
ಮನ ಕತ್ತಲೆ, ತನು ಹಮ್ಮು, ನೆನಹು ಮರವೆ, ಇವರೊಳಗೆ ಇದ್ದುಗನವ ಕಂಡಿಹೆನೆಂಬ ಅಣ್ಣಗಳಿರಾ ನೀವು ಕೇಳೀರೋ, ಘನವಕಾಂಬುದಕ್ಕೆ ಮನವೆಂತಾಗಬೇಕೆಂದರೆ, ಅಕ್ಕಿಯ ತಳಿಸಿದಂತೆ, ಅಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ, ಮನ ನಿರ್ಮಳವಾದಲ್ಲದೆ, ಘನವ ಕಾಣಬಾರದು ...
ಅಯ್ಯ ನಿಮ್ಮ ಚರಣವಿಡಿದು, ಮನವ ನಿಲಿಸಿದೆ. ತನುವ ಮರೆದೆ. ಮಹಾಘನವ ಕಂಡೆ. ಲಿಂಗದ ನೆಲೆವಿಡಿದೆ. ಅಂಗ ಲಿಂಗವೆಂದು ನೋಡಲು, ಕಂಗಳ ಮುಂದಣ ಬೆಳಗೆ ಲಿಂಗವಾಗಿ, ಆ ಕಂಗಳ ಮುಂದಣ ಬೆಳಗ ನೋಡಿಹೆನೆಂದು, ಸಂಗಸುಖವ ಮರೆದು, ಆ ಮಂಗಳದ ಮಹಾಬೆಳಗಿಲೆ ನಾ ನಿಜಮು...
ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು. ಅರಸಿಂಗೆ ನೋಟ ಬೇಟದವರಿಬ್ಬರು. ಅಟ್ಟು ಮಣಿಹ ಹರಿಮಣಿಹದವರು. ಅವರು ಸುತ್ತ ಓಲೈಸುವರು ಇಪ್ಪತೈದು ಮಂದಿ. ಅವರಿಗೆ ಕತ್ತಲೆ ಬಲೆಯ ಬೀಸಿ ಕೆಡಹಿ, ಅರಸಿನ ಗೊತ್ತುವಿಡಿದು, ಪುರವನೇರಿ, ನಿಶ್ಚಿಂತವಾಗಿ, ನಿಜದಲ್ಲಿ ...
ಮನ ನಿರ್ಮಳವ ಮಾಡಿದೆನೆಂದು, ತನುವ ಕರಗಿಸಿ, ಮನವ ಬಳಲಿಸಿ, ಕಳವಳಿಸಿ, ಕಣ್ಣು ಕಾಣದೆ ಅಂಧಕರಂತೆ ಮುಂದು ಗಾಣದೆ, ಸಂದೇಹದಲ್ಲಿ ಮುಳುಗಿರುವ ಮನುಜರಿರಾ. ನೀವು ಕೇಳೀರೋ, ಹೇಳಿಹೆನು. ಆ ಮನವ ನಿರ್ಮಳವ ಮಾಡಿ, ಆ ಘನವ ಕಾಂಬುವದಕ್ಕೆ ಆ ಮನ ಎಂತಾಗಬೇಕೆಂದ...
ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವನೆ ಅಳಿದು, ಲಿಂಗಗುಣವನೆ ನಿಲಿಸಿ, ಭಾವವಳಿದು ಭವಕೆ ಸವಿದು, ಮಹಾ ದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು ಅಪ್ಪಣಪ್ರಿಯ ಚನ್ನಬಸವಣ್ಣ? ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ...
ದಾರಿವಿಡಿದು ಬರಲು, ಮುಂದೆ ಸರೋವರವ ಕಂಡೆ, ಆ ಸರೋವರದ ಮೇಲೆ ಮಹಾಘನವ ಕಂಡೆ. ಮಹಾಘನವಿಡಿದು, ಮನವ ನಿಲಿಸಿ, ಕಾಯಗುಣಗಳನುಳಿದು, ಕರಣಗುಣವ ಸುಟ್ಟು, ಆಶೆಯನೆ ಅಳಿದು, ರೋಷವನೆ ನಿಲಿಸಿ, ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತ ಬಲ್ಲರು ಅಪ್ಪಣಪ್ರ...
ಅಯ್ಯ ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದರೆ, ಮರವೆಗೆ ಮುಂದು ಮಾಡಿತ್ತು. ಕರ್ಮಕ್ಕೆ ಗುರಿ ಮಾಡಿತ್ತು. ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ...
ಅಯ್ಯ ಅದೇನು ಕಾರಣವೆಂದರೆ, ಕಂಗಳ ಕತ್ತಲೆಯನೆ ಹರಿಸಿದಿರಿ. ಮನದ ಕಾಳಿಕೆಯನೆ ಹಿಂಗಿಸಿದಿರಿ. ಮಾತಿನ ಮೊದಲನೆ ಹರಿದಿರಿ. ಜ್ಯೋತಿಯ ಬೆಳಗ ತೋರಿದಿರಿ. ಮಾತು ಮಥನವ ಕೆಡಿಸಿದಿರಿ. ವ್ಯಾಕುಳವನೆ ಬಿಡಿಸಿ ವಿವೇಕಿಯ ಮಾಡಿ ನಿಮ್ಮ ಪಾದದಲ್ಲಿ ಏಕವಾದ ಕಾರಣದ...
ಅಯ್ಯ ನಾ ಕಾಂಬುದಕ್ಕೆ ನನ್ನ ಶಕ್ತಿಯಿಲ್ಲ. ನಿಮ್ಮಿಂದವೆ ಕಂಡೆನಯ್ಯ. ಅದೇನು ಕಾರಣವೆಂದರೆ, ತನುವ ತೋರಿದಿರಿ, ಮನವ ತೋರಿದಿರಿ, ಧನವ ತೋರಿದಿರಿ, ತನುವ ಗುರುವಿಗಿತ್ತು, ಮನವ ಲಿಂಗಕಿತ್ತು, ಧನವ ಜಂಗಮಕಿತ್ತು, ಇವೆಲ್ಲವು ನಿಮ್ಮೊಡವೆ ಎಂದು ನಿಮಗಿತ...
ಎನ್ನ ಸತ್ಯಳಮಾಡಿ, ನಿತ್ಯವ ತೋರಿ, ತತ್ವವೆಂಬುದನರುಹಿದಿರಿ. ಮತ್ಸರವ ಹಿಂಗಿಸಿದಿರಿ. ಆಸೆರೋಷವನೆ ಹಿಂಗಿಸಿದಿರಿ. ಮಾತುಮಥನವನೆ ಕೆಡಿಸಿದಿರಿ. ವ್ಯಾಕುಳವನೆ ಕೆಡಿಸಿ, ಜ್ಯೋತಿಯ ಬೆಳಗ ತೋರಿದಿರಯ್ಯ ಚನ್ನಮಲ್ಲೇಶ್ವರನು ಅಪ್ಪಣಪ್ರಿಯ ಚನ್ನಬಸವಣ್ಣಾ. *...














