
ರಕುತದ ಕಣದಾಗೆ ಬಡತನದ ಸುಗ್ಗಿ ಮೆದೆ ಮೆದೆಯ ಸದೆಬಡಿದು ಹಿರಿದಾಗಿ ಹಿಗ್ಗಿ ಬೆವರು ಹರಿಸಿದಾ ಕನಸು ಬತ್ತಿಹೋಯ್ತು ಮೂಳೆಮೂಳೆಯ ಮಾತು ಸತ್ತುಹೋಯ್ತು. ಮನೆ, ಮಡಕೆ, ಮಂಚದಲಿ ಮನಮನದ ಮೂಲೇಲಿ ಬುಸುಗುಡುವ ಬರ ಹರಿದು ಹಸಿರು ಹಾಸಿಗೆಯೆಲ್ಲ ಉರಿದುಹೋಯ್ತು...
ನಾವು ಕಟ್ಟಿದ ಗೆದ್ದಲಗೂಡು ನಿಮಗಾಯಿತು ಹುತ್ತ. ನಾವು ಹೊತ್ತ ಮಣ್ಣಿನ ಕನಸು ನಿಮಗಾಯಿತು ನನಸು. ನಾವು ನೀರೆರೆದ ಹೂವು ಹಣ್ಣು ನಮಗಾದವು ಹುಣ್ಣು. ಮೂಸಿ ನೋಡದ ಕಾಡು ಕಲ್ಗಳ ಮುದ್ದಾಡಿದೆವು ನಾವು ಕಲ್ಲು ಕಂದಗಳ ಹೊತ್ತು ತಂದೆವು ಕೋಟೆ ಕೊತ್ತಲಕೆ ಕಾ...













