Kannada

ಮತ್ಸರ

ನಾ ಚೆಲುವಿಯೆಂದು ಅತಿರೂಪ ಸುಂದರಿಯೆಂದು ಗೆಳತೀ ನಿನಗೇಕೆ ಮತ್ಸರ? ಅರಿತುಕೊ ಎಂದೆಂದಿಗೂ ಗುಣವೇ ಪ್ರಧ್ಯಾನವೆಂದು ಬಹಿರಂಗ ಚೆಲುವೆಲ್ಲಾ ನಶ್ವರ *****

ಚರಿತ್ರೆ

ಕಳ್ಳ ಪೂರ್ವದಿಕ್ಕಿನಲ್ಲಿ ಓಡುತ್ತಿದ್ದ ಪೋಲೀಸಿನವನು ಪಶ್ಚಿಮ ದಿಕ್ಕಿನಲ್ಲಿ ಓಡುತ್ತಿದ್ದ ದಾರಿ ಹೋಕನಾರೋ ಕೇಳಿದನು. “ಯಾಕೆ ಸ್ವಾಮಿ ವಿರುದ್ಧ ದಿಕ್ಕಿನಲ್ಲಿ ಓಡುತ್ತಿರುವಿರಾ…” ನಂಗೇನು ಚರಿತ್ರೆಗೊತ್ತಿಲ್ವಾ… ಭೂಮಿ ಗುಂಡಾಗಿದೆ. ಅವನು […]

ಕಾವಲು

ಅರಮನೆಯಲ್ಲಿ ಅರಳುವ ಗುಲಾಬಿಯ ಸುತ್ತ ಮುತ್ತ ಆಳು-ಕಾಳು, ಮುಳ್ಳು ಸರ್‍ಪಗಾವಲು ಆದರೇನು ದುಂಬಿಗೆ ಸದಾ ತೆರೆದ ಬಾಗಿಲು *****

ಹೊಣೆ

ಬದುಕಿನ ಆಟದಲ್ಲಿ ಸೋಲು ಗೆಲುವುಗಳಿಗೆ ಯಾರು ಹೊಣೆ? ದೈವವೇ? ಅದೃಷ್ಟವೇ ಇಲ್ಲ, ನಮ್ಮೆಲ್ಲ ಸಾಧನೆಗೆ ಪರಿಶ್ರಮವೇ ಹೊಣೆ *****

ಆಸೆ

ಮಂತ್ರಿಯೊಬ್ಬ ಟಿವಿ, ಸಂದರ್ಶನದಲ್ಲಿ ಹೇಳಿದ – “ನಾನು ಚಿಕ್ಕವನಾಗಿದ್ದಾಗ ದೊಡ್ಡ ದರೋಡೆಕೋರನಾಗಬೇಕೆಂದು ಆಸೆ ಪಟ್ಟಿದ್ದೆ…” ಅದಕ್ಕೆ ಸಂದರ್ಶಕ ಹೇಳಿದ – “ಅಂತೂ ನಿಮ್ಮ ಆಸೆ ನೆರವೇರಿತಲ್ಲಾ…” *****