(Forget-me-not) ನೆನಹು-ಹೂಗಳ ನೋಡಿ ತಣಿಯದವರಾರು? ಅವುಗಳಾ ಚೆಲುವಿಕೆಗೆ ಮಣಿಯದವರಾರು? ಇಂದ್ರನೀಲಗಳಂತೆ ಕಳೆವೆತ್ತು, ನಿಂತು- ನೋಡ ಬಾ! ಹೂಗಳಿವು ನಗುತಲಿಹವೆಂತು! ತಾಯಿ! ಪ್ರಕೃತಿಯೆ! ನಿನ್ನ ಬೆಂಡೋಲೆಯೇನು? ತಿಳಿಯದಚ್ಚರಿಗೊಳುತ ನೆನೆಯುತಿಹೆ ನಾನು: ಹಸಿರ ಮುಗಿಲೊಳು ಮೆರೆವ ನೀಲ ತಾರೆಗಳು,- ಇವಕಿಲ್ಲ ಬೆ...

ಆಸರೆ ಬಯಸಿದ ಜೀವ ಮಗನ ಬೆಳೆಸಿತು ನೋಡ ಇಳಿ ವಯಸಿನಲಿ ತನಗೆ ಊರುಗೋಲಾಗಲೆಂದು. ಮಡಿಲಲಿ ಹೊತ್ತು ತುತ್ತ ಇತ್ತು ವಿದ್ಯೆಯ ಇತ್ತು ಸಂಸ್ಕಾರವ ಕೊಟ್ಟು ಬೆಳೆಸಿದರು ಮಗನ ನಲಿಯುತ ಕುಲ ಕೀರ್ತಿ ಬೆಳಗಲೆಂದು. ಮಗನ ಬೆಳಸಿದ ಜೀವ ಮದುವೆ ಮಾಡಿತು ನೋಡ ವಂಶ ಕ...

ರಾಜಮಹಾರಾಜರ, ಚಕ್ರವರ್ತಿ ಬಾದಶಹರ ಜೀವ ಕಾಪಾಡಲು, ನೆರಳಂಬಂತೆ ಹಿಂದಿದ್ದೆ, ಮುಂದಿದ್ದೆ, ಜೊತೆಗಿದ್ದೆ. ಗೆಳೆಯನಾಗಿ, ಭಂಟನಾಗಿ, ಸಲಹೆಗಾರನಾಗಿ, ಚರಣದಾಸನಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ. ನನ್ನ ಜೀವ ತೆತ್ತು ಅವನ ಜೀವ ರಕ್ಷಿಸಿದ್ದೆ. ...

೨೦೦೯ರ ಲೋಕಸಭಾ ಚುನಾವಣೆಯು ಅನೇಕ ದೃಷ್ಟಿಗಳಿಂದ ಮಹತ್ವ ಪಡೆದಿದೆ. ಅತಂತ್ರ ಲೋಕಸಭೆಯ ನಿರೀಕ್ಷೆಯಲ್ಲಿ ಹಗ್ಗ ಜಗ್ಗಾಟಕ್ಕೆ ಸಿದ್ದವಾಗಿಯೇ ಚುನಾವಣೆಗಿಳಿದ ಪಕ್ಷಗಳಿಗೆ ನಿರಾಶೆಯಾಗಿದೆ. ನಿರೀಕ್ಷೆ ಮೀರಿ ಬೆಂಬಲಗಳಿಸಿದ ಕಾಂಗ್ರೆಸ್‌ಗೆ ಸಂಭ್ರಮವೆನಿಸಿ...

ಗಿಡಿಗಿಡಿ ಗಿಡಿಗಿಡಿ ಗಿಡಿಗೆಂವ್ ಬುಡುಬುಡು ಬುಡುಬುಡು ಬುಡುಗೆಂವ್ ಬುಡುಬುಡ್ಕಿ ನುಡಿಯೊಂದ ಕೇಳಾರಿ ||ಪಲ್ಲ|| ಕಾಲೊಂದ ಬಂದೇತಿ ಗುರುಕಾಲ ಶುಭಕಾಲ ಮುಂದೀನ ಇಸವೀಯು ಬಲುಜೋರ ನಿಮದೆಲ್ಲ ಕಾರ್‍ಭಾರ ಮನಿಮುಂದ ದರಭಾರ ಮನಿಯಾಗ ಸರಕಾರ ಜೋರ್‍ದಾರ ||೧|...

ಅದೊಂದು ಹುಚ್ಚಾಸ್ಪತ್ರೆ ಆ ಆಸ್ಪತ್ರೆಯ ಬಾವಿಗೆ ಬಿದ್ದ ಹುಚ್ಚನನ್ನು ಮತ್ತೊಬ್ಬ ಹುಚ್ಚ ಬಾವಿಗೆ ಹಾರಿ ಪ್ರಾಣ ಉಳಿಸಿದ್ದ. ಅದೇ ದಿನ ಸಂಜೆ ಆ ಹುಚ್ಚು ಪ್ಯಾನಿಗೆ ನೇಣು ಹಾಕಿಕೊಂಡು ತನ್ನ ಪ್ರಾಣ ಕಳೆದುಕೊಂಡ. ಹುಚ್ಚಾಸ್ಪತ್ರೆ ಡಾಕ್ಟ್ರು ಮತ್ತೊಬ್ಬ ...

ಅಯೋಧ್ಯೆಯಲ್ಲಿ ಅಂದು ಹುಚ್ಚೆದ್ದು ಹರಿದ ಕೇಸರಿಹೊಳೆಯಲ್ಲಿ ಕೊಚ್ಚಿ ಹೋದ ಹೆಣಗಳೆಷ್ಟು ಹೇಳೋ ರಾಮಾ! ದೇಶದ ನಾಡಿಯಲ್ಲಿ ಹರಿದ ರಕ್ತದ ಕೆಂಪು ಮಡುಗಟ್ಟಿ ನಿಂತು ಹೆಪ್ಪುಗಟ್ಟಿದೆಯಲ್ಲೋ ರಾಮಾ ಮಂಜುಗಟ್ಟಿದೆಯಲ್ಲೋ! ಧರ್ಮಲಂಡ ಭಂಡ ಭಗವಾಗಳು ಹಚ್ಚಿದ ಕೋ...

ಸಾವಯವದೆಂದರದು ಬಲು ಸರಳ ಜೀವನ ತತ್ತ್ವವಿದನಾ ಪದವೆ ಎದೆ ತುಂಬಿ ಹೇಳಿದರು ಅವಯವಗಳುಪಯೋಗವನಧಿಕ ಗೊಳಿಸಿದರ ದುವೆ ಸಾವಯವವೆಂದೇನೆ ಕೇಳಿದರು ಬಲು ಧನದ ಕುರ್‍ಚಿ ತಾ ಮೆರೆಯುತಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ನನ್ನ ಕಾಲೇಜಿನೆದುರು ಯಮಾಲಯದಂತೆ ನಿಂತಿರುವ ರೋಗಗ್ರಸ್ತ, ಜರ್ಜರ ಮಹಾಮಹಡಿಯ ಪ್ರಾಚೀನ ಮಂದಿರದಲ್ಲಿ ದೇವರಿಲ್ಲ ಅವನ ಬದಲಿಗೆ ಅಧಿಕೃತ ಏಜಂಟ್‌ಗಳಾಗಿ ಮುದಿ, ತರುಣ ವೈದ್ಯರು ಗೌರ, ಮೃದು ಭಾವದ ನರ್ಸುಗಳು ಸೇವೆಯ ಪಣ ಹೊತ್ತು ಯಾವದೋ ಜನ್ಮದ ಋಣತೆರುವ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...