ಒಂದು ಸಿನಿಮಾದಂತೆ ವರ್ಷದ ಪ್ರೇಮ ಪ್ರಕರಣವನ್ನು
ಮರೆಯಲೆತ್ನಿಸುತ್ತೇನೆ:

ಮೊಲೆ ಬಿಚ್ಚಿಕೊಂಡು ವಿಲನ್‌ಗಳೆದುರು ಮಳೆಹಾಡಿನಲ್ಲಿ
ಕುಣಿದು ಕುಪ್ಪಳಿಸುತ್ತಾಳೆ,
ಕಾಯಿಲೆಯ ನಾಯಕನಿಗೆ ತುಟಿ ಕೊಟ್ಟು ವಂಚಿಸಬಲ್ಲಳು;
ಸಾಧ್ಯವಾದರೆ ಸಾಮೂಹಿಕ ಅತ್ಯಾಚಾರಕ್ಕೀಡಾಗಬಲ್ಲಳು.

ಪ್ರೀತಿ ಅಂಕುರಿಸಿದಾಗ ಧುತ್ತೆಂದು ಪುಟಿದ ಅದೇ ಹಾಡಿನೊಂದಿಗೆ
ಆ ಸಿನಿಮಾ ಮುಗಿಯುತ್ತದೆ.

ರೇಸ್‌ಕೋರ್ಸ್‌ನ ಬಳಿ ನಿಂತ ಯೂನಿಟ್ ಬಸ್ ಮುಂದಿನ
ಚಿತ್ರೀಕರಣಕ್ಕೆ ನಿಧಾನವಾಗಿ ಚಲಿಸಲಾರಂಭಿಸುತ್ತದೆ.

ನವ ನಟಿಯೊಬ್ಬಳು ಲ್ಯಾನ್ಸರ್ ಕಾರಿನಲ್ಲಿ ಹುಲ್ಲು ಗುಡಿಸಲು
ತಲುಪಲು ಅನುವಾಗುತ್ತಾಳೆ.

*****

Latest posts by ಮಂಜುನಾಥ ವಿ ಎಂ (see all)