ದೇವಯ್ಯ ಹರವೆ ಅವರ ನನ್ನ ದೃಷ್ಟಿಯಲ್ಲಿ ಮಾರ್ಕ್ಸ್ವಾದ ಮತ್ತು ಸಾಹಿತ್ಯ : ಒಂದು ಪ್ರತಿಕ್ರಿಯೆ
ಕರ್ನಾಟಕದ ದಲಿತ-ಬಂಡಾಯದ ಸಾಹಿತ್ಯಕ-ಸಾಂಸ್ಕೃತಿಕ ಸಂದರ್ಭದಲ್ಲಿ ದೇವಯ್ಯ ಹರವೆ ಅವರದು ಗಮನಾರ್ಹ ಹೆಸರು. ಈ ನಿಟ್ಟಿನಲ್ಲಿ ಪ್ರಸ್ತುತ ಟಿಪ್ಪಣಿಯಲ್ಲಿ ಪ್ರಾತಿನಿಧಿಕವಾಗಿ ಅವರ ಮೇಲ್ಕಂಡ ಲೇಖನವನ್ನು ಗುರುತಿಸಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರಗತಿಶೀಲ ಲೇಖಕರ ಮೇಲೆ ಮಾರ್ಕ್ಸ್ವಾದವು...