Home / ಕಾಂಟೆಸಾದಲ್ಲಿ ಕಾವ್ಯ

Browsing Tag: ಕಾಂಟೆಸಾದಲ್ಲಿ ಕಾವ್ಯ

ಉತ್ತ ನೇಗಿಲು ಬಂದು ನೆತ್ತಿಗೆ ಬಡಿಯಿತು ಕಿತ್ತ ಕಳೆಯೇ ನಮ್ಮ ಬದುಕಾಯಿತು. ನಮ್ಮತ್ತ ಬರಲಿಕ್ಕೆ ಅತ್ತು ಕರೆದರೂ ಪೈರು ಬಿಡಲಿಲ್ಲ ಅವರು ತಲೆಯನು ಕುಟ್ಟಿ ಹೆಡಮುರಿ ಕಟ್ಟಿ ಎಳೆದೊಯ್ದರಲ್ಲಾ-ಎಳೆದೊಯ್ದರು. ಕೂಳೆ ಹೊಲದ ಬಾಳು ಮಾಡಿದರಲ್ಲಾ-ಮಾಡಿದರು ಕ...

ಉರಿದು ಬಿದ್ದಿತು ಅಲ್ಲಿ ಹಳೆ ಬಾಳ ತೇರು ಬೆಳಕು ಚಿಗುರಿತು ಇಲ್ಲಿ ಹೊಸ ಬಾಳ ಸೂರು ಗರಿ ಬಿಚ್ಚಿತು ಕನಸು ಮುದ ಹೆಚ್ಚಿತು ಮೈ ನೆರೆದ ಮನಸು ಮುಗಿಲಾಯಿತು ಅಲ್ಲಿ ನಗುತಾವೆ ಚುಕ್ಕಿ ಹಸಿರು ಗಿಡದಾಗೆ ಹಕ್ಕಿ ನೆರೆ ಉಕ್ಕಿತು ಮೈ ನಸುನಕ್ಕಿತು ಗರಿಗೆದರಿ...

ಕರಿ ಇರುಳ ಬದುಕು ದೀಪಽದ ಮಿಣಿಕು ಒಳ ಉರಿಯ ಹಿರಿಯಾಸೆ ಬಿರಿದೋಯಿತೊ ನರನರದ ಸರದಾಗೆ ಉರಿ‌ಉರಿಯ ದಳ ಅರಳಿ ಹೂವಾಯಿತೊ-ಬೆಂಕಿ-ಹೆಡೆಯಾಯಿತೊ. ಆಲದಾ ಬಿಳಲು ಕರಿಬಾಳ ಸರಳು- ನೆಲದ ನಗೆ ನುಂಗುವ ಹಗೆಯಾಯಿತೊ ಬೇರುಗಳು ಬರಸೆಳೆದು ಕಾರಿರುಳ ವಿಷ ಸುರಿದು ಬ...

೧ ಕಣ್ತೆರೆಯುತ್ತಲೆ ಕಣ್ಮುಚ್ಚಿದ ಕಂದಮ್ಮಗಳೇ ಅರಳುತ್ತಲೆ ಉರಿದುಹೋದ ಅಕ್ಕಂದಿರೆ, ತಂಗಿಯರೇ ಬದುಕುತ್ತಲೆ ಬೀದಿಪಾಲು-ತಾಯಂದಿರೆ, ತಂದೆಯರೇ ಕರೆಯುತ್ತಲೆ ಕಮರಿಹೋದ ಗೋರಿ ಗೆಳೆಯರೇ ನಡುವೆ ನಿಂತವನ ಮನಸು ಚಿಂತೆವನ ಉರಿಯುತ್ತಿದೆ ಕಾಡು ಮುರಿಯುತ್ತಿದ...

ಸಿಂಬೆ ಸುತ್ತಿದ ಸಾವು ಹೆಡೆಯೆತ್ತಿ ಕಾಡುತಿದೆ ಸುತ್ತ ಕುಣಿಯುತ್ತಿರುವ ಕನಸುಗಳ ಕೆಣಕಿ ರಂಗುರಂಗಿನ ಬಟ್ಟೆ, ಮನದಲ್ಲಿ ಮಿಂಚು ಗರಿಬಿಚ್ಚಿದಾಸೆಗಳ ನವಿಲ ಕಣ್ಣು. ಮಣ್ಣ ಕಣಕಣದಲ್ಲು ಕನಸುಗಳು ಮೈನೆರೆದು ಮೌನದಲಿ ಹರಿಯುತಿದೆ ಮುರಳಿ ನಾದ ಹೊನಲಾಗಿ ಹೊ...

ಗಾಯಗೊಂಡ ಗೋಡೆಗಳೇ ಕಾಳುಬೀಳು ಗೂಡೆಗಳೇ ಒಡೆದ ಮಡಕೆ ಹರಿದ ತಡಿಕೆ ತುಂಬಿನಿಂತ ನಾಡುಗಳೇ ನಮ್ಮೊಳಗಿನ ಕರುಳ ಮಾತು ಮುಟ್ಟದಿಲ್ಲಿ ಮಂದಿಗೆ ಬಾಯಾರಿಕೆ ನೋವಿನುರಿ ತಟ್ಟದಿಲ್ಲಿ ನೀರಿಗೆ ತಿನ್ನುವನ್ನ ನಂಬುತಿಲ್ಲ ಅಪನಂಬಿಕೆ ಅಗುಳು ತಟ್ಟೆಗಂತು ಹೊಟ್ಟೆ ...

ಕಥನ ಗೀತೆ ಪುಣ್ಣೇವು ತುಂಬೈತೆ ಈ ಊರ ತುಂಬ ಸಾರೈತೆ ಈ ಊರ ಮನಮನೆಯ ಕಂಬ ಬೆಟ್ಟದ ಮ್ಯಾಲೊಂದು ನೀರಿನ ದೊಣೆಯೈತೆ ಅದರ ಸುತ್ತಲಿಗೊಂದು ಸತ್ಯೇದ ಕತೆಯೈತೆ ಸತ್ಯೇವು ಒಡೆದಂಥ ಮಂದಿಯೇ ಇಲ್ಲವೊ ಇಂಥ ಮೈಮೇನಂತು ಮತ್ತೆಲ್ಲು ಕಾಣೆವೊ ಬಂದಾನೊ ರಾಮನು ವನವಾಸ...

ಏನಿದು ಭಗ್ಗೆಂದು ಕೇಕೆ? ಬೆಚ್ಚಿ ನೋಡಿದರೆ ಇಲ್ಲಿ ಕೈಕೈ ಹಿಡಿದು ಕುಣಿಯುವ ಕತ್ತಲಕುಲ ವೃತ್ತ! ನಡುವೆ ನಾಚನಿಂತ ಬಡ ಒಡಲ ನಗ್ನಮೊತ್ತ. ನಡುಗಿಸುತ್ತದೆ ಮೈ; ಕಂಪಿಸುತ್ತದೆ ಕೈ ಚಿತ್ತದಲ್ಲಿ ಕೆತ್ತಿದ ಪ್ರಶ್ನೆ ಕೆಣಕುತ್ತದೆ: ಕಟ್ಟಿದೆವೆ ನಾವು ಹೊಸ ...

ನನ್ನಮ್ಮ ಬೆಂಗಳೂರಿಗೆ ಬಂದವಳಲ್ಲ ಮೆಜೆಸ್ಟಿಕ್‌ನ ವಾಕಿಂಗ್‌ಸ್ಟಿಕ್ಕಾಗಿ ಸಿಕ್ಕಾಗಿ ತನ್ನತನ ಮುಕ್ಕಾಗಿ ಸಿನಿಮಾ ಮಹಲು ರಸ್ತೆಯಮಲಿಗೆ ಸಿಕ್ಕಿದವಳಲ್ಲ. ಸೀಳುಹಾದಿಯಲ್ಲಿ ಕೂಳೆಹೊಲದಲ್ಲಿ ಕಾಲುಬಲಿತು ಕೂದಲು ನರೆತವಳು. ಸದಾ ಸೌದೆ ಬುತ್ತಿ ನೆತ್ತಿಮೇಲ...

ಗಾಯಗೊಂಡು ಚೀರುವೆದೆಗೆ ಗುಟುಕು ಕೊಟ್ಟೆ ಮುಖವಾಡಗಳ ಗೂಢದಲ್ಲಿ ಬುದ್ಧಿಬುರಖಾಗಳ ಬಡಿವಾರದಲ್ಲಿ ಗಾಢವಾಗದೆ ಗಡಿದಾಟಿ ದೋಣಿ ಮೀಟಿ ಏಕಾಂತ ಏದುಸಿರಿಡುವಾಗ ಕಾಂತಾಸಮ್ಮಿತವಾದೆ. ಕೆಣಕುವ ಬೆಡಗು ಗುಟರುವ ಗುಡುಗು ಚಳಿಯ ನಡುಗು- ಗಳ ಉಜ್ಜುವಿಕೆಯಲ್ಲಿ ಕಿ...

1...56789...13

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...