Home / Manjunatha V.M.

Browsing Tag: Manjunatha V.M.

  ಕೆಂಪು ಬಣ್ಣವೇ ಪ್ರಧಾನವಾಗಿ ಕಾಣುವ ಆ ಮರದೆಲೆಗಳಲಿ ಬತ್ತಿದ ಮೊಲೆಗಳು- ವಿಷಾದವನ್ನೂ, ಕೆಲವೊಮ್ಮೆ ಪ್ರೇಮವನ್ನೂ ಹಲವಾರು ಸಲ ಕ್ರೂರನಗೆಯನ್ನು ಪ್ರಯೋಗಿಸುತ್ತಿದ್ದವು. ಹಾಲು ಕುಡಿದು ಗಟ್ಟಿಗರಾಗಬಹುದಾಗಿದ್ದ ಆ ಮಕ್ಕಳು ಆ ಕೆಂಪುಬಣ್ಣದೆಲೆಗ...

  ಏಕಾಂಗಿತನ; ಅಳಿದುಳಿದ ನೆನಪುಗಳ ಅಧೋಲೋಕಕ್ಕೆ ಇಳಿದಿದ್ದಾಗಿದೆ. ವಿಷಪೂರಿತ ಮುಳ್ಳುಗಳು ಚಾಚಿಕೊಂಡಿರುವ ಸುಂದರ ಕವಿತೆಯೊಂದರ ಮೇಲೆ ಅವಳನ್ನು ಜೀವಿಸಲು ಬಿಟ್ಟು ಬಂದಿದ್ದೇನೆ. ನಿತ್ಯ ಬದುಕಿಗೆ ಒಗ್ಗಿ ಹೋಗಿದ್ದೇನೆ ಎನ್ನುತ್ತಾಳೆ, ತುಂಬು ಮ...

  ಬಗ್ಗಿ ನಡೆಯುತ್ತಾಳೆ ಬೀಳಿಸಿಕೊಂಡು ವ್ಯಸನಗಳನ್ನು, ಗೂನು ಬೆನ್ನಿನ ತರುಣಿ ಖಾಲಿ ರಸ್ತೆಯಲ್ಲಿ ಭಂಗಿ ಸೇದಿಕೊಂಡು. ಮೋಟು ಕೈ ಕಾಲುಗಳನ್ನು ಬಂಧಿಸುತ್ತಾಳೆ, ತಿವಿಯುತ್ತಾಳೆ ಕಾದ ಕಬ್ಬಿಣದ ಸಲಾಖೆಯಿಂದ ಮುಗ್ಧ ರಕ್ತವನ್ನು, ಸುಡುತ್ತಾಳೆ ಬಂದ...

  ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ. ಅಷ್ಟೊತ್ತಿಗಾಗಲೇ ಛೋಟ ಡಾನ್‌ಗಳೆನ್ನಿಸಿಕೊಂಡವರ ತಲೆ ತೆಗೆದು ಬಂದಿದ್ದ. ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ; ಆದರೆ ಹೂ‌ಎಲೆ ತೊಟ್ಟುಗಳು ...

  ಒಂದು ಸಿನಿಮಾದಂತೆ ವರ್ಷದ ಪ್ರೇಮ ಪ್ರಕರಣವನ್ನು ಮರೆಯಲೆತ್ನಿಸುತ್ತೇನೆ: ಮೊಲೆ ಬಿಚ್ಚಿಕೊಂಡು ವಿಲನ್‌ಗಳೆದುರು ಮಳೆಹಾಡಿನಲ್ಲಿ ಕುಣಿದು ಕುಪ್ಪಳಿಸುತ್ತಾಳೆ, ಕಾಯಿಲೆಯ ನಾಯಕನಿಗೆ ತುಟಿ ಕೊಟ್ಟು ವಂಚಿಸಬಲ್ಲಳು; ಸಾಧ್ಯವಾದರೆ ಸಾಮೂಹಿಕ ಅತ್ಯ...

  ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, ‘ಅದು ಯಾವ ದಾರಿ?’ ಎಂದು ಗೆಳೆಯನನ್ನು ಕೇಳುತ್ತೇನೆ; ‘ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’ ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ್ಲಿ ಮ...

  ವಿಷಪೂರಿತ ಕತ್ತಾಳೆಮುಳ್ಳುಗಳು ಅವಳನ್ನು ತಿವಿಯುವಂತಿದ್ದವು. ಹೌದು, ಅವಳೇ ಮುಳ್ಳುಗಳನ್ನು ತಿನ್ನುತ್ತಾ ಬಹುದೂರದ ಕುರುಚಲು ಕಾಡಿನಲ್ಲಿ ವಾಸಿಸುತ್ತಿದ್ದುದನ್ನು ನೋಡಿದ್ದೇನೆ. ಎಲ್ಲೆಂದರಲ್ಲಿ ಮನಸ್ಸನ್ನು ಬಿಟ್ಟು, ಅಲ್ಲಿ ಆ ಮುಳ್ಳುಗಳಲಿ...

  ಕಸ ಹೊತ್ತು ಸಾಗಿಸುವ ಮುನಿಸಿಪಾಲಿಟಿ ಟ್ರಾಲಿಯಲ್ಲಿ ಆ ವೃದ್ಧೆಯ ಹೆಣವನ್ನಿಟ್ಟುಕೊಂಡು ಹೋಗುತ್ತಿದ್ದುದ್ದನ್ನು ನೋಡಿದೆ. ಗೋಣಿಚೀಲ ಹೊದಿಸಿ, ಬಡಜನರು ಪ್ರೀತಿಸುವ ಒಣಹೂವುಗಳಿಂದ ಕುತ್ತಿಗೆ ಬಿಗಿದಿದ್ದರು. ಟ್ರಾಲಿ ತಳ್ಳುವ ಮುನಿಸಿಪಾಲಿಟಿ ...

  ಬೃಹತ್ ಕಟ್ಟಡದಲ್ಲಿ ವಾಸಿಸುವ ಆ ಕುಟುಂಬದ ಮನುಷ್ಯನೊಬ್ಬ ಪ್ರತಿದಿನ ಬೆಳಿಗ್ಗೆ ಶೇವಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದ. ವಾಪಸ್ಸು ಹೋಗುವಾಗ ರಕ್ತ ಸುರಿಸಿಕೊಂಡೇ ಹೋಗುತ್ತಿದ್ದ. ಹಾಗೆ ಹೋಗುತ್ತಿದ್ದವನು, ಒಂದು ಪೆಗ್ ವಿಸ್ಕಿ ಏರಿಸದೇ ಹೋಗ...

ಮಧ್ಯಾಹ್ನ ಬಿಯರ್ ಕುಡಿದದ್ದು ತಲೆ ಸುತ್ತುತ್ತಿದೆ; ಈಗ ನನ್ನೊಂದಿಗಿಲ್ಲದ, ಮಠಕ್ಕೆ ಓದಲು ಬರುವ ಅವರ ನೆನಪು ಜೀವ ಹಿಂಡುತ್ತಿದೆ. ಹೆಣ ತಿನ್ನುವ ರಾತ್ರೆಯ ಹುಳುಗಳು ಸುಳಿದಾಡಲಾರಂಭಿಸಿವೆ. ಅವರ ಮುಗ್ಧತೆ, ಸೆಡವು, ಕುಗ್ರಾಮದ ಲಾವಣಿಗಳು- ಒಂದರಿಂದೊ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...