ಹನಿಗವನ ಯಾವ ಲಿಪಿ? ಪರಿಮಳ ರಾವ್ ಜಿ ಆರ್ May 4, 2016February 2, 2016 ಬ್ರಹ್ಮ ಲಿಪಿಯಲ್ಲಿ ಕೊರೆದ ಬ್ರಹ್ಮ ಮಾನವನ ಹಣೆಬರಹ ಮಾರ್ಡ್ನ ಲಿಪಿಯಲ್ಲಿ ಮಾನವ ಬರೆದ ಬ್ರಹ್ಮನ ತಲೆ ಬರಹ ತಲೆನೋವ! ***** Read More
ಹನಿಗವನ ಇಲ್ಲದಿದ್ದರೇನು? ಪರಿಮಳ ರಾವ್ ಜಿ ಆರ್ April 27, 2016February 2, 2016 ಬುದ್ಧಿ ಇಲ್ಲದ ಮನುಷ್ಯ ಬಚ್ಚಲಿಲ್ಲದ ಮನೆ ಹೃದಯವಿಲ್ಲದ ಮನುಷ್ಯ ತೋಟವಿಲ್ಲದ ಮನೆ! ***** Read More
ಹನಿಗವನ ಏನಿಲ್ಲ? ಪರಿಮಳ ರಾವ್ ಜಿ ಆರ್ April 20, 2016February 2, 2016 ತಲೆಯಿಲ್ಲದವಗೆ ತಲೆ ಬಿಸಿ ಇಲ್ಲ ಕಲೆ ಇಲ್ಲದವಗೆ ಬಾಳು ಸಿಹಿ ಇಲ್ಲ ಬಲೆ ಇಲ್ಲದವಗೆ ಮೀನು ಮಾಣಿಕ್ಯವಿಲ್ಲ! ***** Read More
ಹನಿಗವನ ಕೊಂಡಿ ಪರಿಮಳ ರಾವ್ ಜಿ ಆರ್ April 13, 2016February 2, 2016 ಪ್ರೇಮಕ್ಕೆ ಕೊಂಡಿ ಸ್ನೇಹ ಸ್ನೇಹಕ್ಕೆ ಗಿಂಡಿ ಪ್ರೇಮ ಹೃದಯಕ್ಕೆ ಕಿಂಡಿ ಕಣ್ಣು ಬಾಳಿಗೆ ಬಂಡಿ ಗಂಡು ಹೆಣ್ಣು! ***** Read More
ಹನಿಗವನ ಲವ್ವು ಪರಿಮಳ ರಾವ್ ಜಿ ಆರ್ April 6, 2016February 2, 2016 ಬೆರಳಲಿ ಬೆರಳ ಹೊಸೆದು ನಡೆವ ದಾರಿ ಅದು ಟೈಂಪಾಸ್ ಲವ್ವು, ಬೆಂಚಿನ ಅಂಚಿನಲಿ ಕುಳಿತು ಆಡಿದೆರಡು ಮಾತು ಅದು ಬೈಪಾಸ್ ಲವ್ವು, ನಾಲ್ಕಿಉ ರಸ್ತೆಯಲಿ ಸೇರಿ ಸಿಕ್ಕಿಕೊಂಡರೆ ಅದು ಟ್ರಾಫಿಕ್ಜಾಮ್ ಲವ್ವು! ***** Read More
ಹನಿಗವನ ದೋಸ್ತಿ ಪರಿಮಳ ರಾವ್ ಜಿ ಆರ್ March 30, 2016February 2, 2016 ಬಾಲ್ಯದ ಗೆಳೆಯ ಚಡ್ಡಿ ದೋಸ್ತ್ ಈಗ ಅವನು ದಢಿಯಾ! ಬಾಲ್ಯದ ಗೆಳತಿ ‘ಗುಡಿಯಾ’ ಈಗ ಅವಳು, ‘ಬಢಿಯಾ’! ***** Read More
ಹನಿಗವನ ಕಿವಿಗಳು ಪರಿಮಳ ರಾವ್ ಜಿ ಆರ್ March 23, 2016February 2, 2016 ಕಿವಿಗಳು ಬೇಕು ಸಾರ್ ಕಿವಿಗಳು! ಕತ್ತೆಯ ಕಿವಿಗಳು ಕುದರೆಯ ಕಿವಿಗಳು ಹಸುವಿನ ಕಿವಿಗಳು ಎತ್ತಿನ ಕಿವಿಗಳು ಕವಿಯ ಭಂಡಾರ ತುಂಬಲು ಆನೆಯ ಕಿವಿಗಳು ಸಮಯವಿದ್ದರೆ ಕಾವ್ಯಕ್ಕೆ ಮಾನವನ ಕಿವಿಗಳು! ***** Read More
ಹನಿಗವನ ನಾನು – ಅವಳು ಪರಿಮಳ ರಾವ್ ಜಿ ಆರ್ March 16, 2016February 2, 2016 ದೃಷ್ಟಿ ಯುದ್ಧ ಮೊದಲು ಮುಷ್ಟಿ ಯುದ್ಧ ಎರಡು ಸೃಷ್ಟಿ ಯುದ್ಧ ಮೂರು ವರ್ಷ ಉರಳಿ ಅವಳಿ ಜವಳಿ ನಾವು ಆದೆವು ನಾಲ್ಕು! ***** Read More
ಹನಿಗವನ ಮ್ಯಾಚಿಂಗ್ ಪರಿಮಳ ರಾವ್ ಜಿ ಆರ್ March 9, 2016February 2, 2016 ಶರ್ಟಿಗೆ ಬೇಕು ಮ್ಯಾಚಿಂಗ್ ಪ್ಯಾಂಟು ಸೀರೆಗೆ ಬೇಕು ಮ್ಯಾಚಿಂಗ್ ಬ್ಲೌಸ್ ಗಂಡಿಗೆ ಬೇಕು ಮ್ಯಾಚಿಂಗ್ ಹೆಣ್ಣು ಎಲ್ಲಕೆ ಮಿಗಿಲು ಹೃದಯಕೆ ಬೇಕು ಸರ್ಚಿಂಗ್ ಕಣ್ಣು! ***** Read More
ಹನಿಗವನ ಶಕುನ ಪರಿಮಳ ರಾವ್ ಜಿ ಆರ್ March 2, 2016February 2, 2016 ಬೆಕ್ಕು ಅಡ್ಡ ಬಂದರೆ ಕೆಲಸಕ್ಕೆ ಅಪಶಕುನ ಹುಡುಗಿ ಅಡ್ಡ ಬಂದರೆ ಮದುವೆಗೆ ಶುಭ ಶಕುನ. ***** Read More