Home / Poem

Browsing Tag: Poem

ಬೆಂಗಳೂರಿನ ಗಾಳಿಮಳೆಗೆ ಮೈ ಒಡ್ಡಿ ಮಲಗುವುದು ಸುಖದಾಯಕವೆನಿಸುತ್ತದೆ; ಎಲ್ಲೋ ಬೇರ್ಪಟ್ಟ ಕನಸುಗಳು ಮತ್ತೊಮ್ಮೆ ಸಾಕಾರಗೊಂಡಂತೆ. ಈ ವೇಳೆ ವಸತಿಗೃಹಗಳಲ್ಲಿ ಕಾಲ ನೂಕುತ್ತಿರುವ ಜನ ಕಳ್ಳ ನೋಟಗಳಲ್ಲಿ ತಲ್ಲೀನರಾಗಿರುತ್ತಾರೆ. ಕೋಣೆ ಬಾಗಿಲು ಎಡತಾಕುವ,...

ಮುಗಿಲ ಮುತ್ತಿಡುವ ಗಿರಿ ಶಿಖರಗಳಲಿ ತೊರೆ, ನದಿಗಳ ಹಿಮದ ಜಾರುಂಡೆಗಳಲಿ ಕಾಳಕೂಟ ರೂಪದ ಕಾರ್ಗಿಲ್ ಕಣಿವೆಯಲ್ಲಿ ನರ್ತನ ಗೈಯ್ಯುತಿದ್ದವು ಸಾವು ನೋವುಗಳು ತಾಂಡವ ರೂಪದ ವೀರಯೋಧರು ಭಾರತಾಂಬೆಯ ಹೆಮ್ಮೆ ಕುವರರು ಚಳಿಗಾಳಿ ಹಸಿವೆನ್ನದೆ ಜೈಹಿಂದ್ ಎನ್ನು...

ಸ್ಥಿರವಲ್ಲಾ ಕಾಯಾ ಸ್ಥಿರವಲ್ಲಾ ಈ ಅ- ಸ್ಥಿರ ಶರೀರವ ನಂಬಲಿಬ್ಯಾಡಾ ||ಪ|| ಮರಳಿ ಮರಳಿ ಬಹು ತ್ವರದಿ ಭವಕೆ ಬಂದು ಸೊರಗಿ ಸುಖ-ದುಃಖ ಎರಡರ ಮಧ್ಯದಿ ||೧|| ಆತ್ಮವಿಚಾರವು ಆತ್ಮದೊಳಗಿರುತಿರೆ ಆತ್ಮ ಪರಮಾತ್ಮನ ಪ್ರಮಾಣಿಸಿ ನೋಡಿದ ||೨|| ಅಂದಿಗಿಂದಿಗ...

ಕಾಣದೆ ನೀ ಬೊಗಳಬ್ಯಾಡ  ಕೋಣನಂಥ  ರಂಡೆ ಜಾಣಜನರು ಕೂಡಿ ನಿಮ್ಮೋಣಿಯಲ್ಲ್ಹಾಯ್ದಿರಲು ಕೋಣಿಬಾಗಿಲಲಿ  ನಿಂತು ಗೋಣತಿರುವುವ ಮುಂಡೆ                   ||೧|| ನೆಟ್ಟಗಿಲ್ಲ ಮೈಬಣ್ಣ ರೊಟ್ಟಿ  ಹಂಚಿನ ಕರದ ತಟ್ಟದಲೆ ಬಿಟ್ಟು  ಮೋತಿಮ್ಯಾಲಿನ ಸೆರಗ ಜರ...

ಹನಿಹನಿಸೋ ಮುತ್ತ ಮಳೆಗೆ ಇಳೆಯ ಕಣ್ಣೊಳೆನಿತೊ ಕಾತುರ ಬಾನ ಇನಿಯನೊಲವಿಗಾಗಿ ಧರೆಗೆ ನಿತ್ಯ ಸಡಗರ || ಬಿರಿದ ಕುಸುಮ ಅರಳು ಸುಮವು ಒಲಿದ ಹೃದಯದ ಪ್ರೀತಿಗೆ ಕೆರೆ-ತೊರೆ ಸರೋವರ ನದನದಿಗಳಲ್ಲೂ ಜೊನ್ನ ಕಿರಣದ ಅಂದುಗೆ || ಪ್ರೇಮ ಸಂದೇಶ ಹೊತ್ತ ಹಕ್ಕಿ ಸ...

ತಂಗಾಳಿ… ಬೀಸುತಲಿ ಮೈ…ಮನ ಅರಳುತ ತೇಲಿ… ಬರುತಿಹದು ನಿನ್ನ…ಮಧುರ ನೆನಪು ಬಾನಂಗಳದಿ ಬಯಕೆ ಬೇಡುತಿಹ ಸಂಗವು ಕರಾಳ ರಾತ್ರಿಯಾಗಿ ಏಕಾಂಗಿತನದ ನೋವು ಗಾಯಗೊಳಿಸುತಲಿ… ತರುತಿಹದು ಸವಿನೆನಪು ಮನವೆಲ್ಲಾ ಅರಳಿಸಿಹದು ...

ಯಾವ ಶುಭಗಳಿಗೆಯಲಿ ಪ್ರಕೃತಿ ತಾನುದೆಯಿಸಿತೊ ಆವ ಶುಭ ವೇಳೆಯಲಿ ಜೀವ ಕಣ್ ತೆರೆಯಿತೊ ಅಮೃತ ಸೆಲೆ ನೆಲೆಯಂತೋ ದಯವಲೀಲೆ ||ಪ|| ಶುಭೋದಯದ ಹಗಲಿರುಳಿನಲಿ ನವೋದಯದ ಬಾಳ ಬೆಳಕು ಬೆಸುಗೆ ವಸುಗೆಯಲೆಂತೋ ಸಗ್ಗ ಸುಭಗ ||ಅ.ಪ|| ಈ ಮಣ್ಣು ಕಣ ಕಣದಿ ಹರಿವ ತೊರ...

ಹೊಸತನವ ಅರಸುತ ಮನದಿ-ಮುದಡಿ ಆಕ್ರೋಶದಿ ಅರಚುತ ಕೊರಗುವ ಕರಳು ನೋವು ಅರಿಯುವರಾರು ಹಟ್ಟಿ… ಬೆಟ್ಟಗಳ ನಡುವಲಿ.. ಹುಟ್ಟಿ ಬೆಳೆದು ಬಾಳಿದ ದಶ-ದಶಕಗಳ ಕಾಲ ಗತಿಸಿದರೂ ಕಾಣದು-ತಿಳಿಯದ ಹೊಸ ಬಗೆಯ.. ಹಸನ ಬದುಕು ಕಾಡು… ಮೋಡಗಳ ದಟ್ಟ ಕಣಿವ...

ಹುಟ್ಟಗರತಿಯ ಕಾಣಲಿಲ್ಲಾ ಕೊಟ್ಟ್ಯಾದಿಯಲ್ಲಾ ಹುಟ್ಟಗರತಿಯ ಕಾಣಲಿಲ್ಲಾ ||ಪ|| ಹುಟ್ಟಗರತಿಯ ಕಾಣಲಿಲ್ಲಾ ಪಟ್ಟಗುಡುಮ ರಂಡೆ ನೀನು ಪಟ್ಟದಯ್ಯನವರಿಳಿಯ ಬಂದರೆ ಎಟ್ಟಿ ಮಾತುಗಳಾಡುತೀದಿ ||೧|| ಮಾನವಂತರ ಮನೆಯೊಳ್ಹುಟ್ಟಿ ಆದೆಲ್ಲ ಕೊಟ್ಟಿ ಅಪಕೀರ್ತಿ ಅವ...

ಅವ್ವಾ… ಅವ್ವಾ… ಹೇಳು ದೇವದಾಸಿ ಅಂದರೇನು ನಿನಗೇಕೆ… ಅನ್ನುವರು ದೇವರ… ದಾಸಿ ನಿನ್ನ ಹಾಗೆಯೇ… ಇರುವ ನೆರೆಮನೆಯ ಸೀನು… ಶೇಖರನ… ಅವ್ವಂದಿರಿಗೇಕೆ… ಅನ್ನುವುದಿಲ್ಲ… ದೇವದಾಸಿ ಬೇಡವ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...