ಹೊಗೆಯ ಗಾಡಿ

ನೊಗವನೆತ್ತಿನ ಕೊರಳೊಳಿಡುವ ಪಾಡಿಲ್ಲ, ಬಿಗಿದ ಕುದುರೆಯ ಹೂಡುವಾಯಾಸವಿಲ್ಲ, ಮಿಗೆ ಕಾದ ನೀರ ಹಬೆಯಿಂದ ಬಲು ಬೇಗ ಹೊಗೆಯ ಗಾಡಿಯು ನೋಡು ಹೋಗುತಿಹುದೀಗ. ಸೋಲಿಪುದು ಗಾಳಿಯನ್ನು ಬಲು ವೇಗದಿಂದ; ಮೇಲೆ ಹೊಗೆಯುಗುಳುತಿಹುದೀ ಕೊಳವೆಯಿಂದ; ಕಾಲಕ್ಕೆ ಸರಿಯಾಗಿ...

ಉದ್ಯಮ

ಬಿಡಬೇಡ! ಕಬ್ಬಿಣದ ಮೊಳೆಯನ್ನು ಜಡಿಯೈ! ಬಿಡಬೇಡ! ಆಣಿಯಾ ತಲೆಗೊಂದು ಹೊಡಿಯೈ! ಬಿಡಬೇಡ! ಬಲದಿಂದ ಕಬ್ಬಿಣವ ಹಿಡಿಯೈ! ಬಿಡಬೇಡ! ಕಾದಿರಲು ಸಲೆಸಾಗ ಬಡಿಯೈ! ಕೊಟ್ಟು ಮನವನು ಕೆಲಸಮಾಡು ಸರಿಯಾಗಿ, ಮಟ್ಟಮೊದಲೇರಬೇಕೆಲೆ ತುದಿಗೆ ಹೋಗಿ, ಕಟ್ಟಿ ಕೈಗಳ...

ಇಡು ಭಕ್ತಿ, ನಡೆ ಮುಂದೆ

ಅನುದಿನವು ಇಡು ಭಕ್ತಿಯನ್ನು ದೇವನಡಿಯಲ್ಲಿ ಅನುಸರಿಸು ಸನ್ಮಾರ್‍ಗವನೆ ನಿತ್ಯ ಮುದದಿ. ಎತ್ತಲುಂ ಕತ್ತಲೆಯು ಸುತ್ತಿಹುದು ದಾರಿಯನು ಕಿತ್ತುಬಿಡು ಭಯವನ್ನು, ಎತ್ತು ಪೌರುಷವಾ. ಅತ್ತಿತ್ತ ಕದಲದಿರು, ಚಿತ್ತವನು ಸ್ಥಿರಗೊಳಿಸು, ಎತ್ತರದೊಳಿದೆ ತಾರೆ, ಉತ್ತಮದಿ ನಡಿಸಲ್. ಕಡು...

ಸ್ಥಿರ ಪ್ರಯತ್ನ

ಮರಳಿ ಯತ್ನವ ಮಾಡು! ಮರಳಿ ಯತ್ನವ ಮಾಡು! ತೊರೆಯದಿರು ಮೊದಲು ಕೈ ಗೂಡದಿರಲು. ಹಿರಿದು ಧೈರ್‍ಯವ ಹಾಳು! ತೊರೆಯದಿರು, ತೊರೆಯದಿರು! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು...

ಎಂಟು ಬೇಡರು

ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ! ಕತ್ತು ಕೊಯ್ಕರ ಕೂಡೆ ನಂಟುಬೇಡತನ! ಉತ್ತಮೋತ್ತಮರಲ್ಲಿ...

ಆಡಿನಾ ಮರೀ!

ಆಡಿನಾ ಮರೀ, ಆಡ ಬಾರೆಲೆ! ಓಡ ಬೇಡೆಲೆ, ನೋಡಿ ನನ್ನನು! ಅರಳಿ ಎಲೆಯನೂ, ಹಲಸಿನೆಲೆಯನೂ, ಹುರುಳಿ ಕಡಲೆಯಾ, ಕಲಸಿ ಕೊಡುವೆನು. ಮಾತನಾಡದೇ, ನನ್ನ ನೋಡದೆ, ಏತಕ್ಹೋಗುವೆ? ಆಡಿನಾ ಮಗೂ! ***** (ಕವಿಶಿಷ್ಯ)

ಸಂಜೆಯ ಹಾಡು

ಹಗಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ; ಖಗ ಹಾರಿತು ಗೂಡಿನ ಒಳಗೆ; ಜಗವೆಲ್ಲಾ ಬೆಳಗಿತು ದೀಪವು ಬೆಳಗೆ, ಗಗನಾಂಗಣದಲ್ಲಿ ಉಡು ತೊಳಗೆ; ಮೃಗವೆಲ್ಲಾ ಅಲೆವವು ಬೆಟ್ಟದ ಕೆಳಗೆ; ಹೊಗುತಿರುವುದು ಕತ್ತಲೆ ಇಳೆಗೆ. ಓ-ಮಗುವೇ, ನೀ ಸಂಜೆಯ...

ಜೋಗುಳ ಹಾಡು

ಜೋಗುಳ ಹಾಡನ್ನು ಲಾಲಿಸು, ಜೋ! ಜೋ! ತೂಗುವೆ ತೊಟ್ಟಿಲ, ಮಲಗಿರು, ಜೋ! ಜೋ! ಸುಮಲತೆಗಳ ಪರಿಮಳವ ಬಿತ್ತರಿಸಿ, ಕಮಲದ ಕೋಮಲ ಗಂಧವ ಬೆರಸಿ, ಮಂದ ಮಾರುತವು ಬೀಸುತ್ತಿರಲಿನಿಸು, ತಂದೆ, ತಂದಿಹೆನೊಂದು ಮುದ್ದಿನ ಕನಸು. ಮೊದಲೆವೆಗಳನು...

ಜೋಗುಳ

ಚಂದ್ರ ಬಿಂಬದ ಮೇಲೆ ಕಂದು ಕಾಣುತಲಿಹುದು, ಕಂದ ಮುದ್ದನ ಅಚ್ಚ ನಿಡು ಹಣೆಗೆ ಜೋ! ಕಂದ ಮುದ್ದನ ಅಚ್ಚ ನಿಡು ಹಣೆಗೆ ತಾಯ್ತರಳೆ ಚಂದದಿಂ ಬೊಟ್ಟಿಟ್ಟ ಕತ್ತುರಿಗೆ, ಜೋ! ಹೂವು ಹೆಚ್ಚಿನದಾಯ್ತು, ಮಾವು ಮೆಚ್ಚಿನದಾಯ್ತು,...

ತೂಗುವೆ ತೊಟ್ಟಿಲ

ತೂಗುವ ತೊಟ್ಟಿಲ ಜೋಗುಳ ಹಾಡಿ, ಕೂಗದೆ ಮಲಗೆನ್ನ ಮುದ್ದಿನ ಮೋಡಿ, ಜೋ ಜೋ ತುಂಬಿ ಪವಡಿಸಿತು ಎಸಳ ಹೂಗಳಲಿ, ಗೊಂಬೆ! ನಿನ್ನಯ ಕಣ್ಣಿನೆವೆ ಸೆರೆಗೊಳಲಿ, ರೆಂಬೆ ಚಿಗುರೊಳಡಗಿತು ಪಿಕದುಲಿಯು, ಸೋಂಬನಾಗಲಿ ನಿನ್ನ ತುಟಿ ಚಿಲಿಪಿಲಿಯು....