Home / ವರ್ತಮಾನ

Browsing Tag: ವರ್ತಮಾನ

ದಿನಾಂಕ ೨೫-೧೨-೧೯೯೪ ರಂದು ನಿಧನರಾದ ಜೈಲ್ ಸಿಂಗ್ ಅವರು ನಮ್ಮ ದೇಶ ಕಂಡ ಅಪರೂಪದ ಅಧ್ಯಕ್ಷರಲ್ಲಿ ಒಬ್ಬರು. ಆದರೆ ಸಕ್ರಿಯ ರಾಜಕೀಯ ದಿಂದ ಮೇಲೇರುತ್ತ ಇಂದಿರಾ ಗಾಂಧಿಯವರ ಕೃಪೆಯಿಂದ ರಾಷ್ಟ್ರಾಧ್ಯಕ್ಷರಾದರೆಂಬ ಕಾರಣಕ್ಕೆ ಅವರ ವ್ಯಕ್ತಿತ್ವದ ಕೆಲವು ...

ನವೆಂಬರ್ ತಿಂಗಳೆಂದರೆ ಕನ್ನಡದ ತಿಂಗಳೆಂದೇ ಪ್ರಸಿದ್ದಿ. ರಾಜ್ಯೋತ್ಸವದ ಈ ತಿಂಗಳಲ್ಲಿ ಕನ್ನಡದ ಬಗ್ಗೆ ಮಾತನಾಡದೆ ಮುಂದಕ್ಕೆ ಹೋಗಲು ಹೇಗೆ ಸಾಧ್ಯ? ಹನ್ನೊಂದು ತಿಂಗಳ ನಿದ್ದೆಗೆ ಬಂದ ಒಂದು ತಿಂಗಳ ಎಚ್ಚರ ವೆಂಬಂತೆ ಈ ನವೆಂಬರ್ ತಿಂಗಳು ಬಂದು ಹೋಗುತ...

ಗಾಂಧೀಜಿಯವರು ದಿನಾಂಕ ೨೫-೧-೧೯೩೫ ರಂದು ‘ಹರಿಜನ’ ಪತ್ರಿಕೆಯಲ್ಲಿ ಹೀಗೆ ಬರೆದರು : “ನನ್ನ ಬದುಕು ಒಂದು ತೆರೆದ ಪುಸ್ತಕ. ನಾನು ರಹಸ್ಯವಾಗಿ ಇಡುವುದು ಏನೂ ಇಲ್ಲ.” ತಾವು ಬರೆದಂತೆ ಬದುಕಿದ, ಆತ್ಮಸಾಕ್ಷಿಗೆ ಸದಾ ಬದ್ಧವಾದ ಮನುಷ್ಯನಾ...

ಆಗಸ್ಟ್ ತಿಂಗಳು ಮುಗಿಯಿತು; ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ನಡೆಯಿತು; ಕೆಂಪುಕೋಟೆಯ ಮುಂದೆ ಪ್ರಧಾನಿಗಳ ಭಾಷಣ, ಆಯಾ ರಾಜ್ಯಗಳಲ್ಲಿ ರಾಜ್ಯಪಾಲರು-ಮುಖ್ಯಮಂತ್ರಿ ಭಾಷಣಗಳು ಬಿರುಮಳೆಯಲ್ಲಿ ನೆಲದ ಬೀಜಗಳು ಮೊಳಕೆಯೊಡೆಯುವ ಬದಲು ಮಣ್ಣು ಮುಕ್ಕಿದ ...

ಇಂದು ದೇಶದ ತುಂಬಾ ಆರ್ಥಿಕ ಉದಾರೀಕರಣದ ಮಾತು ತುಂಬಿದೆ. ಉದಾರೀಕರಣ ಮತ್ತು ಖಾಸಗೀಕರಣಗಳು ಪರಸ್ಪರ ಒಂದಾಗಿ ಹುಟ್ಟಿದ ಎರಡು ಮುಖಗಳು ಅಥವಾ ಒಂದೇ ಮುಖದ ಎರಡು ಕಣ್ಣುಗಳು. ಖಾಸಗಿ ಬಂಡವಾಳಗಾರರ ಕೈಗೆ ದೇಶದ ಅರ್ಥವ್ಯವಸ್ಥೆಯನ್ನು ಒಪ್ಪಿಸಿ ಆಡಳಿತಾತ್ಮ...

ಆತ್ಮರತಿ ಅಪಾಯಕಾರಿಯಾದದ್ದು. ನಮ್ಮಲ್ಲಿ ಆತ್ಮರತಿ ಮತ್ತು ಆತ್ಮ ವಿಶ್ವಾಸಗಳನ್ನು ಒಂದೇ ಎಂಬಂತೆ ನಂಬಿಸುವ ಆತ್ಮರತಿ ರೋಗಿಗಳು ಇದ್ದಾರೆ. ಆತ್ಮವಿಶ್ವಾಸವು ಮನುಷ್ಯನ ಮಾನಸಿಕ ವಿಕಾಸಕ್ಕೆ ಬೇಕಾದ ಸ್ಥೈರ್‍ಯವನ್ನು ತಂದುಕೊಟ್ಟರೆ, ಆತ್ಮರತಿ ಸ್ವಪ್ರಶಂ...

ನನ್ನ ಗೆಳೆಯನೊಬ್ಬ ಸೈನ್ಯಕ್ಕೆ ಸೇರಿದ. ಆತ ಯುದ್ಧದ ಬಗ್ಗೆ ಹೇಳುತ್ತಿದ್ದ ವಿವರಗಳು ನಿಜಕ್ಕೂ ಕುತೂಹಲಕಾರಿ ಯಾಗಿದ್ದವು; ಅಷ್ಟೇ ಅಲ್ಲ. ಆತಂಕಕಾರಿಯೂ ಆಗಿದ್ದವು. ನಾವು ಸಾಮಾನ್ಯವಾಗಿ ನಮ್ಮ ಸೈನ್ಯದ ಬಗ್ಗೆ ಎಲ್ಲಿಲ್ಲದ ಅಕ್ಕರೆ, ಅಭಿಮಾನ ಹೊಂದಿರುತ...

೧೯೮೨ನೇ ಇಸವಿ ಜೂನ್ ೯ ನೇ ತಾರೀಕು. ದೇವರಾಜ ಅರಸು ಅವರು ವಿರೋಧ ಪಕ್ಷದ ಕೆಲವು ಮುಂದಾಳುಗಳೊಂದಿಗೆ ವಿರೋಧ ಪಕ್ಷಗಳ ಏಕತೆಯನ್ನು ಕುರಿತು ಸಾಕಷ್ಟು ಚರ್ಚೆ ನಡೆಸಿದರು. ನಂತರ ‘ಆತ್ಮೀಯರೊಬ್ಬರ’ ಮನೆಗೆ ಹೋದರು. ಮಧ್ಯಾಹ್ನ ಮಲಗಿದ್ದಲ್ಲೇ ಮೃತರಾದರು! ಎ...

ನಮ್ಮ ದೇಶದಲ್ಲಿ ತುಳಿತಕ್ಕೊಳಗಾದವರ ಬಗ್ಗೆ ಮಾತನಾಡದ ಮಂದಿಯೇ ಕಡಿಮೆ. ವರ್ಣಭೇದ, ಲಿಂಗಭೇದ ಗಳಿಂದ ಹಿಡಿದು ವಿತ್ತಭೇದದ ವರೆಗೆ ಅಸಮಾನತೆಯಲ್ಲಿ ಸಮಾನತೆ ಕಾಣುತ್ತಿರುವ ಈ ಪುಣ್ಯಭೂಮಿಯ ಪಾಡನ್ನು ತಿಳಿಯಬೇಕಾದರೆ ತುಳಿತಕ್ಕೊಳಗಾದವರನ್ನು ನೀನು ನೋಡಿದ...

ದಿನಾಂಕ ೨೧-೫-೧೯೯೪ ರಂದು ಶನಿವಾರ ಬೆಳಗ್ಗೆ ೮-೨೦ ಕ್ಕೆ ದೂರದರ್ಶನದಲ್ಲಿ ವಿಶ್ವಸುಂದರಿ ಸ್ಪರ್ಧೆ ನೇರ ಪ್ರಸಾರ ಪ್ರಾರಂಭವಾಯಿತು. ಮೊದಮೊದಲು ತೀವ್ರಾಸಕ್ತಿಯೇನೂ ಇಲ್ಲದೆ ಆಯ್ಕೆ ವಿಧಾನದ ಬಗ್ಗೆ ಕುತೂಹಲ ಮಾತ್ರದಿಂದ ನೋಡುತ್ತಾ ಕೂತಿದ್ದ ನನ್ನಲ್ಲಿ...

123...5

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...