Home / ಪದ್ಯ

Browsing Tag: ಪದ್ಯ

ಕೊಟ್ಟದ್ದು ಪಾಷಾಣವಲ್ಲ ಪ್ರೀತಿ….. ತುಂಬಿದೆ, ತುಳುಕಿದೆ ತೊರೆದು ಭೀತಿ ಇನ್ನು ಕಾಯಲಾರೆ ನಿನಗಾಗಿ ಸಾಯಲಾರೆ ಒಂದು ಯುಗವೇ ನಮ್ಮಿಬ್ಬರ ನಡುವೆ ಇದ್ದು ಹೋಗಲಿ ಇಲ್ಲ…. ನನಗೇನೂ ಇಲ್ಲ ನಿನ್ನನ್ನು ಕಾಣುವ ಬಯಕೆ ನಾಕು ರಸ್ತೆ ಕೂಡುವಲ್ಲ...

ಕಣ್ಣು ಮುಚ್ಚಿ ದೀರ್ಘ ಪ್ರಾರ್ಥನೆ ಸಲ್ಲಿಸಿ, ತಲೆ ತುಂಬ ಎಳೆದ ಮುಸುಕಿನಡಿಯಲ್ಲಿ ಕಣ್ಣ ಮುತ್ತುಗಳ ಬಳಬಳನೆ ಉದುರಿಸಿ, ಕರುಳಿಗೆ ಹೊತ್ತಿಕೊಂಡ ಬೆಂಕಿಯ ಜ್ವಾಲೆ- ಹೊರ ಚಾಚದಂತೆ ನಂದಿಸಿ ಮೇಲೇಳುವ ಹೊಗೆಯ ನೋಡುತ್ತ ನಿಟ್ಟುಸಿರು ಬಿಡುತ್ತ ಗೆದ್ದು ಬರ...

ಮಣ್ಣಿನಲ್ಲೊಂದು ಅಣುವಾಗಿದ್ದೆ ಆಶೆಯ ಕುಲುಮೆ, ಆಗಸದೊಲುಮೆ ಹೊಮ್ಮಿದೆ ನಾ…. ಹೊರ ಹೊಮ್ಮಿದೆ ನಾ…. ಬೀಜವಾಗಿ. ಅಡವಿಯಲ್ಲೊಂದು ಗಿಡವಾಗಿದ್ದೆ ಗಾಳಿಯ ಗರಿಮೆ ವರುಣನ ಬಲುಮೆ ನೋಡಿದ ನಾ… ಜಗ ನೋಡಿದೆ ನಾ…. ಕುಸುಮವಾಗಿ. ಹ...

ಕೆಂಡ ಕಾರುತ ಸೂರ್ಯ ಹುಟ್ಟಿ ಬರುವುದನ್ನೆ ತವಕದಿಂದ ನೋಡುತ್ತಿದ್ದೆ. ಸೂರ್ಯಕಾಂತೆಯರ ದಂಡು ನಿಗಿನಿಗಿ ಕೆಂಡ ಸೂರ್ಯನ ಬಿಗಿದಪ್ಪಲು ಕಾದಿರುವ, ತಪ್ತ ಕಾಂತೆಯರು- ಆಕಾಶ ನೋಡುತ್ತಿರಲು ಭೂಮಂಡಲಕೆ ಹನಿಹನಿಯಾಗಿ ತೊಟ್ಟಿಕ್ಕುವ ಕೆಂಡದ ಮಳೆ ರಕ್ತದ ಹೊಳೆ...

ನನ್ನ ತಾಯಿ ಪರಾಶಕ್ತಿ ನನ್ನ ತಂದೆ ಅಲ್ಲಾಹು ಏನು ಬೇಕಾದರೂ ತಿಳಿದುಕೊಳ್ಳಿ ನಾನು ಹಿಂದು ನಾನು ಮುಸ್ಲಿಂ ಹೇಗೇ ಬೇಕಾದರೂ ಕರೆದುಕೊಳ್ಳಿ ***** ಗುಜರಾತ್‌ಗೆ ಕವಿ ಸ್ಪಂದನ...

ಹೇಳಿರೇ ಕೆಳದಿಯರೇ ಕನಸ ಕಂಡಿರೇನೆ ರಾಮನ ಇಲ್ಲ ರಾಜಕುಮಾರನ ಎದೆಯಲ್ಲಿ ಕನಸಿನ ಬೀಜಗಳ ಒತ್ತಾಗಿ ಬಿತ್ತಿ ಒಡೆತನವ ಸಾಧಿಸಿದಿರೇನೆ? ಎಚ್ಚರಿಕೆಯಿಂದ ದಾರಿಯಲಿ ಪರೀಕ್ಷಿಸಿ ಹೆಜ್ಜೆ ಇಟ್ಟರೂ ಚುಚ್ಚುವ ಸಾವಿರಾರು ಮುಳ್ಳುಗಳು ನೋವು ಯಾತನೆಗಳಿಗೆ ಸ್ತ್ರೀ...

ಅವರು ಕಾಲುಗಳು ಸೋಲುವ ತನಕ ಬೆಂಬತ್ತಿ ಹೋದರು. ಕೈಗಳು ಸೋಲುವ ತನಕ ಗುಂಡು ಹಾರಿಸಿದರು. ಕಣ್ಣುಗಳು ಸೋಲುವ ತನಕ ಕಿಡಿಗಳ ಕಾರಿದರು. ನಾಲಗೆ ಸೋಲುವ ತನಕ ನಿಂದೆಯ ಸುರಿಮಳೆಗೈದರು. ಹೃದಯ ತುಂಬಿ ಬಂದ ದಿನ ಮಮ್ಮಲ ಮರುಗಿದರು ಗೆದ್ದರು… ***** ಗ...

ವಿದೇಶಿ ಬಂಡವಾಳಿಗರ ಸೆಳೆಯಲು ಹೆಣೋರ್ವಳ ಹೂನಗೆ ಹೊತ್ತ ಸಂಸ್ಕೃತಿಯ ಮುಸುಕಿನಲಿ ಮುಗುಳ್ನಗೆಯ ಸ್ವಾಗತ, ವಿದೇಶಿ ಬಂಡವಾಳಕ್ಕೆ ಇದೇ ಸುವರ್ಣಾವಕಾಶ. ಬನ್ನಿ ಏಡ್ಸ್‌ನ ಭಯವಿಲ್ಲ ಬಹಳ ಉದಾರಿಗಳು ನಾವು ಮುಕ್ತ ಮಾರುಕಟ್ಟೆಯಲ್ಲಿ ಪರಕೀಯರಿಗೆ ಮಾರಿಕೊಂಡ ...

ಎಂತಹ ಬಿರುಗಾಳಿಯಾದರೂ ಶಾಂತವಾಗಲೇ ಬೇಕು. ಎಂತಹ ಜ್ವಾಲಾಮುಖಿಯಾದರೂ ತಣ್ಣಗಾಗಲೇ ಬೇಕು. ಎಂತಹ ಪ್ರವಾಹವಾದರೂ ನೆರೆ ತಗ್ಗಲೇಬೇಕು. ಎಲ್ಲರಲೂ ಅಂತಃಕರಣ ಇದ್ದೇ ಇರುವುದು. ಕೇಡನು ಅದು ಕೊನೆಗೂ ಗೆದ್ದೇ ತೀರುವುದು. ***** ಗುಜರಾತ್‌ಗೆ ಕವಿ ಸ್ಪಂದನ...

ಇಂದು ಮಹಿಳಾ ದಿನ ವರ್ಷಕ್ಕೊಂದು ಬಾರಿ. ಹಾಗೆ ಬಂದು ಹೀಗೆ ಹೋಗುವ ಈ ದಿನ ಇಂದೆಯೂ ಬಂದಿದೆ ಪ್ರತಿ ವರ್ಷದಂತೆ. ಅಂದು ಮಹಿಳೆಯರಿಗೆಲ್ಲ ಎಲ್ಲಿಲ್ಲದ ಸಂಭ್ರಮ, ಎಲ್ಲೆಡೆಗೂ ಭಾಷಣ, ವೇದಿಕೆ, ಆಟ, ಕೂಟ, ಸ್ಪರ್ಧೆಗಳು ಸೊಬಗಿನ ತಳಿರು ತೋರಣ ವರ್ಷದ ೩೬೪ ದ...

12345...26

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...