ಬರಹ

#ಇತರೆ

ಎಲ್ಲಾ ಜನರ ಹೆಸರಿನಲ್ಲಿ….

0

ಪ್ರಜಾಪ್ರಭುತ್ವವೆಂದ ಮೇಲೆ ಜನಗಳ ಪಾತ್ರ ಅಪಾರವಾದುದು. ಜನಗಳ ತೊಡಗುವಿಕೆಯಿಂದಲೇ ಪ್ರಜಾಪ್ರಭುತ್ವದ ಸಾರ್ಥಕತೆ. ಈ ದೃಷ್ಟಿಯಿಂದಲೇ ಅಬ್ರಹಾಂ ಲಿಂಕನ್ ಪ್ರಜಾಪ್ರಭುತ್ವವನ್ನು ವಿವರಿಸುವಾಗ ‘ಜನರಿಂದ ಜನರಿಗೋಸ್ಕರ ರಚಿತವಾದ ಜನಗಳ ಸರ್ಕಾರ’ ಎಂದು ಹೇಳಿದ್ದಾರೆ. ಅಂದರೆ ಸರ್ಕಾರ ಜನರಿಗಾಗಿ, ಜನರೇ ಸರ್ಕಾರವಾಗುವ ಪ್ರಕ್ರಿಯೆ ಪ್ರಜಾಪ್ರಭುತ್ವ. ಇದು ಬೆಟ್ಟದಂಥ ಆದರ್ಶವೆಂಬುದು ನಿಜವಾದರೂ, ಇಂಥ ಆಶಯವನ್ನು ಸಾಕಾರಗೊಳಿಸುವ ಪ್ರಯತ್ನಗಳು ಪ್ರಜಾಪ್ರಭುತ್ವದ ಪ್ರಥಮ ಹೆಜ್ಜೆಗಳಾಗುತ್ತವೆ. […]

#ಇತರೆ

ಭಾವಮೈದುನ

0
Latest posts by ವೀರೇಂದ್ರ ಸಿಂಪಿ (see all)

ಹೆಂಡತಿಯನ್ನು ಅರ್ಧಾಂಗಿಯೆಂದು ಕರೆಯುತ್ತಾರೆ. ಹೆಂಡತಿಯ ಸಹೋದರ ಭಾವಮೈದುನನಾದರೋ ಪೂರ್ಣಾಂಗನೇ ಆಗಿದ್ದಾನೆ. ಹೆಂಡತಿಯನ್ನು ನಾವು ಪ್ರೀತಿಸಬಹುದು ಇಲ್ಲವೆ ಬಿಡಬಹುದು. ಆದರೆ ಭಾವಮೈದುನನನ್ನು ಪ್ರೀತಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಆದಕ್ಕೆಂತಲೇ ಹೇಳುತ್ತಾರೆ. ಸಾರೀ ದುನಿಯಾ ಏಕತರಫ್, ಜೋರುಕಾ ಭಾಯಿ ಏಕತರಫ್ ಎಂದು. ಹೆಂಡತಿಯಾದವಳು ಒಮ್ಮೆ ನಕ್ಕಂತೆ ಮಾಡಿ, ಇನ್ನೊಮ್ಮೆ ಅತ್ತು, ಮಗುದೊಮ್ಮೆ ಮುದ್ದುಕೊಟ್ಟು, ಮತ್ತೊಮ್ಮೆ ಮುನಿಸು ತೋರಿ, ಒಮ್ಮೆ ಸಿಟ್ಟು […]

#ಇತರೆ

ಮಗುವನ್ನು ಹುಡುಕಿಕೊಡಿ

0

ನನ್ನನ್ನು ಅನೇಕ ಸಾರಿ ಕಾಡುವ ಪ್ರಶ್ನೆಯೆಂದರೆ- ಈ ಮನುಷ್ಯ ಮನಸ್ಸಿಗೆ ಏನಾಗುತ್ತಿದೆ – ಎಂಬುದು. ಪರಿಸರ ಮಾಲಿನ್ಯದ ಬಗ್ಗೆ ಸಾಕಷ್ಟು ಮಾತನಾಡುತ್ತಿರುವ ಇಂದಿನ ದಿನಗಳಲ್ಲಿ ಮಾನಸಿಕ ಮಾಲಿನ್ಯವು ಮುಖ್ಯ ಪ್ರಶ್ನೆಯಾಗಿ ಕಾಡಿಸಬೇಕೆಂದು ನಾನು ಬಯಸುತ್ತೇನೆ. ಮಲಿನ ಮನಸ್ಸುಗಳಲ್ಲಿ ಬಿಸಿಗುಡುವ ವಿಷಯ ವಯ್ಯಾರಕ್ಕೆ ಬೆರಗಾಗುವವರು ಹೆಚ್ಚಿದಂತೆಲ್ಲ ಈ ಪ್ರಶ್ನೆಯ ಗಾಢತೆಯೂ ಹೆಚ್ಚುತ್ತದೆ. ಸಣ್ಣತನದ ಪರಮಾವಧಿಯಲ್ಲಿ ಪುರುಷಾರ್ಥ ಸಾಧಿಸುವ […]

#ವ್ಯಕ್ತಿ

ಮಾವೊ : ನೂರು ವರ್ಷದ ನೆನಪು

0

ಚೀನಾದಲ್ಲಿ ಅದ್ಭುತ ಬದಲಾವಣೆ ತಂದು ಸಮತಾ ಸಮಾಜದ ತಾತ್ವಿಕ ತಿರುಳಿಗೆ ಜೀವ ಕೊಟ್ಟ ಧೀಮಂತ ನಾಯಕ ಮಾವೋತ್ಸೆತುಂಗ್ ಅವರ ಜನ್ಮ ಶತಾಬ್ದಿಯ ವರ್ಷ ೧೯೯೪. ಜನ್ಮ ಶತಾಬ್ದಿಯ ಸನ್ನಿವೇಶ ವಿಚಿತ್ರವಾಗಿದೆ. ಚೀನಾದಲ್ಲಿ ಮಾರುಕಟ್ಟೆ ಆರ್ಥಿಕ ನೀತಿ ಅನುಷ್ಠಾನಕ್ಕೆ ಬಂದಿದೆಯೆಂದು ಪ್ರಚಾರ ಮಾಡಲಾಗುತ್ತಿದೆ. ಸೋವಿಯತ್ ಯೂನಿಯನ್ ವಿಘಟನೆ ಗೊಂಡಿದೆ. ಪ್ರಪಂಚದಲ್ಲಿ ಮಾರ್ಕ್ಸ್‌ವಾದದ ಕತೆ ಮುಗಿಯಿತೆಂದು ಅನೇಕರಿಗೆ ಭ್ರಮಾತ್ಮಕ […]

#ಇತರೆ

ಕಾಶ್ಮೀರದ ಒಂಟಿ ಬದುಕು

0

ಕಾಶ್ಮೀರದ ಬಗ್ಗೆ ಇತ್ತೀಚೆಗೆ ಒಂದಲ್ಲ ಒಂದು ಸುದ್ದಿ ಇರುತ್ತದೆ. ಕೈಗೆ ಕೋವಿ ತೆಗೆದುಕೊಂಡ ಮುಸ್ಲಿಂ ಉಗ್ರಗಾಮಿಗಳು ಒಂದುಕಡೆ ಕಾಶ್ಮೀರವನ್ನು ಕೇಂದ್ರವಾಗಿಟ್ಟುಕೊಂಡು ಬೇಳೆ ಬೇಯಿಸಿ ಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಹಿಂದೂ ಮೂಲಭೂತವಾದಿಗಳು ಕಾಶ್ಮೀರ ಸಮಸ್ಯೆಯನ್ನು ಬಂಡವಾಳ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಉಭಯ ಧರ್ಮೀಯ ಮೂಲಭೂತವಾದಿಗಳು ಮತ್ತು ರಾಜಕೀಯ ತಂತ್ರಿಗಳು ಕಾಶ್ಮೀರವನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಾ ಬಂದ ಫಲವಾಗಿ ಸಮಸ್ಯೆಗಳ […]

#ಇತರೆ

ಹೀಗೊಂದು ಮಗುವಿನ ಘಟನೆ

0

ಇತ್ತೀಚೆಗೆ ಒಂದು ಘಟನೆ ನಡೆಯಿತು. ಇದೇನು ಸುದ್ದಿ ಮೌಲ್ಯದ ಘಟನೆಯಲ್ಲ. ಪತ್ರಿಕೆಗಳ ಯಾವುದೇ ಪುಟದಲ್ಲಿ ಪ್ರಕಟಗೊಳ್ಳುವ ಘಟನೆಯಲ್ಲ. ಇದು ಸಾರ್ವಜನಿಕ ಚರ್ಚೆಯ ವಸ್ತುವೂ ಅಲ್ಲ. ಯಾಕೆಂದರೆ ಇದು ರಾಜಕೀಯ ನಾಯಕರಿಗೆ ಸಂಬಂಧಿಸಿದ್ದಲ್ಲ. ಸಾಂಸ್ಕೃತಿಕ ವ್ಯಕ್ತಿತ್ವಗಳ ಸುದ್ದಿಯಲ್ಲ. ಮಠಾಧಿಪತಿಗಳ ಮಾತಲ್ಲ. ಇದು ಒಂದು ಮಗುವಿಗೆ ಸಂಬಂಧಿಸಿದ ಘಟನೆ. ‘ಪ್ರಸಿದ್ಧ ಪುರುಷರ’ ಮಗುವೂ ಅಲ್ಲವಾದ್ದರಿಂದ ಈ ಘಟನೆ ಬೆರಳೆಣಿಕೆಯ […]

#ವ್ಯಕ್ತಿ

ತಸ್ಲೀಮಾ ಪ್ರಕರಣ

0

ಬಾಂಗ್ಲಾದೇಶದ ಬೀದಿಗಳಲ್ಲಿ ಬೆಂಕಿ ಬಿದ್ದಿದೆ. ಈ ಬೆಂಕಿ ನಕಾರಾತ್ಮಕ ಉರಿಯನ್ನು ಹರಡುತ್ತ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ ಅವರ ಪ್ರಾಣವನ್ನು ಕೇಳುತ್ತಿದೆ. ಹತ್ಯೆ ಮತ್ತು ಆತ್ಮಹತ್ಯೆಗೆ ಪ್ರಸಿದ್ಧರಾದ ಧಾರ್ಮಿಕ ಮೂಲಭೂತವಾದಿಗಳು ಯಾವುದೇ ಧರ್ಮಕ್ಕೆ ಸೇರಿದ್ದರೂ ಅಂತಿಮ ಗುರಿ ಪ್ರಾಣವೇ ಆಗಿರುತ್ತದೆ. ಬೀದಿಯಲ್ಲಿ ಬೆಂಕಿ ಹಾಕಿ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಯಸುವವರು ಬೇರೇನನ್ನೂ ಕೇಳಲು ಸಾಧ್ಯವಿಲ್ಲ. ಬೀದಿಯಲ್ಲಿ ಬದುಕು […]

#ಇತರೆ

ವೀರಪ್ಪನ್ ಎಲ್ಲಿದ್ದಾನೆ, ನೀವು ಕಂಡಿರಾ ನೀವು ಕಂಡಿರಾ?

0

ವೀರಪ್ಪನ್ ಈಗ ರಾಷ್ಟ್ರ ಪ್ರಸಿದ್ಧಿ ಪಡೆದ ಕಾಡುಗಳ್ಳ, ಕಾಡುಗಳ ನಡುವೆ ಊರುಗಳು ಹುಟ್ಟಿ ಸಂಸ್ಕೃತಿಯ ಸ್ಥಿತ್ಯಂತರ ಸಂಭವಿಸುತ್ತ ಬಂದಂತೆ ಕಾಡು ನಿಗೂಢವೂ ದುರ್ಗಮವೂ ಆದ ಒಂದು ಕಷ್ಟ ಕೇಂದ್ರವಾಯಿತು. ಹಾಗೆ ನೋಡಿದರೆ ನಮ್ಮ ಸಂಸ್ಕೃತಿಯ ಮೊದಲ ಮಾದರಿ ‘ಕಾಡು’. ಇಲ್ಲಿದ್ದ ಸಸ್ಯರಾಶಿಯಾಗಲಿ, ಬೆಟ್ಟಗುಡ್ಡಗಳಾಗಲಿ ಪಟ್ಟಭದ್ರರ ಪಾಳೇಪಟ್ಟುಗಳಾಗಿಲ್ಲದ ಸನ್ನಿವೇಶದಲ್ಲಿ ಸಮಾನತೆಯ ಆಧಾರದಲ್ಲಿ ಬದುಕು ಪ್ರಾರಂಭವಾದದ್ದು ಈ ಕಾಡಿನಲ್ಲಿ, […]

#ಇತರೆ

ಜಾತಿಗಳೇ ಜೈಲಾಗದಿರಿ

0

ಇತ್ತೀಚಿನ ದಿನಗಳಲ್ಲಿ ಹಿಂದೆಂದಿಗಿಂತ ಹೆಚ್ಚಾಗಿ ಜಾತಿ ಸಂಬಂಧೀ ಸಂಗತಿಗಳು ಬೀದಿಗೆ ಬಂದು ಬಾಯಿ ಮಾಡುತ್ತಿವೆ. ಜಾತಿ ಎನ್ನುವುದು ಕೆಲವರಿಗೆ ಅಭಿಮಾನದ, ಇನ್ನು ಕೆಲವರಿಗೆ ಅವಮಾನ ವಿಷಯವಾಗಿ ಪರಿಣಮಿಸಿದ ಇಂಡಿಯಾ ವಿಷವರ್ತುಲದಲ್ಲಿ ಜಾತಿಯು ಸಾಮಾಜಿಕ ವಾಸ್ತವದ ವಿಶ್ಲೇಷಣೆಗೆ ಸಾಧನವಾಗಬೇಕಾದ್ದು ಅಧ್ಯಯನ ಅನಿವಾರ್ಯತೆ. ಆದರೆ ಇದೇ ಜಾತಿ ಕೇವಲ ಸವಲತ್ತುಗಳ ಸಾಧನವಾಗಿ ಬಳಕೆಯಾಗುತ್ತಿದ್ದು ಅಭಿಮಾನ ಮತ್ತು ಅವಮಾನದ ಅರ್ಥ […]

#ವ್ಯಕ್ತಿ

ಕಪ್ಪು ಜನರ ವಿಜಯ

0

ದಕ್ಷಿಣ ಆಫ್ರಿಕಾದ ಕಪ್ಪು ಜನರ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ಬದುಕಿಸಿಕೊಂಡು ಬೆಳೆದ ನೆಲ್ಸನ್ ಮಂಡೇಲಾ ಅವರು ಈಗ ಆ ದೇಶದ ಮೊಟ್ಟ ಮೊದಲ ಕರಿ ಅಧ್ಯಕ್ಷ. ಕಪ್ಪು ಬಣ್ಣವನ್ನು ಕಳಂಕವೆಂಬಂತೆ ಕಾಣುವ ನಮ್ಮ ದೇಶವನ್ನು ಒಳಗೊಂಡಂತೆ ಜಗತ್ತಿನ ಸ್ವಾತಂತ್ರ್ಯ ಪ್ರಿಯರೆಲ್ಲ ಈ ಕಪ್ಪು ವಿಜಯಕ್ಕೆ ಸಂಭ್ರಮಿಸುತ್ತಿದ್ದಾರೆ. ಬಿಳಿಯರ ಆಳ್ವಿಕೆ ಕೊನೆಗೊಂಡದ್ದಕ್ಕಾಗಿ ಖುಷಿಪಡುತ್ತಿದ್ದಾರೆ. ತಮ್ಮ ಹೋರಾಟದ ಫಲವಾಗಿ […]