Home / ಕಾಂಟೆಸಾದಲ್ಲಿ ಕಾವ್ಯ

Browsing Tag: ಕಾಂಟೆಸಾದಲ್ಲಿ ಕಾವ್ಯ

ಚರಿತ್ರೆಯ ಚಂದಿರ ಸುರಿಸಿದ್ದು ಬೆಳದಿಂಗಳಲ್ಲ ಗೆಳೆಯ, ಮಟಮಟ ಮಧ್ಯಾಹ್ನದ ಬಿಸಿಲು. ಈ ಬಿಸಿಲಿಗೊ ನೂರೆಂಟು ಟಿಸಿಲು! ಬೆಳೆಯುತ್ತ ಇಳಿಯುತ್ತ ಭೂಮಿಗೆ ಭೂತ ಬೆಂಗಾಡಿನ ಪಾತಾಳವಾಗುತ್ತ ಪಾತಾಳದೊಳಗೊಂದು ಪುರಾಣವಾಗುತ್ತ ನೋಟದೊಳಗೆ ನುಗ್ಗುವ ನೀರು ಪುರಾ...

ಬೋಧಿ ವೃಕ್ಷದ ಚಿತ್ರ ಬರೆದವರೆಲ್ಲ ಬುದ್ಧರಲ್ಲ ಹೆಚ್ಚೆಂದರೆ ಸಿದ್ದಾರ್‍ಥರು! ಕತ್ತಲಲ್ಲಿ ಕದ್ದು ಎದ್ದು ಹೋಗುವ ಇವರು ಬರೀ ಸಿದ್ದಾರ್‍ಥರೇ ಹೊರತು ಬುದ್ಧರಲ್ಲ. ಯಾಕೆಂದರೆ- ಬುದ್ಧರಾಗುವವರ ಬಾಯಲ್ಲಿ ನರಿ, ಮರಿಹಾಕುವುದಿಲ್ಲ. ನರಿ ನಾಲಗೆಯಲ್ಲಿ ನಯ...

ನಿಸರ್‍ಗವೆಂದರೆ ನನಗೆ ತುಂಬಾ ಇಷ್ಟ. ಆದರೆ ನಾನು ಹಿಗ್ಗುತಿಲ್ಲ- ಮೊಗ್ಗು ಮೌನಕ್ಕೆ, ಮಾತು ಹೂವಿಗೆ ಹಸಿರು ಹೃದಯಕ್ಕೆ, ಸೂರ್‍ಯ ಉದಯಕ್ಕೆ. ನಾನು ಹಿಗ್ಗುತ್ತೇನೆ- ಮಾವು ಮಾವಾಗಿ ಬೇವು ಬೇವಾಗಿ ಹಸಿರು ಹಸಿರಾಗಿ ಬೋಳು ಬೋಳಾಗಿ ಕಾಣುವ ಸಹಜ ಸಾಚಾತನಕ...

ಬೇರು ಕಿತ್ತ ಮರ, ನಾರು ನನ್ನ ನರ ಹಗ್ಗವಾಯಿತು ನಿಮಗೆ ಉರುಳು ನನಗೆ ಸಾವ ನೇಯುವ ನೂಲು, ಭಾವ ಬತ್ತಿದ ಮಾಲು ಬಣ್ಣ ಬಣ್ಣದ ನೇಯ್ಗೆ ಬಿದ್ದೆ ಬಲೆಗೆ. ನಿಮ್ಮ ಅನ್ನದ ಅಗುಳು, ಯಾರೂ ತಿನ್ನದ ಉಗುಳು ಕಾಲು ಒತ್ತುವ ಕಾಲ-ಎಲ್ಲ ನಾನು ಹುಟ್ಟು ಹಬ್ಬದ ಕಾಳು...

ನನ್ನ ಈ ನಾಡಿನಲ್ಲಿ ಭವ್ಯ ನಾಮ ಬೀಡಿನಲ್ಲಿ ಬೇಗೆಯೇ ಬೆಟ್ಟವಾಗಿ ಉತ್ತರಕ್ಕೆ ಕಾವಲು. ಬೆವರೆಲ್ಲ ನದಿಗಳಾಗಿ ಮೂರು ದಿಕ್ಕು ಕಡಲು. ಅತ್ತ ಬೆಟ್ಟ ಇತ್ತ ನೀರು ನಡುವೆ ನಗಲು ಎದ್ದವು- ಮೂಳೆಗಳೇ ಮರಗಳಾಗಿ ಆಸೆ ಹಸಿರು ಎಲೆಗಳು. ಕನಸು ಬಿರಿವ ಹೂವು- ಕಾಯ...

ಕತ್ತಲೆಲ್ಲ ಬೆತ್ತಲಾಗಿ ಬೆತ್ತಲೆಲ್ಲ ಬೆಳಗಾಗಿ ಕೆಂಪಾಗಲಿ ಕಪ್ಪು ನೆಲ. ಛಿದ್ರ ಛಿದ್ರವಾಗಲಿ ಬೇರು ಬೂದಿಯಾಗಲಿ ತುಳಿದು ನಗುವ ಜಾಲ. ಗುಡಿಸಲಿನ ಗರಿಗಳಿಂದ ಮನೆ ಮನೆಯ ಮನಸಿನಿಂದ ಹಾದಿ ಹೂಲದ ಎದೆಗಳಿಂದ ಹುಟ್ಟಿ ಬರಲಿ ಇಲ್ಲಿ ಹೋರಾಟದ ಹಾಡು. ಅಸ್ಪೃಶ...

ಹೊರಗೆ ಹತ್ತಿತು ಬೆಂಕಿ ಒಳಗೆ ತುಂಬಿತು ಹೂಗೆ ಒಳಗು-ಹೊರಗು ಬೇರಾಯಿತು ಹೇಗೆ? ಹೊರಗಡೆ ತೋಡುವ ವೈರದ-ಪಾಯಕೆ ಬೆಳೆಯಿತು ಒಳಗಡೆ ಉದ್ದನೆ ಗೋಡೆ! ಭೂಪಟ ಗೆರೆಗಳು ಭೂಮಿಗೇ ಅಲ್ಲ ಗರಗಸವಾಗಿವೆ ಮನಸಿನಲಿ ಜಾಲದ ಜಾತಿ ಸೀಳಿದ ವರ್‍ಗ ಸಲಗದ ಸದ್ದು ಸೆಣಸಿನಲ...

ಒಪ್ಪೊತ್ತಿನ ಊಟದಲ್ಲಿ ಹರಕು ಬಟ್ಟೆ ಬೆಳಕಿನಲ್ಲಿ ಅಳುವಿನಲ್ಲಿ ನಗುತ ನಾನು ಸೆಳವಿನಲ್ಲಿ ತೇಲುತ- ನೆಲವ ನೆಚ್ಚಿ ಇದ್ದೆನು ಬೆವರಿನಲ್ಲಿ ಬಾಳುತ ಒಡಲ ಸುಖ, ಪ್ರೀತಿ ಮಾತು ಬರುವುದೆಂದು ಕಾಯುತ. ಮಹಲಿನಿಂದ ಕುರ್ಚಿಯಿಂದ ಭೂಮಿಯೊಡಲ ಬಿರುಕಿನಿಂದ ಎದ್ದ...

ಸಿಡಿದು ಹೋಗಲಿ ತಾರೆ ನೆಗೆದು ಬೀಳಲಿ ಚಂದ್ರ ಹೂತು ಹೋಗಲಿ ಹಗಲು ಬಂದೀತು ನಮಗೆ ಹೊಸ ಹೊತ್ತು. ಕಗ್ಗತ್ತಲ ಕೋಟೆಯಲ್ಲಿ ಹೊಸ ಆಸೆಯ ಹುಟ್ಟು. ಕತ್ತು ಮುರಿಯುವ ಕತ್ತಲಿಗೆ ಇಟ್ಟೇವು ಭಗ್ಗೆನ್ನುವ ಬೆಂಕಿ ಬೆಂದು ಹೋಗಲಿ ಬೂದಿಯಾಗಲಿ ಸೆರೆ ಕುಡಿಸಿದ ಸಾಧನ...

ಬಡವರಾದೆವು ನಾವು ಬಂಧುಗಳು ಯಾರುಂಟು? ನಾವು ಬಸಿದಾ ಬೆವರು ಯಾರ ಹೊಟೇಲುಂಟು ? ಕಣ್ಣ ಹನಿ ಹರಿಸಿದೆವು ಮಗುವಂತೆ ಬೆಳಸಿದೆವು ಕಂಡೋರ ಮನೆಗೆಲ್ಲ ಕೊಟ್ಟು ಬಂದೆವಲ್ಲ ತಲೆ ಮ್ಯಾಲೆ ಸಾಲ ಹೊತ್ತು ತಂದೆವಲ್ಲ. ಮೂಳೆ ಮೂಳೆಯ ತೇದು ಬೆಳೆಸಿದೆವು ನಾವು ನಮ್...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...