ದೇವ ನೀನೈತಂದೆ

ನನ್ನೆದೆಯ ಬಾಗಿಲನು ಮುಚ್ಚಿ ನಿದ್ರಿಸುತಿದ್ದೆ
ಜೀವನದಿ ತಿರುಳಿಲ್ಲವೆಂಬ ಭ್ರಮೆಯೊಳಗೆ
ದೇವ ನೀನೈತಂದು ಬಾಗಿಲನು ಬಡಿಯೆ ನಾ
ಸಿಡುಕಿನಿಂದಲೇ ಕೇಳ್ದೆ “ಯಾರು ಅದು” ಎಂದು!   ೧

ಮೌನದಲಿ ಮತ್ತೊಮ್ಮೆ ಶಬ್ದ ಮಾಡಲು ನೀನು
ನಾನೆದ್ದೆ ಕೋಪದಲಿ ಕೆಂಡದಂತಾಗಿ
“ಯಾರಿವನು-ನಿದ್ರೆಯಲಿ ಭಂಗ ತಂದಿಹ ಧೂರ್ತ”
ಎನುತ ಚಿಂತಿಸಿ ಬಂದು ಬಾಗಿಲನು ತೆರೆದೆ!   ೨

ನಿನ್ನ ನೋಡುತಲೆನ್ನ ಕೋಪ ಕಣ್ಣೀರಾಯ್ತು,
ನಿನ್ನ ಮುಗುಳ್ನಗೆ ಮಿಂಚಿ ನನ್ನ ಮನ ಸೆಳೆಯೆ
ಮೌನದಲಿ ಹೃದಯದಲಿ ತಳಮಳದಿ ತಪಿಸಿದೆನು
ನೀನೊಳಗೆ ಬರಬೇಕು ಎಂಬುದೆನ್ನಿಚ್ಫೆ!   ೩

ನಸುನಕ್ಕು ಚಣಕಾಲ ಒಳಗೆ ದಿಟ್ಟಿಸಿ ನೋಡಿ
ಮುಂದೆ ಸಾಗಿದೆ ನೀನು ಹೃದಯದೊಲವೆ
ನಿನ್ನ ಪುರಾಗಮನಕಾಗಿ ಕಾಯುತಲಿರುವೆ
ಎದೆಯ ಬಾಗಿಲ ತೆರೆದು ಹೊಸ್ತಿಲಲಿ ನಿಂದು!   ೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಹವೆಂಬ ಮುತ್ತು
Next post ಬಸನಿಂಗನ ಮಾತು ಕೇಳಿ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys