
ಹೋಗಬೇಕು, ಹೋಗಿ ನೋಡಬೇಕು. ನೋಡಿ ನಾಲ್ಕು ಸಾಂತ್ವನದ ಮಾತು ಹೇಳಿ ಬರಬೇಕು ಎಂದು ಪ್ರತಿದಿನವೂ ಅನ್ನಿಸುತ್ತದೆ. ಹೃದಯ ಹೋಗು ಹೋಗು ಎನ್ನುತ್ತದೆ. ಮನಸ್ಸು ಒಮ್ಮೊಮ್ಮೆ ತಿರುಗೇಟು ಹಾಕುತ್ತದೆ. ಮನಸ್ಸಿಗೇಕೆ ಹೃದಯದ ಭಾಷೆ ಅರ್ಥವಾಗುವುದಿಲ್ಲ? ಅಥವಾ ಅ...
ಅವಳನ್ನು ನಾನು ಭೇಟಿಯಾದದ್ದು ಫೀಲ್ಡ್ ಸ್ಟಡಿಗೆ ಹೋಗಿದ್ದಾಗ. ಹೆಚ್ಚೆಂದರೆ ಮೂವತ್ತರ ಹರೆಯ. ದೃಡಕಾಯದ ಯಾರನ್ನೂ ಆಕರ್ಷಿಸಬಲ್ಲ ಮೈಕಟ್ಟಿನ ಕೃಷ್ಣ ವರ್ಣದ ಸುಂದರಿ. ರಿಸರ್ಚ್ ಗೈಡ್ ಏಕಾಕಿ ವಿಧವೆಯರನ್ನು ಸಂದರ್ಶಿಸಿ ಡೆಸರ್ಟೇಶನ್ ಸಿದ್ಧಪಡಿಸಬೇಕೆಂದ...
ಅವನು ಯೋಚಿಸುತ್ತಾ ಕೂತಿದ್ದ. ಮನೆ ಗುಡಿಸದೇ ಎಷ್ಟೋ ದಿವಸಗಳಾಗಿದ್ದವು. ಈ ಗೋಡೆಯೆಲ್ಲ ಯಾಕೆ ಹೀಗೆ ನಿಂತಿದೆ? ಇದು ತನ್ನ ಮೇಲೆ ಕುಸಿದು ಬೀಳಬಾರದೆ? ರಾತ್ರೆ ತನಗೆ ನಿದ್ದೆ ಬಂದಾಗ ಅಲ್ಲೇ ಹೃದಯ ಸ್ತಂಭನವಾಗಿ ತಾನು ಸತ್ತು ಹೋಗಬಾರದೆ ಎಂದು ಅವನಿಗೆ ...
“ದಶರಥನನ್ನು ಪೋಲಿಸರು ಹಿಡಿದುಕೊಂಡು ಹೋದರು.” ಎಂದು ಶಾಲೆಯಿಂದ ಬಂದ ತಮ್ಮ ವರದಿ ಒಪ್ಪಿಸಿದಾಗ ನನಗೆ ಖುಷಿಯಾಯಿತು. ಬಡ್ಡೀ ಮಗನಿಗೆ ನಾಲ್ಕು ಬೀಳಬೇಕು. ನನ್ನ ಮಾತಿಗೆ ಒಮ್ಮೆಯೂ ಬೆಲೆ ಕೊಟ್ಟವನಲ್ಲ. ಪೋಲಿಸರು ಅಂಡಿಗೆ ತುಳಿದಾಗ ತಾನಾ...
ಕಾಲೇಜು ಸೇರಿದಂದಿನಿಂದ ಅವನಿಗೆ ಮನಃಪೂರ್ವಕ ವಾಗಿ ನಗುವುದು ಮರೆತೇ ಹೋಗಿದೆ. ಬೃಹತ್ ಕಟ್ಟಡದ ಬೃಹತ್ ಕೋಣೆಯೊಳಗೆ ಬೃಹದಾಕಾರದ ಕಪಾಟುಗಳಲ್ಲಿ ಡಬ್ಬದೊಳಗೆ ಅದುಮಿಟ್ಟ ಗೋಧಿ ಹಿಟ್ಟಿನಂತೆ ಪುಸ್ತಕಗಳು! ಕೆಲವಂತೂ ಮಣಭಾರ. “ಈ ಆಥರಿನ ಈ ಪುಸ್ತಕದ...
ಇದು ನಮ್ಮ ಅಜ್ಜ ಹೇಳುತ್ತಿದ್ದ ಕಥೆ. ಅವರ ಕಾಲದಲ್ಲಿ ಊರಿನ ದೊಡ್ಡವರೆಂದರೆ ಪಟೇಲರು. ಅವರು ಸುಪ್ರೀಂ ಕೋರ್ಟು ಇದ್ದ ಹಾಗೆ. ಅವರಿಗೆ ಯಾರೂ ಎದುರಾಡುವಂತಿಲ್ಲ. ಎಲ್ಲಾ ವಿಷಯಗಳಲ್ಲೂ ಅವರದ್ದೇ ಅಂತಿಮ ತೀರ್ಮಾನ. ಅದು ಬ್ರಿಟಿಷರ ಕಾಲವಾದುದರಿಂದ ಊರಿನ ...
ದಿನವಿಡೀ ಭುವಿಯನ್ನು ಬಿಸಿಲಿನ ಜಳದಿಂದ ತೋಯಿಸಿದ್ದ ಸೂರ್ಯ ನಿಧಾನವಾಗಿ ಪಶ್ಚಿಮದಲ್ಲಿ ಮುಳುಗುತ್ತಿದ್ದ. ಸೂರ್ಯನೆಲ್ಲಾದರೂ ಮುಳುಗುವುದು ಸಾಧ್ಯವೆ? ಭೂಮಿಯ ಒಂದು ಮೈಯನ್ನು ಕತ್ತಲೆ ಮಾಡಿ ಮತ್ತೊಂದನ್ನು ಮುತ್ತಿ ತೋಯಿಸುವ ಸೂರ್ಯನ ಈ ಚಕ್ಕಂದ ಅದೆಷ್...
ರಶ್ಮಿಗೆ ಆ ಮದುವೆ ಇಷ್ಟ ಇರಲಿಲ್ಲ, ಹಾಗಂತ ಮದುವೆಯೇ ಬೇಡವೆಂದವಳಲ್ಲ ಅವಳು. ಆದರೆ ಸೈನಿಕನನ್ನು ಮದುವೆ ಯಾದರೆ ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಸಂಸಾರ ಮಾಡಲು ದೊರೆಯುವುದು. ಉಳಿದ ತಿಂಗಳುಗಳಲ್ಲಿ ಪತಿರಾಯ ಯಾವಾಗ ಬಂದನೆಂದು ತಾನು ಕಾಯಬೇಕು. ...
























