Home / ನಿನ್ನೆಗೆ ನನ್ನ ಮಾತು

Browsing Tag: ನಿನ್ನೆಗೆ ನನ್ನ ಮಾತು

ಇವರು ಹಿರಿಯರು ತಾವರಿಯದ ಹೊನ್ನು ಕೊಪ್ಪರಿಗೆಗಟ್ಟಲೆ ಇದೆಯೆಂದು ಸುತರಾಂ ಅರಿಯರು ಎಳೆಯರು ಅದರ ಮಾತಾಡಿದರೊ ಇವರ ಬಾಯಿಂದ ಉರಿಯ ಮಳೆ ಕೆಸರ ಹೊಳೆ ಕಣ್ಣೆಲ್ಲ ಬೆಂಕಿಬಳೆ. ನದಿ ಹೊರಳಿದ್ದಕ್ಕೆ ನೆಲ ಕೆರಳಿದ್ದಕ್ಕೆ ಇಷ್ಟು ದಿನ ನಿಂತ ಬಂಡೆ ಈಗ ತಳ ಧಿಕ...

ನೆನಪಿನ ಕಾಡು ಸುತ್ತಲೂ ಹಬ್ಬಿ ಎತ್ತಲೂ ಸುತ್ತ ರಾಗಗಳು ವರ್ತಮಾನಕ್ಕೆ ಚಿತ್ರದ ಹಂಗೆ? ಅವೆಲ್ಲ ಬರಿಯ ಹೃದ್ರೋಗಗಳು ಸತ್ತ ನಾಗಗಳು – ಪಟ್ಟೆನಾರುಗಳು ಛಲಕ್ಕೆ ಬಿದ್ದ ಸರ್‍ಪಧ್ವಜನ ವಿಕಾರ ರೂಪಿನ ಊರುಗಳು ನಾಳೆ ಇವತ್ತಿಗೆ ಕೊಡುವ ಈ ಅರ್ಥ ಇವತ...

ಒಮ್ಮೊಮ್ಮೆ ಎವೆಕಳಚಿ ಕೂರುತ್ತೇನೆ ಒಬ್ಬನೇ. ನಿಧಾನ ಇಳಿಯುತ್ತೇನೆ : ಅಪ್ಪನ ತಲೆ ಅಜ್ಜನ ಎದೆ ಮಾಸಿದ ಮುಖಗಳ ಕಟಿ ತೊಡೆ ನಡೆ ಬಹಳ ಬೇಕಾಗಿಯೂ ತಿಳಿಯದ ಹೆಡೆ ; ಇಳಿ ಇಳಿಯುತ್ತ ಸದ್ದಿಲ್ಲದೆ ಸುತ್ತ ಹುತ್ತ ಏಳುತ್ತ ಬೆಳಕು ತೊದಲುತ್ತದೆ ನೆನಪು ಮಾಸುತ...

ಬಂಗಾಳಕ್ಕೆ ಬಾಲ್ಯದಿಂದ ಬೆಳಕಿನ ಕನಸು, ಎಳೆದ ಗೆರೆ, ಬರೆದ ಅಕ್ಷರ, ಹರಿದ ದನಿ ಎಲ್ಲದರಲ್ಲಿ ಅದನ್ನೇ ಅರಸುವ ಮನಸು, ಆಕಾಶದಂಗಳದಲ್ಲಿ ಬಿಕ್ಕಿದ ಅಕ್ಕಿಕಾಳನ್ನೆಲ್ಲ ಹೆಕ್ಕಿ ತರುವ ಹಬ್ಬಯಕೆ ಈ ಹಕ್ಕಿಗೆ, ಹೀಗಿದ್ದೂ ಅದನ್ನು ಸುತ್ತಿ ನಿಂತ ಪಂಜರ ಬಿರ...

ಮೈ ತಪ್ಪೆ ಮನ ತಪ್ಪೆ? ಎರಡೂ ಕೂಡಿ ಕುಣಿದ ಗಣಿತದ, ತಿಂದ ಸಿಹಿ ಖಾರ ಬೇರಿಗೆ ಜಾರಿ ಚೀರಿದ ಚಿಲುಮೆಯ ಸುಖ ತಪ್ಪೆ ? ಭಗವದ್ಗೀತೆಯ ಹಿಂದೆ ಮುಂದೆಯೇ ನೂರು ಹಗರಣ ಸಮತೆ ಶಾಂತಿ ಶಿಸ್ತಿನ ನಡುವಿನಲೇ ಥಟ್ಟನೆ ಜಗಣ! ಏ ಚೆನ್ನೆ, ಈ ಸೀ ಕೆನ್ನೆ ಹೆಗಲಡಿ ಹಬ...

ನಡುರಾತ್ರಿಯ ನಾಭಿಯಲ್ಲಿ ನೆಲ ಜಲ ಮಾತಾಡಿತ ? ಹಗಲಿನ ಹದ್ದುಗಳು ಹಾರಿ ಹಮ್ಮಿಗೆ ಗದ್ಗದ ಮೂಡಿ ತರ್ಕ ಚಿತೆಗೆ ಬಿದ್ದಿತ ? ತಳದ ಹುತ್ತ ಬಾಯಿ ತೆರೆದು ನಿದ್ದೆಯಿದ್ದ ನಾಗರಾಗ ಮೂಕಸನ್ನೆ ತಾಕಲಾಡಿ ಎಚ್ಚರಕ್ಕೆ ಚೆಲ್ಲಿತ ? ಬಾನಿನ ಮಹೇಂದ್ರಕಾಯ ಅಸಂಖ್ಯ...

ಬೆಟ್ಟದ ನೆತ್ತಿಗೆ ಕಿರೀಟವಿಟ್ಟ ಬಿಸಿಲು ಕಪ್ಪಗೆ ದೂರ ನೆಲಕ್ಕೆ ಜಾರಿದ ಮುಗಿಲು ಮತ್ತೆ ಮತ್ತೆ ಮೇಲೆ ಚಿಗಿವ ಆಲದ ಬಿಳಲು ಬಿಕ್ಕುತ್ತವೆ ಹಠಾತ್ತನೆ ನಿನ್ನ ಮುಖ ಕೈಕಾಲು ಹೊಳೆದ ಗಳಿಗೆ ಮೈಯುದ್ದ ಬೆಳೆದು ಪರವಶ ನೀನು ಬೆಳೆದ ಗಳಿಗೆ ಕೊರಳುಬ್ಬಿ ಬಂದು...

ಅಡ್ಡ ಬ್ರಾಹ್ಮಣರ ಬೀದಿನಡುವಿನ ಉದ್ದನೆ ಗರುಡಗಂಬ ಸುತ್ತಮುತ್ತ ಹತ್ತಾರು ಊರಲ್ಲಿ ಇಲ್ಲದ ಏಕಶಿಲಾಸ್ತಂಭ. ವಠ ವಠಾರದ ನಲ್ಲಿ ಬಚ್ಚಲು ಕಥೆ ಒಲೆ ಉರಿಯದ ವ್ಯಥೆ ಯಾರೋ ನಾರಿ ಕತ್ತಲು ಜಾರಿ ಮಣ್ಣ ಸಂದಿಗಳಲ್ಲಿ ಬಣ್ಣವುರಿದ ಜೊತೆ- ಇಂಥ ಗುಲ್ಲನ್ನೆಲ್ಲ ಇ...

ಮುಕ್ಕಣ್ಣಶೆಟ್ಟಿ ದಯವಿಟ್ಟು ಕೊಟ್ಟ ಅಕ್ಕಿಯಲ್ಲಿ ಚಿಕ್ಕ ಚಿಕ್ಕ ಸಹಸ್ರ ಲಿಂಗಗಳು; ಅಕ್ಕಿಯಷ್ಟೆ ಬಿಳಿ ಉಕ್ಕಿನಷ್ಟು ಭಾರ ಬಿಕ್ಕಿದರೆ ಹೇಗೆ ಚಿಕ್ಕ ಆಲಿಕಲ್ಲನ್ನು ಮುಗಿಲು ಹಾಗೆ ಮಣಿಹರಳು! ಶೆಟ್ಟಿ ಶಿವಭಕ್ತ ಜೊತೆಗೆ ಕವಿರಕ್ತ ಈಗ ಸರ್ಕಾರವೂ ಕುಲುಕ...

ವಿಂಧ್ಯಗಿರಿ ದೇವರು ಕಂದರ್ಪನ ಅವತಾರ ಪಾದಕ್ಕೆ ಕಮಲ ನೆತ್ತಿಗೆ ಚಂದ್ರ, ನಿಂತ ನಿಲುವು ರಾಗವೋ ವಿರಾಗವೋ ರವಿಯೇ ತಾರ ಬುವಿಯೇ ಮಂದ್ರ, ಕೆಳೆಗೆ ಬೆಳೆದ ಗಿಡಮರಗಳ ನಡುವೆ ಊಳುವ ಗಾಳಿಯ ಕರುಣಾಕ್ರಂದ, ಕೊಂಚ ಗದ್ಯ ಇನ್ನೆಲ್ಲ ಪದ್ಯ ಮರ ಹಿಡಿದ ಫಲವಲ್ಲ ಅ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...