ನಮಗಲ್ಲ!

ನಾವು ಏನು ಅಲ್ಲ ನಮಗೆಲ್ಲಿ ಬರಬೇಕದೆಲ್ಲಾ ಸೊಲ್ಲು ನಮಗಲ್ಲ! ಹೊರಗಿನದು ಬೇಕಿಲ್ಲ ನಮ್ಮಲ್ಲಿಯೇ ನಮ್ಮವೇ ಇವೆಯಲ್ಲ ಅಮೂಲ್ಯ ತನು, ಮನ, ಬುದ್ದಿ. ಅರಿತು ಬಳಸಿರಿವುಗಳ ಅಂತಃ ಶಕ್ತಿ ರೂಢಿಸುವುದು ಸಾಧನೆಯ ಹಾದಿ ತಾನಾಗೇ ತೆರೆದುಕೊಳ್ಳುವುದು....

ನಾವು ಮತ್ತು ಹಂದಿಗಳು

ನಮ್ಮೂರಲ್ಲಿ ಹುಡುಕಬೇಕಾಗಿಲ್ಲ ಕಣ್ಣು ಹೊರಳಿಸಿದಲ್ಲಿ ನಾನಾ ಗಾತ್ರ, ಗೋತ್ರದ ಹಂದಿಗಳು. ಅಸಹ್ಯವೆಂಬುದಿಲ್ಲ ಕಸ ರಸದ ಬೇಧವಿಲ್ಲ ಹುಡುಕಿ ಹೋಗಿ ತಿನ್ನುತ್ತವೆ. ಕೊಚ್ಚೆ, ಚರಂಡಿ ಈಜುಕೊಳ ಮಾಡಿ ಮನಸ್ವಿ ಉರುಳಾಡಿ, ಹೊರಳಾಡಿ ಕೆಟ್ಟದ್ದ ಗಟ್ಟಿಯಾಗಿ ಮೆತ್ತಿಕೊಳ್ಳುತ್ತವೆ....

ಜಿಜ್ಞಾಸೆ

ನಿನ್ನನ್ನು ಯಾರು ಯಾರೋ ಹೇಗ್ಹೇಗೋ.. ಇರುವೆ ಎನ್ನುವರು. ನೋಡಿದರೆ ಕಲ್ಲು, ಮಣ್ಣು, ಗಗನ, ಗಾಳಿ, ನೀರು, ಬೆಳಕು ಪಶು ಪಕ್ಷಿ ಕ್ರಿಮಿ, ಕೀಟ ನಾನಾ ತರದ ಜನ ಬೇರೆ ಎಲ್ಲಾ ಕಾಣುತ್ತದೆ ನೀನು ಕಾಣುತ್ತಿಲ್ಲ...

ತೀರ್ಥಯಾತ್ರೆ

ಆ ಊರು ಈ ಊರು ಯಾವುದ್ಯಾವುದೋ ಊರು ದೇವರ ಊರೆಂದು ನಂಬಿ ಬಂಧು ಮಿತ್ರ, ಕಳತ್ರರ ಕೂಡಿ ಸಾವಿರ, ಸಾವಿರ ಖರ್ಚುಮಾಡಿ ತೀರ್ಥಯಾತ್ರೆ ಮಾಡಿ ಧನ್ಯತೆಯ ಭಾವವನು ತಳೆಯುವಿರಿ. ವಿಚಾರ ಮಾಡಿ ಅವನು ಎಲ್ಲೆಲ್ಲೂ,...

ಜ್ಞಾನಯೋಗಿ

ಯಾರಿಗಿದೆ? ಭವ್ಯ ಭವಿತವ್ಯದ ಮನಗಳಲಿ ಅರಿವಿನ ಬೀಜ ಬಿತ್ತುವ ಶಿವ ಕಾಯಕ. ಯಾರಿಗಿದೆ? ಅಲೆ ಅಲೆಯಾಗಿ ಸಾಗಿ ಬರುವ ಶಕ್ತಿ ಸ್ವರೂಪಿಗಳ ಜೊತೆ ಆತ್ಮೀಯ ಸಂಬಂಧಗಳಲಿ ರಾರಾಜಿಸಿ ಶಾಶ್ವತ ಸಂಬಂಧ ಬೆಸೆಯುವ ಸುವರ್ಣಾವಕಾಶ ಯಾರಿಗಿದೆ?...

ನನ್ನವಳು ಬಳಿಯಿಲ್ಲ

ಬೆಳಗದಿರು ಕದಿರ ನನ್ನವಳು ಬಳಿಯಿಲ್ಲ ನಿನ್ನ ಬೆಳಗು ಹಾಯಿ ತರುವುದಿಲ್ಲ. ಯಾಕೆ ದಣಿಯುವೆಯೋ ಮಾರುತ ನನ್ನವಳು ಬಳಿಯಿಲ್ಲ ನೀನು ಹೇಗೆ ಬೀಸಿದರೂ ನನ್ನ ಮನವರಳುವುದಿಲ್ಲ. ತರುಲತೆಗಳೇ ನಿಮ್ಮದೇ ಭಾಗ್ಯ ವಿರಹವೆಂಬುದಿಲ್ಲ ಮುಕ್ಕಾಗದೆಂದೂ ನಿಮ್ಮ ಅಪ್ಪುಗೆ...

ಆತ್ಮಾನುರಾಗ

ಓ ಶಿವೆಯೇ ! ಮಲ್ಲಿಗೆ ಹೂ ಬನದ ನಿವಾಸಿಯೇ... ಪ್ರೇಮದೆದೆಯ ನಡೆಮಡಿಯ ಹಾಸಿನ ಮೇಲೆ ಹೂಪಾದ ಮುದ್ರೆಯನೊತ್ತುತ್ತ ಬಾರೆ. ನಿನ್ನ ದರ್ಶಿಸುವ ಲೆಕ್ಕವಿರದ ಮೆಚ್ಚುಗೆಯ ನಯನಗಳಲಿ ಯುಗಾದಿ ಹಬ್ಬದ ಚಿಗುರು ಚಿಗುರು ಮಾವು, ಬೇವು...

ಸಿರಿಗೊಂಬೆ

ಒಳ್ಳೆ ಉಗಾದಿ ಹೊಂಗೆ ಮರದ್ಹಂಗೆ ತಬ್ಬೊ ಹಂಗಿದ್ದೆ... ನೋಡಿದ ಯಾರಿಗೂ ಇನ್ನೊಂದ್ಸಾರಿ ನೋಡೋ ಅಂಗಿದ್ದೆ ಹೇಳೋದೇನು ನಿನ್ನನ್ನೋಡಿದ ಮಾನವ್ರೆಲ್ಲಾ ಅಬ್ಬಬ್ಬಾ! ಏನು ಚೆಲುವು; ಎಂತಾ ಸಿರಿಗೊಂಬೆ ಕೆಟ್ಟ ಕಣ್ಣಿಲಿ ನೋಡಿದ್ರೆ ಸಿಡಿಯಂಗೈದಳನ್ತಿದ್ರು. ಏನಿಲ್ಲ ಅಂದ್ರು...

ಮಲ್ಲಿಗೆ

ಮಲ್ಲಿಗೆ! ಮಲ್ಲಿಗೆ! ನಿನಗೆ ನಮಗೆ ಎಲ್ಲಿಗೆಲ್ಲಿಗೆ ? ಸಸ್ಯದೆದೆಯ ಸುಧಾರಸವೆ ಹೂವಾಗಿ ಹಾಲು ಬಣ್ಣ ರೂಪದಲ್ಲಿ ಪ್ರಕಟವಾಗುವಂತೆ ಅರಳಿ ನಿಲ್ಲುವೆ. ಸಸ್ಯಮಾತೆ, ಪ್ರೇಮ ಭಾವವೇ ಪುಟ್ಟ ಪುಟ್ಟ ಸರಳ ಸುಂದರ ನವಿರು ನವಿರು ದಳಗಳಾಗಿ...
cheap jordans|wholesale air max|wholesale jordans|wholesale jewelry|wholesale jerseys