
ರೊಟ್ಟಿ ಹಸಿವಿನ ಅಂತ್ಯ ಹಸಿವು ರೊಟ್ಟಿಗೆ ನಾಂದಿ ನಡುವೆ ನಡೆವ ಹೆಜ್ಜೆಗಳು ಅಳತೆಗೆ ಸಿಕ್ಕದ ಅವಶ್ಯಕತೆ ಮತ್ತು ಪೂರೈಕೆಗಳ ಕಾಗುಣಿತ ಆದಿ ಅಂತ್ಯಗಳ ತೆಕ್ಕೆಯಲಿ ಮಿಳಿತ. *****...
ಎಲ್ಲ ನಾಚಿಕೆ ಬಿಟ್ಟು ನಡು ಬೀದಿಯಲಿ ಕುಣಿವ ರೊಟ್ಟಿಗೆ ಮಾನಾವಮಾನಗಳ ಪರಿವೆ ಇಲ್ಲ. ನರ್ತನದೊಳಗೇ ನಡೆಸಿ ಅನುಸಂಧಾನ ತಾನೂ ಜೀವಂತಗೊಂಡು ಸೃಜಿಸುತ್ತದೆ ಕೋಟ್ಯಾಂತರ ಮರಿ ರೊಟ್ಟಿ ಹಿಂಡು. *****...
ಪ್ರಶ್ನೆ ಆರೋಪ ಮಿಥ್ಯೆ ವಿಪ್ರಲಾಪ ಎಲ್ಲವ ಮೌನದಿ ಮೀರಿದೆ ರೊಟ್ಟಿ ತಣ್ಣಗೆ. ನಗುತ್ತದೆ ಒಳಗೇ ಸಣ್ಣಗೆ. ಪ್ರತಿಭಟನೆಯ ಹೊಸಹಾದಿ ಅರಿವಿಲ್ಲ ಹಸಿವೆಗೆ *****...
ಗೋಲು ಗೋಲು ಗೋಲಾಕಾರ ಪರಿಭ್ರಮಿಸುವ ರೊಟ್ಟಿ ಬೀದಿಯಳೆಯುತ್ತಲೇ ಒಳಗೆ ಬೆಳೆಯುತ್ತಲೇ ಬತ್ತಲಾಗುತ್ತದೆ. ಆ ಮಹಾ ಬೆಳಕಿನಲಿ ಮಿಂದು ತಣಿಯುತ್ತದೆ ವಿರಕ್ತಿಯಲಿ ಅಂತರಂಗ ಮಾಗಿಸಿ ತಾನು ತಾನಲ್ಲವೆಂಬಂತೆ ಬಹಿರಂಗದಲಿ ಹಸಿವೆಗೆ ಸುಮ್ಮನೆ ಮಣಿಯುತ್ತದೆ. **...
ಧಗಧಗಿಸುವ ಒಲೆಯ ಮೇಲೆ ರೊಟ್ಟಿ ಬೇಯಿಸಲು ಕೂತ ಕಾವಲಿಗೆ ತನ್ನಿಂದ ರೊಟ್ಟಿಯ ಹುಟ್ಟೋ ಹಸಿವು ಪೊರೆ ಕಳಚಿ ಬಯಲಾಗುವ ಸಾವಿನ ಗುಟ್ಟೋ ಬರಿದೆ ಜಿಜ್ಞಾಸೆ. *****...
ಅಮೂರ್ತ ಹಸಿವೆ ಹಿಂಗಿಸಲು ಮೂರ್ತ ರೊಟ್ಟಿ ಸದಾ ಸಿದ್ದ. ಈ ಮೂರ್ತದೊಡಲಿನ ಅಮೂರ್ತ ಹಸಿವು ಜ್ವಲಿಸುವ ಕಾವು ರೊಟ್ಟಿಗೂ ಹಸಿವು. *****...
ಒಂದಿಷ್ಟು ಬೆರಗು ಕುತೂಹಲ ಮುಗ್ಧತೆಯ ಮಿಡಿಯುವ ರೊಟ್ಟಿ ಆರ್ದತೆಯಲಿ ಸದಾ ಜೀವಂತ ಹಸಿವು ತನ್ನೊಳಗಿನ ತೀಕ್ಷ್ಣತೆಯಿಂದಲೇ ಅಸ್ವಸ್ಥ. *****...
ಕ್ಷಣಕ್ಷಣದ ಆವರಣದಲ್ಲಿ ಕಣವಾಗುವ ರೊಟ್ಟಿ ಅಪಾರ ಲಭ್ಯತೆಗಳಲಿ ಅಧಿಕವಾಗುವ ಹಸಿವು ಪೂರ್ಣತೆ ಶೂನ್ಯತೆಗಳು ಏಕಕಾಲಕ್ಕೆ ರೊಟ್ಟಿಯ ಎರಡು ಮುಖಗಳು ಹಸಿವಿನೆರಡು ಆಶಯಗಳು. *****...
ತನ್ನಂತೆಯೇ ರೂಪಿಸಲು ರೊಟ್ಟಿಯನ್ನು ಬಡಿಬಡಿದು ಅದೆಷ್ಟು ಚೆಂದಗೆ ಹದಗೊಳಿಸುತ್ತದೆ ಹಸಿವು. ರೊಟ್ಟಿಯೀಗ ಹೊರನೋಟಕ್ಕೆ ಹಸಿವಿನದೇ ಪ್ರತಿಬಿಂಬ ಒಳಗು ಮಾತ್ರ ಆತ್ಮಪ್ರತ್ಯಯದಲಿ ಜ್ವಲಿಸುವ ಮೂಲ ಬಿಂಬ. *****...
ನಿರಾಕಾರವೆಂಬೋ ಹಸಿವು ಆಕಾರವೆಂಬೋ ರೊಟ್ಟಿ ನುಂಗಿ ಆಕಾರಕ್ಕೆ ನಿರಾಕಾರ ದರ್ಶನ ನಿರಾಕಾರಕ್ಕೆ ಆಕಾರ ದರ್ಪಣ. *****...














