ಯುಗ ಯುಗಗಳೊಂದೊಂದೆ ಕಳೆಯುತಿರೆ
ಲಘುವಾಗುತಿಹುದೆಲ್ಲ ಮನುಜ ಸಾಮರ್‍ಥ್ಯ
ಹೊಗೆಯುಗಿವ ಯಂತ್ರಗಳು, ಬಗೆ ಬಗೆಯ ತಂತ್ರಗಳು
ಹೆಗಲ, ತೊಗಲ, ಕಂಗಳಾ ಶಕ್ತಿ ಇದಕಾಹುತಿಯು
ಲಘು ಬಗೆಯ ಕಾವ್ಯವೆನ್ನದೀ ದಿನದ ಮಿತಿಯು – ವಿಜ್ಞಾನೇಶ್ವರಾ
*****