
ಮೇಲುನೋಟಕೆ ಮರೆಯಲಾರಳು ಹಲವು ಹೆಣ್ಗಳ ಪರಿಯೊಳು; ಅವಳ ಚೆಲುವನು ನಾನೆ ಅರಿಯೆನು ನಗುವತನಕೊಲಿದೆನ್ನೊಳು. ಆಗ ಕಂಡೆನು ಕಣ್ಣ ಹೊಳಪನು, ಒಲುಮೆ ತುಳುಕುವ ಬೆಳಕನು. ಈಗ ನೋಡಳು, ನಾಚಿ ನುಲಿವಳು, ನಾನು ನೋಡಲು ಮುನಿವಳು; ಏನೆ ಮಾಡಲಿ, ಹಿಡಿಯಬಲ್ಲೆನು ಕ...
ಕಂಡಿರ ಸುಂದರಿ ಕಮಲೆಯನು? ಕಂಡಿರ ಕೋಮಲೆ ವಿಮಲೆಯನು? ಧೀರನವೊಲು ದಿಗ್ವಿಜಯವ ಮಾಡಲು ಊರಿನ ಗಡಿಯನ್ನು ದಾಟಿದಳು. ಅವಳನು ಕಂಡರೆ ಒಲಿಯುವುದೇ, ಅವಳನೆ ಎಂದಿಗು ಒಲಿಯುವುದೇ. ಅವಳನು ಮಾಡಿದ ಬಿದಿ ತಾ ಮಾಡನು ಇನ್ನಾ ಚೆಂದದ ಚೆಲುವೆಯನು. ಕಮಲೇ, ನೀನೇ ರ...
ನನ್ನ ಪ್ರೇಮದ ಹುಡುಗಿ ತಾವರೆಯ ಹೊಸಕೆಂಪು, ತಾವರೆಯ ಹೊಸ ಅರಳ ಹೊಳೆವ ಕೆಂಪು. ನನ್ನ ಪ್ರೇಮದ ಹುಡುಗಿ ಕೊಳಲ ಮೆಲುನುಡಿಯಿಂಪು, ಕೊಳಲು ಮೋಹಿಸಿ ನುಡಿವ ಗಾನದಿಂಪು. ಬೆಳೆಬೆಳೆಯುತೆಷ್ಟೆಷ್ಟು ಬಿನ್ನಾಣ, ಎಲೆ ಚೆಲುವೆ, ಮುಳುಗಿದೆನು ಅಷ್ಟಷ್ಟು ಪ್ರೇಮದ...
ಮಾನವಾಗಿ ತಾನು ಬದುಕಿ, ಹೀನ ಬಡತನವೇನೆ ಇರಲಿ, ನಾಚಿಕೊಳುವ ನೀಚತೊತ್ತ ಆಚೆನೂಕು, ಏನೆ ಇರಲಿ, ಏನೆ ಇರಲಿ, ಏನೆ ಇರಲಿ, ಕಷ್ಟನಿಷ್ಟುರವೇನೆ ಇರಲಿ, ಮೆರೆವ ಪದವಿ ವರಹಮುದ್ರೆ, ಆಳು ಚಿನ್ನ, ಏನೆ ಇರಲಿ! ಹೊಟ್ಟೆಗಿಷ್ಟು ಹಿಟ್ಟು ಗಂಜಿ, ಬಟ್ಟೆ ಚಿಂದಿ,...
ಬೇಸಗೆಯಲಿ ಸಂಜೆಯಾಯಿತು; ಕೆಲಸವ ಮುತ್ತಜ್ಜ ತೀರಿಸಿಕೊಂಡ. ಹಟ್ಟಿಯ ಬಾಗಿಲ ಬಳಿಯಲಿ ನೋಡುತ ಹೊಂಬಿಸಿಲಲಿ ಕುಳಿತುಕೊಂಡ. ಅಲ್ಲಿಯೆ ಹಸುರಮೇಲಾಡುತಲಿದ್ದಳು ಅಜ್ಜನ ಮುದ್ದಿನ ಪುಟ್ಟ ಮೊಮ್ಮಗಳು. ಕಂಡಳು ಕೂಗಿಕೊಂಡಣ್ಣನು ಬರುವುದ ಆಡುತ, ಹೊಳೆಯಂಚಿನಿಂದ ...
ಆದಿಯಲಿ, ದೈವಾಜ್ಞೆಯಲ್ಲಿ ಬ್ರಿಟನ್ ಭೂಮಾತೆ ನೀಲಜಲರಾಶಿಯಿಂದುದ್ಭವಿಸಿದಂದು, ಆದರಿಸಿ, ಅಭಿಮಾನದೇವತೆಗಳೊಲಿದು, ದಯ ಪಾಲಿಸಿದರಾಕೆಗೀ ಶಾಸನವ ಹರಸಿ- “ಆಳೌ, ಬ್ರಿಟಾನಿಯಾ! ಆಳ ತೆರೆಗಳನು! ಎಂದಿಗೂ ಬ್ರಿಟನನಡಿಯಾಳೆನಿಸಿಕೊಳನು!” ನಿನ್ನ ಪುಣ್...













