
ಕವಿಯ ಹುಚ್ಚು ಮನಸ್ಸು ಕುಳಿತಲ್ಲಿ ಕೂರುವುದಿಲ್ಲ ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ನೆಗೆಯುತ್ತಲೇ ಇರುತ್ತದೆ ಅದು ಉದಾತ್ತವಾಗಲು ಬಯಸುತ್ತಲೇ ಸಣ್ಣತನವನ್ನೂ ತೋರಿಸುತ್ತದೆ ತಥಾಗತನ ಧ್ಯಾನದಲ್ಲಿ ಕೂಡ ಯೋನಿ ಶಿಶ್ನಗಳ ಕುರಿತು ಯೋಚಿಸುತ್ತದ...
ಬಿಳಿಯ ಗೋಡೆಯಲಿ ಬರೆದ ಅಕ್ಷರಗಳು ಮಾಯುವುದಿಲ್ಲ ಬೇಗನೆ ದಾರಿಯಲಿ ನಡೆವವರನ್ನು ನೋಡುತ್ತ ಕುಳಿತುಕೊಳ್ಳುತ್ತವೆ ಸುಮ್ಮನೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾಗುತ್ತ ಹೊಗುತ್ತವೆ ಅರ್ಥವಾಗದಿದ್ದಾಗ ಪ್ರಶ್ನೆಗಳ ರೂಪದಲಿ ಬಹುಕಾಲ ಕಾಡುತ್ತವೆ ಕಾಲ ...
ನವಿಲಿನ ಕಣ್ಣಿನ ಬಣ್ಣವ ಹಿಡಿದು ಮುಳುಗುವ ಸೂರ್ಯನ ಕಿರಣವ ತಡೆದು ಮಾರ್ಗದ ಮಧ್ಯೆ ನಿಲ್ಲಿಸುವವರು ಪೋಸ್ಟರ್ ಬರೆಯುವ ಅನಾಮಿಕರು ರೆಡ್ಡಿಯಂಗಡಿ ಅಟ್ಟದ ಮೇಲೆ ಬಣ್ಣ ಬಣ್ಣಗಳ ಸರಮಾಲೆ ಸಕ್ಕರೆ ಕಾರ್ಖಾನೆಯಲಿ ನಾಳೆಯಿಂದ ಸಂಪು ಅದಕೆಂದೇ ಇಲ್ಲಿ ಇಷ್ಟೊಂದ...
ನನ್ನ ಸಂಕಲನವೆಂದರೆ ನದಿ ಅದರ ಕವಿತೆಗಳೆಂದರೆ ಉಪನದಿಗಳು ಅವು ಎಲ್ಲಿಂದಲೊ ಯಾವ ಮೂಲದಿಂದಲೊ ಹುಟ್ಟಿ ಬಂದಿವೆ-ಎಷ್ಟೊ ನೆಲದಲ್ಲಿ ಎಷ್ಟೊ ಹೊಲದಲ್ಲಿ ಹರಿದು ಬಂದಿವೆ ನನ್ನ ಸಂಕಲನವೆಂದರೆ ವೃಕ್ಷ ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು ಅವು ವಿವಿಧ ದಿಕ...
ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ- ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ- ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು ಪ್ರೀ...
ರೂಪಮಹಲಿನ ರಾಣಿ! ತಂದಿರುವೆನಿದೊ ನೂಲೇಣಿ ಬಿಡಿಸಲೆಂದೆ ನಿನ್ನ ಸೆರೆ ಬಂದಿರುವೆ ಕಿಟಕಿ ತೆರೆ ಇಳಿದು ಬಾ ಒಂದೊಂದೆ ಮೆಟ್ಪಲನು ನನ್ನ ಹಿಂದೆ ಹಿಡಿ ನನ್ನ ಕೈಯ ಇದು ಕೋಳಿ ಕೂಗುವ ಸಮಯ ತಲ್ಲಣಿಸದಿರಲಿ ಮನ ಉಳಿದುದೆಲ್ಲವು ಮೌನ ಬಿದ್ದು ದಾರಿಯುದ್ದಕು ತ...














