
ನಿನಗಾಗೇ ಕಾಯುತಿರುವೆ ನೀನಿಲ್ಲದೆ ನೋಯುತಿರುವೆ ಮರಳಿ ಮರಳಿ ಬೇಯುತಿರುವೆ ಓ ಬೆಳಕೇ ಬಾ; ಬೇರಿಲ್ಲದೆ ಹೂವೆಲ್ಲಿದೆ ಹೂವಿಲ್ಲದೆ ಫಲವೆಲ್ಲಿದೆ ನಾನಿರುವೆನೆ ನೀನಿಲ್ಲದೆ ನಿಜದೊಲವೇ ಬಾ. ನಿನ್ನನುಳಿದು ಬಾಳೆ ಬರಿದು ಖಾಲಿ ಮುಗಿಲು ಜಲವೆ ಸುರಿದು ನನಗೇ...
ಕಾಣಬಹುದು ಹೇಗೆ ನಿನ್ನ ಕರೆಯಬಹುದು ಹೇಗೆ! ಯಾವ ಎಲ್ಲೆ ಇರದ ನಿನ್ನ ಅರಿಯಬಹುದು ಹೇಗೆ? ಹಗಲು ನಗಲು ಬೆಳಕ ಚೆಲ್ಲಿ ದೃಷ್ಟಿ ಕೊಡುವ ದಿವ್ಯವೇ ಇರುಳಿನಲ್ಲಿ ನೀಲನಭದಿ ದೀಪವುರಿವ ಕರುಣೆಯೇ ಮಳೆ ಬಿಸಿಲಿನ, ಹೊಳೆ ಉಸಿರಿನ ಪಾದದಲ್ಲಿ ಚಲಿಸಿ ಉದಯಾಸ್ತದ ...
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ ಎಲ್ಲಿರುವೆ ಹೇಳು ನೀ ನಿಜವೆ ನೆರಳೇ? ಮಂಜು ನೇಯುವ ಸಂಜೆಗನಸಿನಂತೆ ಸಂಜೆ ಬಿಸಿಲಿನ ಮಳೆಯ ಮನಸಿನಂತೆ ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರೊ ಎಸೆದ ಕೋಗಿಲೆಯ ದನಿಹರಳಿನಂತೆ- ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ...
ರಾತ್ರಿಯ ತಣ್ಣನೆ ತೋಳಿನಲಿ ಮಲಗಿರೆ ಲೋಕವೆ ಮೌನದಲಿ ಯಾರೋ ಬಂದು, ಹೊಸಿಲಲಿ ನಿಂದು ಸಣ್ಣಗೆ ಕೊಳಲಿನ ದನಿಯಲ್ಲಿ ಕರೆದರಂತಲ್ಲೆ ಹೆಸರನ್ನು ಕರೆದವರಾರೇ ನನ್ನನ್ನು? ಬೇಗೆಗಳೆಲ್ಲಾ ಆರಿರಲು ಗಾಳಿಯು ಒಯ್ಯನೆ ಸಾಗಿರಲು ಒಳಗೂ ಹೊರಗೂ ಹುಣ್ಣಿಮೆ ಚಂದಿರ ತ...
ಯಾರು ಸೃಷ್ಟಿಯ ಹೀಗೆ ಹೂಡಿದವನು ಅದರ ನಡಿಗೆಗೆ ತಾಳ ನೀಡಿದವನು? ಯಾರು ದೇಹದಿ ಜೀವ ಇರಿಸಿದವನು ಜೀವದಲಿ ಭಾವವ ಮೊಳೆಸಿದವನು ನೊಂದರೂ ಮಾಯುವ ಕನಸನ್ನು ನೇಯುವ ಸತ್ವವನು ಮನಸಿನಲಿ ಬೆಳೆಸಿದವನು? ನಿದ್ದೆಯಲು ನಮ್ಮನ್ನು ಕಾಯುವವನು ಎದ್ದ ಮೇಲೂ ಸ್ಮರಣೆ...
ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ ನಿನ್ನ ಅಲ್ಲಗಳೆದ ನಮ್ಮ ಕರುಣೆಯಿಂದ ಕಾಯೆ ಕಾರಿರುಳನು ಸೀಳಿ ಬರುವ ನಿಗಿ ನಿಗಿ ಉರಿಹರಳು ನೀಲಿನಭದ ಹಾಸಿನಲ್ಲಿ ಮಣಿನೇಯುವ ಇರುಳು, ಋತು ಮೀರದೆ ಮುಗಿಲ ಗಡಿಗೆ ಉರುಳಿ ಸುರಿವ ಜಲವು ಎಲ್ಲ ನಿನ್ನ ಲೀಲೆ ತ...
ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ? ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲ ತೆರೆಯ ಸೀಳಿ? ಬಾನನೀಲಿಯಲಿ ಕರಿ ಬಿಳಿ ಬಣ್ಣದ ಗಾನ ಚಿಮ್ಮಿದವರು? ಕಾನು ಮಲೆಗಳಲಿ ಚಿಗುರು ಹೂವುಗಳ ಚಪ್ಪರ ಬೆಳೆದವರು? ನಸುಕಿನ ಬೆಳಕನು ಮಂಜಿನ ತೆರೆಯಲಿ ಜಾಲಿಸಿ...
ಬಾ ಬಾ ಓ ಬೆಳಕೇ ಕರುಣಿಸಿ ಇಳಿ ನೆಲಕೆ ನೀನಿಲ್ಲದೆ ಬಾಳೆಲ್ಲಿದೆ? ಹೋಳಾಗಿದೆ ಬದುಕೇ ಕಾಡು ಕಡಲು ಬಾನು ಏನಿದ್ದೂ ಏನು? ಮೈಯೆಲ್ಲಿದೆ ಇಡಿ ಬುವಿಗೇ ಕಾಣಿಸದಿರ ನೀನು? ನಿನ್ನ ಕೃಪಾಚರಣ ಚಾಚಿ ತನ್ನ ಕಿರಣ ಸೋಂಕಿದೊಡನೆ ಸಂಚರಿಸಿದೆ ನೆಲದೆದೆಯಲಿ ಹರಣ! ...
ನೀನೆಲ್ಲೋ ನಾನೆಲ್ಲೋ ದೂರದೂರವಾಗಿ ಕಾಯುವೆವು ಕೂಡಲೆಂದು ಹೃದಯ ಭಾರವಾಗಿ ಜೊತೆಯಾಗಿರಲು ಇರುತಿತ್ತೇ ಇಂಥ ತೀವ್ರಧ್ಯಾನ? ನೆಲದ ಮಿತಿಯ ಮೀರಿದಂಥ ಸೂರ್ಯಚಂದ್ರ ಕಾಣದಂಥ ಕಲ್ಪನೆಗಳ ಯಾನ? ಇಂಥ ಪ್ರೀತಿಯೊ೦ದಕೇ ತಾಳಬಲ್ಲ ಕೆಚ್ಚು, ಬೇಡಿದೊಡನೆ ಬಾರದೆ ಹಾ...
ಹೇಳದಿದ್ದರು ನೀನು ಎಲ್ಲ ಬಲ್ಲೆನು ನಾನು ಏನಿದೆ ಎಂದು ಎದೆಯಾಳದಲ್ಲಿ; ನಿನ್ನ ಕಣ್ಣಿನೊಳೇನೊ ನೋವು ತೇಲುತ್ತಿಹುದು ಕರಿಮೋಡ ಸುಳಿದಂತೆ ಬಾನಿನಲ್ಲಿ ನೂರು ಹಳೆ ನೆನಪುಗಳು ಚೀರಿ ಹೊಮ್ಮುತ್ತಲಿವೆ ಮರವೆಯಲಿ ಹುಗಿದರೂ ಮೇಲಕೆದ್ದು; ನಮ್ಮ ಮೇಲೇ ಏಕೆ ವಿ...














