
ಅಗಲೆಲ್ಲ ಬೆವರ್ ಅರ್‍ಸಿ ಜೀತ ಕೆರ್‍ಕೊಂಡು ಅಟ್ಟೀಗ್ ನಾ ಬತ್ತಂದ್ರೆ ಮೈ ಕೈ ಮುರ್‍ಕೊಂಡು ಜೋಬೆಲ್ಲ ಜಡ್ತಿ ಮಾಡ್ತೌಳ್ ನನ್ ಎಡ್ತಿ! ೧ ಒಂದ್ ದಪ ತಂದ್ ಜೀತ ಪೂರ ಕೊಟ್ಬುಟ್ಟಿ ಯೆಂಡಕ್ ಒಂಬತ್ ಕಾಸ ಕೇಳ್ದ್ರೆ ಬಾಯ್ಬುಟ್ಟಿ- ಪೊರಕೇನ್ ಎತ್ತಿಡ್ದಿ ಬಡ...
ಕಟ್ಟುತಾವೆ ಹಕ್ಕಿ ಮಾಡಿನಲ್ಲಿ ಗೂಡು ಎಂಥ ಸಂಭ್ರಮ ಎಂಥ ಹುಲ್ಲು ಎಂಥ ಕಡ್ಡಿ ಈ ಮಾಡಿನಲ್ಲಿ ಬಂದು ಸೇರಿ ಎಂಥ ಸಂಭ್ರಮ ಕಟ್ಟುತಾವೆ ಜೇನ್ನೊಣ ಕೊಂಬೆಯಲ್ಲಿ ಹೊಟ್ಟು ಎಂಥ ಸಂಭ್ರಮ ಎಂಥ ಪರಾಗ ಎಂಥ ಮಧುರ ಈ ಕೊಂಬೆಯಲ್ಲಿ ಬಂದು ಸೇರಿ ಎಂಥ ಸಂಭ್ರಮ ಹುಟ್ಟ...
ಹಿಂದೊಮ್ಮೆ ಅವಳ ಮುಖ ನೋಡಲೆಂದೇ ಜನ ನೆರೆಯುತ್ತಿದ್ದರು ಭಾರಿ ಗುಂಪಿನಲ್ಲಿ, ಮಂಜಾಗುತ್ತಿದ್ದುವು ಮುದುಕರೆಲ್ಲರ ದೃಷ್ಟಿ ಅವಳನ್ನಟ್ಟಿ; ಜಿಪ್ಸಿಗಳ ಬೀಡಿನಲ್ಲಿ ಕಟ್ಟಕಡೆ ಸಭಿಕ ಸ್ತುತಿಸುವಂತೆ ಪತನಗೊಂಡ ವೈಭವವನ್ನ ಬರೆಯುವುದಿದೊಂದೆ ಕೈ ಗತಿಸಿದ್ದನ...
ಮನ್ಸ ಎಲ್ಲಿಂದ ಎಲ್ಗೋದ್ರೂನೆ ಬಾಯ್ ಇತ್ತಂದ್ರೆ ಬದಕ್ದ; ಮೆತ್ಗಿತ್ತಂದ್ರೆ-ಆಳ್ಗೊಂದ್ ಕಲ್ಲು! ತಕ್ಕೊ! ಇಡದಿ ತದಕ್ದ! ೧ ಯಿಡಿದ್ ದಬಾಯ್ಸಿ ಗಸೀಟೇಂದ್ರೆ ಬತ್ತು ತುಂಬಿದ್ ದೊನ್ನೆ! ಒಳ್ಳೆ ಮಾತ್ನಾಗ್ ತತ್ತಾಂತಂದ್ರೆ ಮೊಕ್ಕ್ ಮೂರ್‍ನಾಮ! ಸೊನ್ನೆ! ...
ಶ್ರೀ ಕರ್ಣಾಟಕರಾಜ್ಯ ವಾಸ್ತುಪತಿಯಂ, ನಾಸ್ತಿಕ್ಯ ರುಗ್ವೈದ್ಯನಂ, ವೇದಾಂತಾದಿ ಗತಾಧ್ವನಂ, ನಿಗಮಧರ್ಮೋದ್ಧಾರಣಾಚಾರ್ಯನಂ, ಮ್ಲೇಚ್ಛಾಚ್ಛಾನ್ನ ಪವಿತ್ರ ಭಾರತ ವಿಯನ್ಮಾಧ್ಯಂದಿನಾದಿತ್ಯನಂ, ವಿದ್ಯಾರಣ್ಯ ವರೇಣ್ಯನಂ ಚತುರ ಚಾತುರ್ವೈದ್ಯನಂ ವಂದಿಪೆ ||೧...
ಈಗ ಹೊರಬಂತೆಲ್ಲ ಸತ್ಯ, ಎಲ್ಲ ತಾಳಿಕೊ, ಸೋಲನ್ನೊಪ್ಪಿಕೊ; ಯಾರೇನೆ ಆಡಲಿ ಅಪಥ್ಯ ಭಂಡನುಡಿಗಳ ಕೊಂಚ ಸಹಿಸಿಕೊ ಸುಳ್ಳನೆಂಬುದು ಸಿದ್ಧವಾದರೂ, ತನ್ನೊಳಗೆ ಅಥವ ನೆರೆಹೊರೆಗೆ ನಾಚದಂಥವರ ಜೊತೆ ಸ್ಪರ್‍ಧೆ ಹಿರಿಜೀವ ನಡೆಸೀತು ಹೇಗೆ? ಹುಚ್ಚು ಬೆರಳಾಡಿದರು...













