ಅವಕಾಶ ಕೊಡಿ

ಹರಿಯುವ ನೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ ತಡೆಯಬೇಡಿ, ನಾಲ್ಕು ಗೋಡೆಗಳ ಮಧ್ಯೆ ಖೈದು ಮಾಡದೇ ಅದಕೆ ಸ್ವಚ್ಛಂದ ಹರಿಯಲು ಬಿಡಿ. ಕತ್ತಲೆಯ ಕೋಣೆಯಲಿ ಬಂದಿಯಾಗಿಸದೇ ಸೂರ್ಯನ ಜಗದ ತುಂಬ ಬೆಳಗಲು ಅವಕಾಶ ಮಾಡಿ ಕೊಡಿ....

ತಿರಂಗಾ ಧ್ವಜ

ಬೇಲಿಯೇ ಇಲ್ಲದ ಸೂರ್ಯ ಮುಳುಗದ ದೇಶ ವೀರ ಜನತೆಯ ರಕ್ತ ಕೆಂಪಾದ ಜಲಿಯನ್‌ವಾಲಾ, ಆ ರಕ್ತದ ಮೇಲೆ ಬೆಳೆದ ಹಸಿರು ಮರದ ಟೊಂಗೆ ಟೊಂಗೆಯಲಿ ತಿರಂಗಾಧ್ವಜ ನೆಟ್ಟು ಗೂಟ ಕಟ್ಟಿ, ಗಳ ಹಿಡಿದು ಗೋಣು...

ಸ್ವಾತಂತ್ರ್ಯಕ್ಕೆ ೫೦ ತುಂಬಿದಾಗ

ಸ್ವಾತಂತ್ರ್ಯ ನಿನಗೀಗ ಐವತ್ತು ನೀನು ಬಂದು ಹತ್ತು ವರ್ಷಗಳಿಗೆ ನನ್ನ ಹುಟ್ಟು ತುಂಬಿದೆ ನನಗೀಗ ನಲವತ್ತು ನೀನು ಅರ್ಧರಾತ್ರಿಯಲಿ ಕತ್ತಲೆಯನ್ನು ಸೀಳುತ್ತಾ ಸೂರ್ಯನಂತೆ ಬಂದೆಯಂತೆ, ನನಗದು ಗೊತ್ತಾಗಲೇಯಿಲ್ಲ. ಏಕೆಂದರೆ ನಾನಾಗ ಹುಟ್ಟಿರಲೇ ಇಲ್ಲ. *****

ಚೋಮನ ದುಡಿಮೆ

ದಿನವೆಲ್ಲ ದನದಂತೆ ಬುಟ್ಟಿಗಳ ಹೆಣೆದು, ಧನವಿಲ್ಲದೆ ಬರಿಗೈಲಿ ಬಂದೆಯಾ ಚೋಮ? ಬಿತ್ತಲು ಭೂಮಿಯಿಲ್ಲ - ಮಲಗಲು ಮನೆಯಿಲ್ಲ ಕಷ್ಟ ಪಟ್ಟು ದುಡಿದರೂ ನಿನಗೆ ದಕ್ಕುತ್ತಿಲ್ಲ ಒಪ್ಪತ್ತಿನ ಕೂಳು. ಉಸ್ಸೆಂದು ಕೂತು ಬರಿಗೈಯನ್ನು ನೋಡಿ ಹಣೆ...

ಧರೆಯ ಮೇಲೆ

ದಿನದಿನಕ್ಕೂ ಹೆಮ್ಮರವಾಗಿ ಬೆಳೆಯುತ್ತಿರುವ ನೋವುಗಳು, ಗೋಜಲುಗೋಜಲಾಗಿ ಸ್ಪಷ್ಟತೆಯಿಲ್ಲದೆ ತಡಕಾಡುವ ಸಾವಿರಾರು ಸಮಸ್ಯೆಗಳು, ಜರ್ಜರಿತವಾಗಿ ಹತಾಶವಾಗಿರುವ ಸುಂದರ ಕನಸುಗಳು, ಅರಳಿ ಘಮಘಮಿಸಿ ನಳನಳಿಸಲಾಗದೇ ಬತ್ತಿ ಹೋಗುತ್ತಿರುವ ಮೊಗ್ಗು ಮಲ್ಲಿಗೆಗಳು, ಹರಡಿ ಹ೦ದರವಾಗಿ ಹಸಿರುಟ್ಟು ನಲಿದು ತಂಪನೀಯಲಾಗದೇ...

ಹಡೆದವ್ವನಿಗೆ ಕೇಳಿಸುವುದೇನೆ?

ನಾನವನ ಅರ್ಧಾಂಗಿ, ಅವನ ಯಾವ ಅಂಗದ ಮೇಲೆ ನನಗೆ ಅಧಿಕಾರವಿದೆ ಹೇಳು? ನನ್ನ ನಗು, ಅಳುವಿನ ಮೇಲೆಯೂ ಅವನದೇ ಅಧಿಕಾರ, ಅಷ್ಟೇ ಏಕೆ? ಅವನ ಒಪ್ಪಿಗೆ ಪಡೆದೇ ನಾನು ಫಲ ಧರಿಸಬೇಕು, ಭ್ರೂಣ ಹೆಣ್ಣಾಗಿದ್ದರೆ...

ತಂಗಾಳಿ

ಆಗಸದಷ್ಟು ವಿಶಾಲ ಹೆಣ್ಣುಗಳ ಹೃದಯಾಂತರದ ನೋವಿನ ಹರವು ಹೆಜ್ಜೆ ಹೆಜ್ಜೆಗೂ ಕಟ್ಟಳೆಗಳ ಬಂಧಿನಿ - ಕಣ್ಣಿದ್ದು ಮೈತುಂಬಾ ಎಚ್ಚರವಹಿಸಿ - ಶೋಧಿಸಿ - ಪರೀಕ್ಷಿಸಿ ಒಂದೊಂದೇ ಹೆಜ್ಜೆ ಮುಂದಿಟ್ಟಾಗ ಚಿಗುರನು ಚಿವುಟುವ ಕೈಗಳು ಮೈ...

ಜನರ ಹತ್ತಿರ ಬನ್ನಿ

ಬಡವರುದ್ಧಾರದ ಮಾತುಗಳನ್ನುದುರಿಸಿ, ದಿನದಿನಕ್ಕೆ ಬೆಳೆದಂತಹ ಕುಬೇರರೆ, ಬಡವರಿಗಾಗಿ ಆಶ್ರಯ, ಹುಡ್ಕೋ, ಯೋಜನೆ ನಿಮಗಾಗಿ ಮುಗಿಲೆತ್ತರದ ಬಂಗ್ಲೆಗಳನ್ನು ಕಟ್ಟಿಸಿಕೊಂಡವರೆ, ಬಡವರಿಗೆ ಭಜನೆ ಮಾಡಲು ಗುಡಿಕಟ್ಟಿಸಿ ನಿಮಗಾಗಿ ಪಂಚತಾರಾ ಕಟ್ಟಿಸಿಕೊಂಡವರೆ, ಬಡವರಿಗೆ ದೇಶಾಭಿಮಾನದ ಮಂತ್ರ ಹೇಳಿ ಗ್ಯಾಟ್,...

ಅಡವಿಟ್ಟ ಸ್ವಾತಂತ್ರ್ಯ

ಒಣಗಿದ ನನ್ನವ್ವನ ಎದೆಯಿಂದ ಝಲ್ಲೆಂಬ ಜೀವರಸ ಬತ್ತಿ ಎಂದಿಗೂ ಬಾಯಿ ತುಂಬಾ ಗುಟುಕು ಎಟುಕಲಿಲ್ಲ ನನ್ನ ಬಾಯಿಗೆ. ಏಕೆಂದರೆ ನನ್ನಪ್ಪನ ಕಷ್ಟಗಳು ಅವಳಿಗೆ ಹೊಟ್ಟೆ ತುಂಬಿಸಲಿಲ್ಲ. ಬಡತನದ ಬೇಗೆಯಿಂದ ಬೇಸತ್ತು ನನ್ನಪ್ಪ - ನನ್ನವ್ವನಿಗೆ...
cheap jordans|wholesale air max|wholesale jordans|wholesale jewelry|wholesale jerseys