ಮನ ಕತ್ತಲೆ, ತನು ಹಮ್ಮು, ನೆನಹು ಮರವೆ,
ಇವರೊಳಗೆ ಇದ್ದುಗನವ ಕಂಡಿಹೆನೆಂಬ
ಅಣ್ಣಗಳಿರಾ ನೀವು ಕೇಳೀರೋ,
ಘನವಕಾಂಬುದಕ್ಕೆ ಮನವೆಂತಾಗಬೇಕೆಂದರೆ,
ಅಕ್ಕಿಯ ತಳಿಸಿದಂತೆ, ಅಲ್ಲ ಸುಲಿದಂತೆ,
ಕನ್ನಡಿಯ ನೋಡಿದಂತೆ, ಮನ ನಿರ್ಮಳವಾದಲ್ಲದೆ,
ಘನವ ಕಾಣಬಾರದು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****