Home / Ananthanarayana S

Browsing Tag: Ananthanarayana S

ಹಿಂದೊಮ್ಮೆ ಬುದ್ಧ ತನ್ನೊಲವ ಶಿಷ್ಯನ ಕೂಡ ಮಾತನಾಡುತಲಿರಲು ಸೃಷ್ಟಿಸ್ಥಿತಿಲಯ ವಿಷಯ, ಆನಂದ ಪ್ರಶ್ನಿಸಿದ “ಗುರುದೇವ, ಹೃದಯದಲಿ ತೊಡಕುತಿದೆ-ಸಂದೇಹ-ಕೇಳುವೊಡೆ-ಹೇಳುವೆನು!” ಬುದ್ಧದೇವನು ಆಗ ಚಂದ್ರಮನ ಎಳೆನಗುವ   ೫ ನಕ್ಕು ಪೇಳಿದನಿಂ...

ಅದರ ಮಾತಿನ್ನೇಕೆ?  ಆದುದಾಗಿಯೆ ಹೋಯ್ತು! ಬಯಸಿದುದು ದೊರೆತಿಲ್ಲ-ದೊರೆತಿಹುದು ಬೇಕಿಲ್ಲ! ಆಸೆಗಳೂ ಮೋಸಗಳೂ-ಬಯಕೆ ಬಾಡಿಯೆಹೋಯ್ತು! ಇದುವೆ ಜೀವನದಾಟ-ಮಂಜು ನಂಜಿನದೆಲ್ಲ! ನಾಬೆಳೆಸಿ, ನಿನ್ನೊಲವನೊಲಿಸಲಿಕೆ ದಿನದಿನವು ಹೂಗಳನು ಪೇರಿಸಿದೆ ರಾಸಿಯಲಿ!-...

ಹಸಿದ ಹೊಟ್ಟೆಯ ಹೇರ ಹೊರಲಾರದಿಹ ಜನರ ಕಾಸಿನಾಸೆಯ ತೋರಿ ಹೇಸಿಗೆಯ ನರಕದಲಿ ದೂಡಿದುಡಿಸುವ ದುಡ್ಡಿನಪ್ಪಗಳ ವಿಶ್ವವನು, ನಾಗರಿಕ ಜೀವನದ ಮೇಲ್ಮುಸುಕ ಮರೆಯಲ್ಲಿ ಬಚ್ಚಿಟ್ಟ ಬ್ರಹ್ಮಾಂಡ ಬಯಲು ಮಾಡಿದ ಬ್ರಹ್ಮ   ೫ ಸಿಂಕ್ಲೇರ ಅಪ್ಟನನೆ ನಿನಗೆ ಜಗ ಚಿರಋಣ...

ಕಲ್ಲನು ಕರಗಿಸಿ ಕರುಳಿನ ಕೂಗು ದಿಗಂತ ಒಡೆಯುತಿದೆ ವಿಶ್ವವ ಮುತ್ತಿದ ನೆತ್ತ ಹೊಳೆಯು ಬಾಳನೆ ಮೆಟ್ಟುತಿದೆ! ನೆಲದಲಿ ಹೋರುತ ಕಾಳನು ಕೆತ್ತಿ ರಕ್ತವ ಬೆವರಿನೊಲು ಹರಿಸುವ ದಲಿತನ ಹೊಟ್ಟೆಯು ಕಂದಿ ದೇವರ ಶಪಿಸುವುದು. “ಬಾರೈ ದೇವನೆ, ಬಾರೈ ಹೊರ...

ಕ್ರಾಂತಿ ಕಂದ ನಿನ್ನ ಅಂದ ಕಾಣಲೆಂದ ಕವಿಗೆ ಬಂಧ ಮುಕ್ತಿ ನೀಡು ಬಾ ನಗೆಗಡಲಲಿ ನಲಿದು ಬಾ ಸುಳಿಯೊಡಲಲಿ ಸುಳಿದು ಬಾ ಮುಗಿಲಲೆಯಲಿ ಮುಳಿದು ಬಾ-ಓಡಿ ಬಾ || ಅಂಧಕಾರದಲ್ಲಿ ಬಂದು ಮುಗಿಲಮಡಿಲಿನಲ್ಲಿ ನಿಂದು ತಂಬೆಳಕನು ತಂದು ತಂದು ಎಳೆಯೆಳೆಯಲಿ ಹರಡುವಂ...

ಕಾಲನಾಗಗಳೊಡಲು ಜಗದ ಮನ ಎಂಬುದನು ಅರಿತುಅರಿತೂ ಮರೆತು ಬಾಳಬೀದಿಗಳಲ್ಲಿ ಒಲವ ಭೀಕ್ಷೆಯ ಬೇಡಿ ಬಂದಿಹೆನು ಇಲ್ಲಾನು ಹೃದಯ ಬೇಡಿದ ನೇಹ ದೊರಕುವುದು ನಿನ್ನಲ್ಲಿ ಎನುವ ಭರವಸೆಗೂಡಿ.  ಮರುಳುಗೊಳಿಸುವ ಮಾಟ ಹುದುಗಿಸುತ ಒಳಗೆ ವಿಷ, ಹೊರಗೆ ಮಾಯೆಯ ಬೀರಿ ತ...

ನೂರಐವತ್ತೈದು ವರುಷಗಳು ದಾಸ್ಯದಲೆ ಬಿದ್ದು ಭಾರತ ತನ್ನ ಆತ್ಮವನೆ ಮರೆತಿಹುದು ತನ್ನ ಶಕ್ತಿಯಲಿಂದು ಇನಿತಾದರೂ ಅದಕೆ ನಂಬುಗೆಯು ಉಳಿದಿಲ್ಲ! – ಕೂಪದಲಿ ಉರುಳಿಹುದು! ಮತ್ತೆ ನಮ್ಮೀನಾಡು ಕತ್ತಲಿಂ ಹೊರಗೆದ್ದು ಬೆಳಕಿನಲಿ-ಸ್ವಾತಂತ್ರ್‍ಯ ಜ್ಯೋ...

ನಿಲ್ಲೆಲವೊ ಪಯಣಿಗನೆ ನಿಲ್ಲು! ನಿಲ್ಲು! ಮುಂದೆಲ್ಲಿ ಸಾಗುತಿಹೆ ನಮ್ಮ ಮರೆತು ಎಲ್ಲರಂತೆಯೆ ಕಿವುಡೆ ನಿನ್ನ ಮನಸು -ಕೂಗಿದೆ ವೀರಗಲ್ಲು!   ೧ ಒಟ್ಟಿಹರು ಒಂದೆಡೆಗೆ ನಮ್ಮನೆಲ್ಲ ಉಸಿರಾಡಲೆಡೆಯಿಲ್ಲವೆಮ್ಮ ಬಾಳು! ಆರು ನಾವೆಂಬುದನೆ ಅರಿಯದಿಂತು ಬಸವಳಿ...

ನನ್ನ ಜೀವನ ನದಿಯ ಎದೆ ಮೊರೆತ ಶಾಂತತೆಯ ಕಡಲಿನಲಿ ಮರೆಯಾಗಿ, ಕಲ್ಪನೆಯ ಕನಸುಗಳು ವಿಶ್ರಾಂತಿಗಾಗೊರಲಿ ವಿರಹಿಯಾಗಿಹ ಮನವ ಬಿಸಿ ಮುಳ್ಳುಗಳ ಹಾಗೆ ಒತ್ತೊತ್ತಿ ಕಾಡುವುದು ನಿಲ್ಲಿಸಿದ ದಿನದಂದು ಈ ಎಡೆಗೆ ಸಾಗುವೆಯ? ಹೃದಯದಲಿ ಹಾವಿಟ್ಟು ವಿಷವ ಹುಸಿಯಲಿ...

ನನ್ನೆದೆಯ ಬಾಗಿಲನು ಮುಚ್ಚಿ ನಿದ್ರಿಸುತಿದ್ದೆ ಜೀವನದಿ ತಿರುಳಿಲ್ಲವೆಂಬ ಭ್ರಮೆಯೊಳಗೆ ದೇವ ನೀನೈತಂದು ಬಾಗಿಲನು ಬಡಿಯೆ ನಾ ಸಿಡುಕಿನಿಂದಲೇ ಕೇಳ್ದೆ “ಯಾರು ಅದು” ಎಂದು!   ೧ ಮೌನದಲಿ ಮತ್ತೊಮ್ಮೆ ಶಬ್ದ ಮಾಡಲು ನೀನು ನಾನೆದ್ದೆ ಕೋಪದ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...