ನಕ್ಷತ್ರಗಳು

#ಅನುವಾದ

ಮರೆತು ಹೋಗಬೇಕು ಅಂದುಕೊಳ್ಳುತ್ತೇನೆ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಮರೆತು ಹೋಗಬೇಕು ಅಂದುಕೊಳ್ಳುತ್ತೇನೆ-ಆಗಲ್ಲ. ಹೊರಟು ಹೋಗಬೇಕು ಅಂದುಕೊಳ್ಳುತ್ತೇನೆ-ದಾರಿ ಸಿಗಲ್ಲ. ನನ್ನ ಕಾಲಿಗೆ ರೆಕ್ಕೆ ಇಲ್ಲ- ಆದರೆ ತಲೆಯ ತುಂಬ ಬಿಳಿಯ ಕೂದಲಿದೆ. ಸುಮ್ಮನೆ ಕುಳಿತು ಎಲೆ ಉದುರುತ್ತಿರುವುದು ನೋಡುತ್ತೇನೆ, ಇಲ್ಲವೆ ಗೋಪುರ ಹತ್ತಿ ನಿಂತುಕೊಳ್ಳುತ್ತೇನೆ. ಮಬ್ಬು ಬೆಳಕಿನಲ್ಲಿ ಎಂತೆಂಥಾದ್ದೋ ನೆರಳು ಚಲಿಸುತ್ತವೆ. ನನ್ನ ಕಣ್ಣಿಗೆ ವಿಶಾಲವಾದ ದುಃಖದ ಬಯಲು ತುಂಬಿಕೊಳ್ಳುತ್ತದೆ. ***** ಚೀನೀ ಮೂಲ: ಪೋ […]

#ಅನುವಾದ

ಬಾವಿಯ ಪಕ್ಕದ ಮರದಲ್ಲಿ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಬಾವಿಯ ಪಕ್ಕದ ಮರದಲ್ಲಿ ಹಣ್ಣಾದ ಎಲೆಗಳು ಆಡುತ್ತಿದ್ದವು. ಹೆಂಗಸರು ಬಟ್ಟೆ ಒಗೆಯುವ ಶಬ್ದದಲ್ಲಿ ಮಾಗಿ ಅರಳುತ್ತಿತ್ತು, ಹಾಡುತ್ತಿತ್ತು. ಮಾಳಿಗೆಯ ಮೇಲೆ ಒಬ್ಬನೇ ಮಲಗಿ ನಿದ್ದೆ ಹೋದೆ. ಎಚ್ಚರ ಆದಾಗ ನನ್ನ ಪಕ್ಕದ ಅರ್ಧ ಹಾಸಿಗೆಯಲ್ಲಿ ಬರೀ ಬೆಳದಿಂಗಳಿತ್ತು. ***** ಚೀನೀ ಮೂಲ: ಪೋ ಚು-ಯಿ

#ಅನುವಾದ

ಬೋಳಾಗಿದ್ದ ಬೆಟ್ಟ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಬೋಳಾಗಿದ್ದ ಬೆಟ್ಟ ಹಸುರಿಗೆ ತಿರುಗುತ್ತಿದೆ. ಶರದದ ನದಿ ಜುಳು ಜುಳು ಹರಿಯುತ್ತಿದೆ. ನನ್ನ ಊರು ಗೋಲಿನ ಮೇಲೆ ಭಾರ ಬಿಟ್ಟು ಮರದ ಗೇಟಿಗೆ ಒರಗಿ ನಿಂತಿರುವಾಗ ಬೀಸುವ ಗಾಳಿಯಲ್ಲಿ ಮುದಿಕಾಗೆಯ ಕೂಗು ಕೇಳಿಸುತ್ತಾ ಇದೆ. ***** ಚೀನೀ ಮೂಲ: ವಾಂಗ್-ವೀ

#ಅನುವಾದ

ನಾಲೆಯ ಪಕ್ಕದ ನಮ್ಮ ಮನೆಗೆ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ನಾಲೆಯ ಪಕ್ಕದ ನಮ್ಮ ಮನೆಗೆ ಬೆಳಕು ಬೆಟ್ಟ ಇಳಿದು ಬರುತ್ತಿದೆ. ಬೆಟ್ಟದ ಮೇಲಿನ ಗವಿಗಳ ಮೇಲೆ ಬಿಳಿಯ ಮೋಡಗಳು ಡೇರೆ ಹಾಕಿವೆ. ಕಾಗೆಗಳು ಕೋಗಿಲೆಗಳು ಬಿಟ್ಟುಹೋದ ನಿಶ್ಯಬ್ದದಲ್ಲಿ, ಅಸಹಾಯ ಜನಕ್ಕೆ ಯುದ್ಧದ ಭಯದಿಂದ ನಿದ್ದೆ ಬರದಿರುವಾಗ, ತೋಳಗಳು ಊಳಿಟ್ಟು ಹಬ್ಬ ಮಾಡುತ್ತಿವೆ. ***** ಚೀನೀ ಮೂಲ: ಟುಫ್

#ನೀಳ್ಗವಿತೆ

ಈ ಸಭಾಸ್ಥಳಕ್ಕೆ ಬಂದ ಕಾರ್ಯಾರ್ಥವೇನು ದೇವಾ ?

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ತಾವಾರು ಸ್ವಾಮಿ? ಈ ಸಭಾಸ್ಥಳಕ್ಕೆ ಬಂದ ಕಾರ್ಯಾರ್ಥವೇನು ದೇವಾ? ಪೇಳು ಪೇಳಯ್ಯಾ ದಿವ್ಯ ಪ್ರಭಾವಾ- ಅಯ್ಯಾ ಸಾರಥಿ, ಹೀಗೆ ಬರುವಂಥವನಾಗು ಬಂದಾ ಪ್ರಭು. ಬೈಟು Strong Coffee… ಮತ್ತೂ ಹೀಗೆ ಬರುವಂಥವನಾಗು ಹಾಗೇ ಒಂದು ಪ್ಯಾಕು ಚಾರ್‌ಮಿನಾರ್…. ಅಪ್ಪಣೆ ಪ್ರಭು. ನಿನ್ನ ಇಷ್ಟಾರ್ಥವೇನು ಈಗ ಹೇಳಯ್ಯಾ ಭಾಗವತಾ ನಾ ಬಲ್ಲೆ ನಿನ್ನ ಮನೋಗತಾ… ಹಾಗಾದರೆ, ಅಂಥವನೊಬ್ಬ […]

#ನೀಳ್ಗವಿತೆ

ಮೊದಲಿನ ಹಾಗಲ್ಲ ಈಗ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಮೊದಲಿನ ಹಾಗಲ್ಲ ಈಗ ನಾವು ಬೇಜಾರಾಗಿ ಬಿಟ್ಟಿದ್ದೇವೆ ನಮ್ಮ ಬೇಜಾರೇ ನಮ್ಮ ಸಂತೋಷ ನಮಗೆ ಇದು ಯಾವುದೂ ಬೇಡ ಹಾಗಾದರೆ ಇವಕ್ಕೆಲ್ಲ ಬೆನ್ನು ಕೊಟ್ಟು ನಾವೇ ಓಡಿ ಹೋಗೋಣ ನಡಿ ಕನಸಿನವರೆಗೆ ಅಥವಾ ಸಾವಿನವರೆಗೆ ಓಡು ಓಡು ಇನ್ನೂ ಜೋರಾಗಿ ಸಿಗರೇಟಿನ ಹೊಗೆಯಲ್ಲಿ ಅಂಗಡಿಗಳ ದೀಪದ ಬೆಳಕಿನಲ್ಲಿ ಕ್ರಿಕೆಟ್ಟಿನ ಸ್ಕೋರಿನಲ್ಲಿ ಸಿನಿಮಾದಲ್ಲಿ ಹೆಂಗಸರಲ್ಲಿ ಸಂಬಳದಲ್ಲಿ ನಮ್ಮ […]

#ಕವಿತೆ

ಈ ಪ್ರಪಂಚದಲ್ಲಿ ನಾನು, ಕೇವಲ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಈ ಪ್ರಪಂಚದಲ್ಲಿ ನಾನು ಕೇವಲ… ಪ್ರಪಂಚ… ಅಂದರೆ ಏನು ಅಂತ ನಿನಗೆ ಗೊತ್ತಲ್ಲ… ಕೇವಲ ನಿನ್ನನ್ನು ಮಾತ್ರ ನೀನು ಅಂತ ಕೂಗಬಹುದು. ನಾವು ಮಾತಾಡಲ್ಲ. ಆಡಿದರೂ ನಮಗೆ ನಮ್ಮ ಮಾತಿನ ಸಂಬಂಧ ಇರಲ್ಲ. ನಾವು ಆಡಿದಕ್ಕಿಂತ ಬೇರೆ ಇನ್ನೇನೋ ನಮ್ಮ ಅರ್ಥ ಇರುತ್ತೆ. ಅದು, ಕೆಲವು ಸಾರಿ, (ನಾವು ಒಬ್ಬರೇ ಇರುವಾಗ), ನಮಗೆ ಗೊತ್ತಾಗಿದೆಯಾ ಅಂತ […]

#ಕವಿತೆ

ಹಾಸಿಗೆಯ ಮೇಲಿನ ಮೆತ್ತನೆ ದಿಂಬಿನ ಹಾಗೆ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಹಾಸಿಗೆಯ ಮೇಲಿನ ಮೆತ್ತನೆ ದಿಂಬಿನ ಹಾಗೆ, ಗರ್ಭಿಣಿ ತಾಯಿಯ ಹೊಟ್ಟೆಯ ಹಾಗೆ, ನೆಲ ಅಲ್ಲಿ ಉಬ್ಬಿ ಕೊಂಡಿತ್ತು. ಅಷ್ಟು ಇಲ್ಲಷ್ಟು, ಮನೆಯಲ್ಲಿ ಮತ್ತು ಮಲಗುವ ಮನೆಯಲ್ಲಿ ಅಲಂಕಾರಕ್ಕೆ ಇಡುವ ಹಾಗೆ, ಯಾರೂ ಕೀಳದ ಕೆಂಪು ಕೆಂಪು, ಬಣ್ಣ ಬಣ್ಣ ಹೂವಿನ ಗಿಡ ಇತ್ತು. ಕತ್ತಲಾಗುತ್ತಿರುವ ಸೂರ್ಯನು ಆಗತಾನೇ ಹುಟ್ಟಿದ ಚಂದ್ರನಷ್ಟು ಕೆಂಪಗೆ ಇದ್ದ. ನಮ್ಮಿಬ್ಬರ ಕೈಗಳು […]

#ಕವಿತೆ

ಸ್ವಲ್ಪ ತಡಿ, ಮೋಡ ಹೋಗಲಿ, ಚಂದ್ರ ಬರುತ್ತಾನೆ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಸ್ವಲ್ಪ ತಡಿ, ನೋಡ ಹೋಗಲಿ, ಚಂದ್ರ ಮತ್ತೆ ಬರುತ್ತಾನೆ. ಅಲ್ಲಿ ಕಾಣುವ ಗೋಡೆಯ ಮೇಲೆ ಬಾಗಿಲ ಸಂದಿನಿಂದ ಬಿದ್ದಿರುವ ಬೆಳಕನ್ನು ಹಿಡಿಯುವುದಕ್ಕೆ ಆಗುವುದಿಲ್ಲ. ನೀನು ಹೇಗೆ ಇರಬೇಕು ಅಂದುಕೊಳ್ಳುತ್ತೀಯೋ ಹಾಗೆ ಇರುವುದಕ್ಕೆ ಆಗುವುದಿಲ್ಲ. ಚಳಿಗಾಲದಲ್ಲಿ ಗೋಪುರದ ದೊಡ್ಡ ಗಂಟೆಯ ಸದ್ದಿನ ಹಾಗೆ ಮನಸ್ಸು ಕಲಕುವ ರಾಗದ ಹಾಗೆ ನಿನ್ನ ಮನಸ್ಸು ಭಾರವಾಗಿದೆ. ವಿಷ ತಿಂದ ನೋಣ […]

#ಕವಿತೆ

ಹೀಗೆ ನೀನು ನನ್ನ ಬಿಟ್ಟು ಹೋಗಬೇಡ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಹೀಗೆ ನೀನು ನನ್ನ ಬಿಟ್ಟು ಹೋಗಬೇಡ. ಹೋಗಲ್ಲ ಅನ್ನು, Please, ಹೋಗೋದಿಲ್ಲ ಅನ್ನು. ನಿನ್ನ ಮೃದುವಾದ ರೆಕ್ಕೆಗೆ ಬಿಸಿಲು ತಗುಲದ ಹಾಗೆ, ನಿನ್ನ ಕಣ್ಣಿಗೆ ಗಾಳಿಯಿಂದ ಧೂಳು ಬೀಳದ ಹಾಗೆ, ನಿನಗೆ ರಾತ್ರಿ ಹೊತ್ತು ಚಳಿ ಆಗದ ಹಾಗೆ, ಯಾವುದೂ ಭಯ ಆಗದ ಹಾಗೆ ನಾನು ನಿನ್ನ ಸುತ್ತಲೂ ಕೋಟೆಯಾಗಿ ನಿಂತು ನಿನ್ನನ್ನು ಕಾಪಾಡಿಕೊಂಡಿದ್ದೇನೆ. ನೀನು […]