
ನೀವೆ ಟ್ರೇ. ಕಾ. ಏನು? ಅಲ್ಲಗಳೆಯುವಿರೇಕೆ? ಆ ಹೆಡಿಗೆ ಪಾವುಡವೆ ಹೇಳುವದು. ಅದು ಕುರ್‍ಚೆ- ಇತ್ತ ಬನ್ನಿರಿ ಹಸೆಯ ಮೇಲಿಂತು. ಊಂ? ಚರ್‍ಚೆ? ಆಧುನಿಕ ಕವಿತೆಯನು ಕುರಿತೊ? ಮೋರೆಯ ಮೇಕೆ- ಕಳೆಯ ಕಳೆಯಿರಿ ಮೊದಲು! ಸಾಲೆ ಹುಡುಗರ ಕೇಕೆ- ಯೆನ್ನುವಿರ ಈ...
“ಪದ್ಯವನ್ನು ಬರೆವ ಚಟ ಹೆಚ್ಚಾಯ್ತು, ದುಃಸಾಧ್ಯ, ದೈವವಶವೀ ಕವಿತೆ. ‘ಉದ್ಯಮ’ವ ಗೈಯ್ಯುವರು ಎಲ್ಲ ಮೊದ್ದರು ಇದನು; ತಿಣಿತಿಣಿಕಿ ಬರೆಯುವರು. ಇದರಿಂದ ನಮಗೆ ತಗಲುವ ಹಾನಿಯನವದ್ಯ. ಕಿತ್ತು ಹಾಕಿರಿ ಕವಿಯ; ಕಾವ್ಯಧೇನುವು ವಧ್ಯ. ಗದ್ಯವನ್ನು ಬ...
ವಾಗ್ದೇವಿ ಭಾಂಡಾರ ಮುದ್ರೆಯೊಡೆದಿಹ ರನ್ನ ನಾನಲ್ಲ. ಹೇಳಿದರೆ ನಾನೆ ಹೇಳುವದೆಂದು ಯಾವ ಮಹರಾಯನೂ ಹೇಳಿಲ್ಲ. ನಾನಿಂದು ತಿಳಿದಿಲ್ಲವಹುದೆಂದು ಸಕಲಗುಣಸಂಪನ್ನ. ಇಲ್ಲಿರದು ಬಹುರೀತಿ, ದಂಗುವಡಿಸುವ ಶಬ್ದ ಬಿರುದುಬಿದ್ದಣವಿರದೆ ಬರೆಯುವುದ್ಯಮಕಿಂತು ಅಣಿ...
ಈತನು ‘ಮಹಾಶಯನು’ ನಾಲ್ಕು ಜನರಲಿ ಗಣ್ಯ- ನೆಂದು ಮನ್ನಣೆವೆತ್ತ ಸಾಮಂತ. ಎಂತೆಂತು ಲಕ್ಷ್ಮಿಯನ್ನು ಒಲಿಸುವುದು,- ಇದರಲಿವಗಿಹ ಪುಣ್ಯ- ವೆಲ್ಲ ವ್ಯಯವಾಗಿಹುದು. ಇವ ತನ್ನನುಳಿದನ್ಯ- ರನ್ಯಾಯವನ್ನು ತಡೆಯ. ಯಮನ ಕೊಂತಕೆ ಕಂತ ವನು ಕೊಡುವ ಮುಂಚಿತವೆ ಸು...
‘ಪೇಳಿದರು ಕೆಟ್ಟ ಸುದ್ದಿಯ; ನೀನು ಪೋದುದನು.’ ಹೀಗೆ ಸಾಯುವುದುಂಟೆ, ತೊರೆದೆಲ್ಲ ಬಿನ್ನಾಣ? ಈ ಭೂಮಿಯಿತ್ತಯ್ಯ ನಿನಗೆ ಪಂಚಪ್ರಾಣ. ಇದು ಸ್ವರ್‍ಗವೆನುತಿದ್ದೆ. ಚಹ-ಕಾಫಿ-ಪಾನವನು ಮಾಡಿ ಭೂಸುರನಾದೆ. ಭಾಸುರಾಂಗನೆ ತಾನು ಕೃಷ್ಣ! ನಿನ ರುಕ್ಷ್ಮಿಣಿಯು...
ಆಂಗ್ಲರಾ ರಾಕ್ಷಸೀ ರಾಜಕಾರಣ ನಿಪುಣ! ಆಂಗ್ಲರಾ ಸಾಮ್ರಾಜ್ಯಮದ ಹೆತ್ತ ಚಾಣಿಕ್ಯ! ಕೃಷ್ಣ ಕಾರಸ್ಥಾನಿ! ತೃಷ್ಣೆಯಿಂದ ಸುರಗಣ- ವಿಟ್ಟಾಕಿರೀಟದಲಿ ಕೆಚ್ಚಿರುವ ಮಾಣಿಕ್ಯ! ವೈಶ್ಯಪುತ್ರರ ಕೈಲಿ ಕುಣಿವ ಕುಹಕ ಕುತಂತ್ರಿ! ಆಂಗ್ಲವೀರರ ಕೀರ್‍ತಿಯನ್ನೆ ನುಂಗ...














