
ಋತುಮಾನಕಪ್ಪಂತೆ ಪಡಿವಡೆವ ಫಲಗಳನು ಹಿತದೊಳಗ್ನಿಯೊಳುಪಚರಿಸಲದನಕಾಲದೊಳು ವಿಸ್ತರಿಸಿ ತರತರದ ತಿಂಡಿ ತೀರ್ಥಗಳನುಣಬಹುದು ಜತನದೊಳೆಮ್ಮ ತೋಟದುತ್ಪನ್ನವನು ಬೆರಟಿ ಶರ ಬತ್ತು ಕಾಸಿದನುಭವದ ಸೀಸೆಯಿದು. ತೆಳುಮಾಡಿ ರುಚಿನೋಡಿ – ವಿಜ್ಞಾನೇಶ್ವರಾ *...
ಬಡವನಡುಗೆಯ ಸೂತ್ರಗಳೆನ್ನ ಕವನಗಳು ಕಾಡಿನೊಳಂತೆ ಬೆಳೆವ ಕಂದಮೂಲಗಳನುಪಚರಿಸಿ ಬಡಿಸಿಹೆನೀ ರುಚಿಯ ಗ್ರಹಿಸುವೊಡೆ ಹಸಿದುಂಬ ತುಡುಗಿನೊಳರಸುವ ಮನವಿರಬೇಕಲ್ಲದೊಡೆ ಜಿಡ್ಡಿನನ್ನವನುಂಡ ಪೇಟೆ ಮನಕಿದೊಗ್ಗದು – ವಿಜ್ಞಾನೇಶ್ವರಾ ***** ಜಿಡ್ಡಿನನ್ನ...
ಕಾಡಿನೊಳೆಲ್ಲ ಕೂಡಿ ಬೆಳೆವಂತೆ ಬೆಳೆದೆಮ್ಮ ತೋಟದೊ ಳಡಗಿರ್‍ಪ ಅಲಫಲವನಾಯ್ಕೆಯೊಳು ಸಂಸ್ಕರಿಸಿ ತುಂ ಬಿಡುವಂತೆ ತುಂಬಿಹೆನಿಲ್ಲಿ ಬಿಡಿ ಬಿಡಿ ಕವನದಲಿ ಎ ನ್ನಡುಗೆಯನುಭವವಾ, ನೋಡಿದೊಡಾಕರ್ಷಿಸುವ ಕಡು ಪ್ಯಾಕಿಂಗ್ ಸೀಲಿಂಗ್ ಇಲ್ಲವೆಂದವಗಣಿಸದಿರಿ R...
ಒಂದೆ ಮನೆಯೊಳೊಂದೆ ಕಾಲಕೆ ವೃದ್ಧರಾಗೋಳು ಮೊಂಮಕ್ಕಳಾ ನಗೆ ಮುಗುಳು ಜೊತೆಯಾಗಿ ಇರು ವಂತೆ ಎನ್ನೀ ಕವನದೊಳಿರಬಹುದೊಂದಷ್ಟು ದ್ವಂದ್ವಗಳದನು ಸಮತೆಯೊಳು ಸ್ವೀಕರಿಸಿ ಭುಂಜನವ ವ್ಯಂಜನವ ಜೊತೆಗೊಳಿಸಿ – ವಿಜ್ಞಾನೇಶ್ವರಾ *****...
ಆರನೋ ನೋಯಿಸಲೆಂದಾನು ಬರೆದಿಲ್ಲ ಪ್ರಕೃತಿಯೊಳನ್ನ ಬೆಳೆಯುವ ಕೃಷಿಯೊಂದೆ ಪಿರಿದೆನ್ನುವೂಡಮಿತ ಕಾರಣಗಳಿರುತಿರಲದ ನೊರೆಯೆ ಬರೆದಿಹೆನು, ವಿಪರೀತದೇರು ಪೇರಿನೊಳನ್ನ ಕೈ ಜಾರುವಾತಂಕವೆನಗೆ – ವಿಜ್ಞಾನೇಶ್ವರಾ *****...
ಏನಿದೆನ್ನಯ ಕಾವ್ಯ ? ವ್ಯಾಕುಲತೆಯೊತ್ತಡವೋ ? ಆನಂದದುಮ್ಮಳವೋ ? ಆಳ್ತನದ ವೈಭವವೋ ? ಎನ್ನುಸಿರ ಬಿಸಿಗೆಷ್ಟು ಹಸುರಡಗುವುದೋ ? ಮನದೊಳೆಷ್ಟೊಂದು ಪರಿ ಪ್ರಶ್ನೆಯುದಿಸಿದರು ಎನ್ನ ಬದುಕಿನನಿವಾರ್‍ಯವೀ ನಿಟ್ಟುಸಿರು – ವಿಜ್ಞಾನೇಶ್ವರಾ *****...
ಏನೆಂಥ ಕಷ್ಟವೆ ಬರಲಿಯದೆಂಥ ನಷ್ಟವೆ ಇರಲಿ ಎನ್ನ ಮನವಿದುನ್ನತದ ಸಾವಯವದೊಳಿರಲಿ ಏನ ಮಾಡದಂತಿರಲಾಗದಾ ಸಂಕಟಕೆ ಏನೇನೊ ಮಾಳ್ಪುದನು ತಡೆವೊಡೆನ್ನ ಮನ ಅನ್ನದಾ ಕೆಲಸವನು ಮನ್ನಿಸುತೆ ಮಾಳ್ಪಂತಿರಲಿ – ವಿಜ್ಞಾನೇಶ್ವರಾ *****...
ಯುಗ ಯುಗಗಳೊಂದೊಂದೆ ಕಳೆಯುತಿರೆ ಲಘುವಾಗುತಿಹುದೆಲ್ಲ ಮನುಜ ಸಾಮರ್‍ಥ್ಯ ಹೊಗೆಯುಗಿವ ಯಂತ್ರಗಳು, ಬಗೆ ಬಗೆಯ ತಂತ್ರಗಳು ಹೆಗಲ, ತೊಗಲ, ಕಂಗಳಾ ಶಕ್ತಿ ಇದಕಾಹುತಿಯು ಲಘು ಬಗೆಯ ಕಾವ್ಯವೆನ್ನದೀ ದಿನದ ಮಿತಿಯು – ವಿಜ್ಞಾನೇಶ್ವರಾ *****...
ನಾ ಪೇಳ್ವುದನೆನ್ನ ಮಗನೋ, ಮಡದಿಯೋ ಉಪೇಕ್ಷಿಸಲಾನೇನು ಜನಕೆ ಪೇಳ್ವುದೆಂ ದಪಕರ್‍ಷದೊಳಾಗಾಗ ತೊರೆವೆನ್ನ ಕವನ ಸ್ಫೂರ್‍ತಿಯನೆನ್ನ ಮನವೆ ಮರುಕ್ಷಣಕಾ ರೋಪಿಸಲು ಮನಕಂಜಿ ಬೇಯಿಸಿದ ಗಂಜಿಯಿದು – ವಿಜ್ಞಾನೇಶ್ವರಾ *****...
ಇರಬಹುದು ಪುನರುಕ್ತಿಯಲ್ಲಲ್ಲಿ ಎನ್ನೀ ಬರಹದೊಳದ ಗುರುತಿಸಿದೊಡದು ನಿಮ್ಮ ಚಾ ತುರ್‍ಯವಾದೊಡೆನಗನಿವಾರ್‍ಯವಿದು – ವೈವಿಧ್ಯವಡ ಗಿರ್‍ಪ ಪ್ರಕೃತಿಯೊಡಲೊಳಗೆ ತರತರದ ಮರಗಿಡವು ಪುನರಪಿಸುವಂತೆ – ವಿಜ್ಞಾನೇಶ್ವರಾ *****...














