು ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮತ್ತು ಗಂಡು ಈ ಎರಡೂ ಸಮುದಾಯಗಳಲ್ಲಿ ಓಯಸಿಸ್ಸುಗಳಂತೆ ಕಾಣಿಸತೊಡಗಿದ್ದಾರೆ. ಆದರೆ ಇವರ ಸಂಖ್ಯೆ ಅತ್ಯಂತ ನಿಕೃಷ್ಟ ಎಂಬುದು ಸಮಕಾಲೀನ ವ್ಯಂಗ್ಯಗಳಲ್ಲೊಂದು. ಆದ್ದರಿಂದಲೇ ಚಲನಚಿತ್ರ, ದೂರದರ್ಶನ ಮೊದಲಾದ ಸಮೂಹ ಮಾಧ್ಯಮಗಳಲ್ಲಿ ಹೆಣ್ಣು ತನ್ನ ಸೌಂದರ್ಯವನ್ನು ಮುಕ್ತವಾಗಿ ಮಾರಾಟಕ್ಕಿಟ್ಟಿರುವುದು.

ಇತ್ತೀಚಿನ ವರ್ಷಗಳಲ್ಲಿ ‘ವಿಶ್ವಸುಂದರಿ’ಯಂತಹ ಸ್ಪರ್ಧೆಗಳು ವ್ಯಾಪಕವಾಗುತ್ತಿವೆ. ಇವು ರಾಷ್ಟ್ರ, ರಾಜ್ಯ, ವಿಶ್ವವಿದ್ಯಾಲಯ, ಕಾಲೇಜು ಹೀಗೆ ಹಲವು ನೆಲೆಗಳಲ್ಲಿ ವಿಸ್ತರಿಸುತ್ತಿದೆ. ಇದಕ್ಕೆ ಸದರಿ ಸಂಸ್ಥೆ ಮತ್ತು ಸಮಾಜಗಳಿಂದಲೂ ಪ್ರೋತ್ಸಾಹ ದೊರೆಯುತ್ತಿದೆ. ಆದರೆ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದರ ಹಿಂದೆ ಉದ್ಯಮಿಗಳು ನಿಂತಿರುವುದು ವೇದ್ಯವಾಗುತ್ತಿದೆ. ತಮ್ಮ ಜಾಹೀರಾತು ಸಂಸ್ಕೃತಿಗೆ ಹೆಣ್ಣು ಮತ್ತು ಅವಳ ಸೌಂದರ್ಯವು ಮುಖ್ಯವಾದ ಕೇಂದ್ರ ಮತ್ತು ಈ ಮೂಲಕ ತಮ್ಮ ಉತ್ಪಾದನಾ ಸರಕುಗಳನ್ನು ಮಾರುಕಟ್ಟೆಯಲ್ಲಿ ಕ್ಷಿಪ್ರವಾಗಿ ಮಾರಾಟ ಮಾಡಿ, ಹೆಚ್ಚು ಲಾಭ ಗಳಿಸಬೇಕು ಎಂಬ ತಂತ್ರ ನೈಪುಣ್ಯವು ಇಲ್ಲಿ ಬಯಲಾಗುತ್ತದೆ. ಆದ್ದರಿಂದಲೇ ಪ್ರಪಂಚದ ಎಲ್ಲಾ ವಲಯಗಳಲ್ಲಿಯೂ (ಹೆಣ್ಣು ಮಾತ್ರ) ಸೌಂದರ್ಯ ಸ್ಪರ್ಧೆಗಳಿಗೆ ಹೆಚ್ಚು ಹೆಚ್ಚು ಉತ್ತೇಜನ ದೊರೆಯುತ್ತಿರುವುದು.

ಇಂದು ಬಂಡವಾಳಶಾಹಿ ಪ್ರಭುತ್ವವು ಪ್ರಜಾಪೂರ್ವಕವಾಗಿಯೋ, ಅಪ್ರಜ್ಞೆಪೂರ್ವಕ ವಾಗಿಯೋ ವಿಶ್ವದ ಎಲ್ಲಾ ರಾಷ್ಟ್ರಗಳನ್ನು ಆಳತೊಡಗಿದೆ. ಇದರ ನೆರಳು ರಷ್ಯಾದಂತಹ ಕಮ್ಯೂನಿಷ್ಟ್ ರಾಷ್ಟ್ರಗಳನ್ನು ಒಡೆದಿರುವುದಲ್ಲದೆ, ಜಪಾನ್‌ನಂತಹ ಸಾರ್ವಭೌಮ ರಾಷ್ಟ್ರಗಳ ಸಂಸ್ಕೃತಿಯ ಅನನ್ಯತೆಗೂ ಧಕ್ಕೆ ತರುತ್ತಿದೆ. ಇದರಿಂದ ವರ್ಗರೋಗ ವಿಸ್ತಾರವಾಗುತ್ತಿದೆ. ತಮ್ಮ ಸೋಪಜ್ಞ ಸಂಸ್ಕೃತಿ ಆಕರಗಳು ಮ್ಯೂಸಿಯಂ ವಸ್ತುಗಳಾಗಿ, ಮಾರಾಟದ ಸರಕಾಗಿ ಮಾರ್ಪಡುತ್ತಲೇ ಅವುಗಳ ವಕ್ತಾರರನ್ನು ಜಾಗತಿಕವಾದ ಜಾಹೀರಾತು ಸಂಸ್ಕೃತಿಯ ಎದುರಿನಲ್ಲಿ ಕೀಳರಿಮೆಯನ್ನು ಅನುಭವಿಸುವಂತೆ ಮಾಡುತ್ತಿವೆ. ಇಂತಹ ಮಾನಸಿಕ ದಾಸ್ಯವು ಸಹಜವಾಗಿಯೇ ಬೆಳವಣಿಗೆಯನ್ನು ಕುಂಠಿಸುತ್ತದೆ; ಪಶ್ಚಿಮದತ್ತ ಮುಖ ಮಾಡುವತ್ತ ಪ್ರೇರೇಪಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಯಾವುದೇ ಅನಿಷ್ಟ ತೀರ್ಮಾನಕ್ಕೆ ಸ್ಥಳೀಯ ಸಂಸ್ಕೃತಿಯ ಮತ್ತು ಅದರ ವಕ್ತಾರರು ಮುಂದಾಗುತ್ತಾರೆ. ಈ ಮೂಲಕವಾಗಿ ಪ್ರಜಾಸತ್ತಾತ್ಮಕ ಮೌಲ್ಯ ವ್ಯವಸ್ಥೆಗೆ ಮುಖ ತಿರುವುತ್ತಾ ಮತ್ತೊಂದು ವಿಧವಾದ ಆಧುನಿಕ ಊಳಿಗಮಾನ್ಯ ವ್ಯವಸ್ಥೆಗೆ ತಾವುಗಳು ಮುಂದಾಗುತ್ತಾರೆ. ಇದರ ಭಾಗವಾಗಿಯೇ ಹೆಣ್ಣು ತನ್ನ ನೆಲದ ಸಂಸ್ಕೃತಿಯ ಅನನ್ಯತೆಯನ್ನು ದೂರ ಮಾಡಿ ಜಾಗತೀಕರಣಗೊಳ್ಳುತ್ತಾಳೆ, ತಾನೇ ಜಗತ್ತಾಗುತ್ತಾಳೆ; ತನ್ನ ಸಂಸ್ಕೃತಿಯ ಅನನ್ಯತೆಯ ಮುದ್ರೆಯನ್ನು ಕಳಚಿಕೊಳ್ಳುತ್ತಾಳೆ. ಇದೆಲ್ಲವೂ ನಡೆಯುವುದು ಉಳ್ಳವರ ನೆಲೆಯಲ್ಲಿ ಎಂಬುದು ದುರಂತವಾದರೂ, ಸತ್ಯ.

ಉಳ್ಳವರ ಆಶಯಗಳು ಜಾಹೀರಾತು ಸಂಸ್ಕೃತಿಯಲ್ಲಿ ಪ್ರಕಟಗೊಳ್ಳುತ್ತವೆ. ಇದೇ ಸಮಸ್ತ ವಿಶ್ವದ ಸ್ವರೂಪ ಎಂಬ ಭ್ರಮಾತ್ಮಕ ಸಂಭ್ರಮವನ್ನು ಜನ ಸಾಮಾನ್ಯರಲ್ಲಿ ಉಂಟುಮಾಡುತ್ತವೆ. ಈ ಕ್ರಿಯೆಯಲ್ಲಿ ವಿಜ್ಞೆನ ಮತ್ತು ತಂತ್ರಜ್ಞೆನ ಮೂಲದ ವಿವಿಧ ಸಮೂಹ ಮಾಧ್ಯಮಗಳು ೨೪ ಗಂಟೆಗಳಲ್ಲಿಯೂ ಸಕ್ರಿಯಗೊಂಡಿವೆ. ಹೊಟ್ಟೆ ಬಟ್ಟೆಗಿಲ್ಲದ ಜನ, ಅಸಂಖ್ಯಾತ ಗುಡಿಸಲುಗಳು, ಸಹಸ್ರಮಾನಗಳ ಸಾಮಾಜಿಕ ಶೋಷಣೆ-ಚರಿತ್ರೆ ಇವು ಯಾವುದೇ ಸಮೂಹ ಮಾಧ್ಯಮದ ಜನಪ್ರಿಯ ನೋಟವಾಗಿ ಕಾಣಲು ಸಾಧ್ಯವೇ ಆಗಿಲ್ಲ. ಇವುಗಳ ಅಸ್ತಿತ್ವವು ಸಂಭ್ರಮದ ತೆರೆಯಿಂದಾಚೆಗೆ ಜೀವಂತವಾಗಿರುವುದಾಗಲೀ ವ್ಯಾಪಕವಾಗಿರುವುದಾಗಲೀ ದೃಷ್ಟಿಗೆ ಗೋಚರವಾಗುವುದೇ ಇಲ್ಲ. ಆದ್ದರಿಂದ ಇಂತಹ ಕಿನ್ನರ ಲೋಕಕ್ಕೂ ದೈನಂದಿನ ವಾಸ್ತವ ಜಗತ್ತಿಗೂ ಇರುವ ಅಂತರವನ್ನು ನಮ್ಮ ಊಹೆಗಾದರೂ ನಿಲುಕಿಸಿಕೊಳ್ಳಬೇಕಾದ್ದು ಈ ಬರಹದ ಆಶಯಗಳಲ್ಲೊಂದು ಎಂದು ಬಾವಿಸಿದ್ದೇನೆ.

ಹೀಗೆ ಉಳ್ಳವರ ಪ್ರಪಂಚದ ಓಟದಲ್ಲಿ ಜಗತ್ತಿನ ಬಹುತೇಕ ಜ್ಞೆನವೂ ಅದರ ಬಲವಾಗುತ್ತಾ ಮತ್ತೊಂದು ಆಕೃತಿಯ ಕತ್ತಲೆಯು ನಮ್ಮನ್ನು ಆವರಿಸುವಂತೆ ಮಾಡುತ್ತಿದೆ. ಇಂತಹ ಕತ್ತಲೆಯಲ್ಲಿ ದೈಹಿಕ-ಮಾನಸಿಕವಾಗಿ ಬತ್ತಲೆಯಾಗುವ ಹೆಣ್ಣು ಸೌಂದರ್ಯೋದ್ಯಮದ ಮೂಲ ಸರಕಾಗಿ ಮಾರ್ಪಡುತ್ತಿದ್ದಾಳೆ. ಹಿಂದೆ ಹೇಳಿದಂತೆ ಇದು ಜಗತ್ತಿನ ಎಲ್ಲಾ ವಲಯಗಳಿಗೂ ವಿಸ್ತರಿಸುತ್ತಿರುವುದರಿಂದ ಹೆಣ್ಣಿನ ಸೌಂದರ್ಯವು ಅಂತರರಾಷ್ಟ್ರೀಯ ಸೌಂದರ್ಯೋದ್ಯಮದ ಹೊಸ ಪರಿಕಲ್ಪನೆಗೆ ನಾಂದಿ ಹಾಡುತ್ತಿದೆ.

ಹೀಗೆ ಖಾಸಗಿ ಮೂಲದ ಬಂಡವಾಳಶಾಹಿ ವ್ಯವಸ್ಥೆಯ ಅನೇಕ ಕೂಸುಗಳಲ್ಲಿ ಒಂದಾದ ಸೌಂದರ್ಯೋದ್ಯಮವು ಜನಪರ ಚಿಂತಕರ ನೆಮ್ಮದಿಯನ್ನು ಮತ್ತಷ್ಟು ಕಡಿಮೆ ಮಾಡಿರುವುದು ‘ಸಮಕಾಲೀನ ಪ್ರಗತಿ’ ಎಂಬ ಹೆಸರಿನ ಹೊಸ ವಿಪರ್‍ಯಾಸಗಳಲ್ಲಿ ಒಂದು ಎನಿಸಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುಕ್ತಿ
Next post ಸುಖ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys