
ಲಕ್ಷ್ಮೇಶ್ವರದ ರಾಮಲಿಂಗ ದೇವಾಲಯದ- ಲೊಂದು ಸಾವಿರಲಿಂಗ ಮೂಡಿರಲು ಪಿಂಡದಲಿ ರಾಮೇಶ್ವರವೆ ಆಗುತದು ಭರತಖಂಡದಲಿ ಮೆರೆಯಬಹುದಿತ್ತೆಂದು ಜನರೊಂದು ವಿಸ್ಮಯದ ಮಾತ ನುಡಿವರು. ಅಕಟ! ಕೋಳಿ ಸೂರ್‍ಯೋದಯದ ಕಾಲಕ್ಕೆ ಕೂಗಿತ್ತು. ಆ ಶಿಲಾಖಂಡದಲಿ ಮೂಡಲಿಹ ಕೊನೆ...
ನೋಟವನು ರಂಜಿಸಳು. ಬಗೆಬಗೆಯ ಹೂವಿಲ್ಲ ಬಣ್ಣದಾಟವ ಹೂಡಲೆನೆ. ಹಚ್ಚಹಸಿರಿರುವ ಸೀರೆಕುಪ್ಪಸ ತೊಟ್ಟು ಮಂದಗತಿಯಿಂದಿರುವ ಪಲ್ಲವಾಂಗಿಯು ಇವಳು. ಭೃಂಗ-ಕೇಲಿಯದಿಲ್ಲ ಇವಳ ಬಳಿಯಲಿ ಇವಳ ಹುಬ್ಬು ತಿಳಿಯದು ಬಿಲ್ಲ ಮಣಿತವನು, ಕಾಮಕಸ್ತೂರಿಯಾ ತೆನೆಗಿರುವ ಕಂ...
ಮೆಲ್ಲಮೆಲ್ಲನೆ ಅಂಬುದಗಳ ಬಂಬಲು ಬಂದು ಹುಣ್ಣಿಮೆಯ ಹೊಂಗದಿರನನು ಮುತ್ತಲೆಳಸುವದು ತಾರೆಗಳ ಬಳಗವನು ಚದರಿಸುತ ಬಳಸುವದು,- ಮುಗಿಲ ಮಂಡಲದೀಚೆ ಕಾರ್‍ಮುಗಿಲೊ ಎನೆ ನಿಂದು, ಮಿಡುಕಿದೆನು ಮನದೊಳಗೆ ಏಕಿದೀ ಬಗೆಯೆಂದು. ಕಾರಣವನರಿಯದಲೆ ಲೋಕ ಕಳವಳಿಸುವುದು...














