
ಇದುವೇ ಪಾಪಿಯ ಯಮಲೋಕ ! ಭಾವಿಕರೆಂಬರು ಭೂಲೋಕ ! ದೈತ್ಯರೆಂಬವರ ಕರೆಕಳಿಸಿ ಹೊಟ್ಟೆಗೆಂಬವರ ಹಿಡಿದೆಳಿಸಿ ಮುಟ್ಟದೆ ಮೈದೊಗಲನು ಸುಲಿಸಿ ಕಟ್ಟಿಗೆಯಿಲ್ಲದೆ ಕರುಳನು ಸುಡಿಸಿ ಇದುವೇ ಪಾಪಿಯ ಯಮಲೋಕ ! ಭಾವಿಕರೆಂಬರು ಭೂಲೋಕ ! ಒಕ್ಕಲಮಕ್ಕಳ ಹಿಡಿದೆಳೆದು ...
೧ ಮೂಡಣ ದಿಶೆಯಲಿ ಪಡುವಣ ದಿಶೆಯಲಿ ಮೂಡುವ ಅಡಗುವ ರವಿ ಹೊಂಬಣ್ಣವ ಭರದಲಿ, ಹರುಷದಿ ಹೊಗಳುತಲಿರುತಿರೆ ಕವಿಜನರು; ಚೆನ್ನೆಯೆ ನಿನ್ನಯ ಕನ್ನಡಿ ಹೊಳಪಿನ ಕನ್ನೆಯ ಮೇಲಣ ಕೆಂಬಣ್ಣವ ನಾ ಹೊಗಳುತ ನಿಂತಿಹೆ ಓಡುತೆ ಬಾ! ಬಾ! ಹಾರುತೆ ಬಾ! ಬಾ! ೨ ಸರದಲಿಶೋಭ...
ಕತ್ತಲು, ಕತ್ತಲು, ಸುತ್ತಲು ಕವಿದಿದೆ ಬೆಳಕೆಂಬುವದನು ತೂರುವಿರಾ ? ಅಪಾರ ಗಗನವು ಇರತಿಹುದಂತೆ ! ತಾರಾಗಣದಿಂ ತೋರುವುದಂತೆ ! ಕಾರ್‍ಮೋಡಗಳಿ೦ ಮುಸುಕಿಹುದಂತೆ ! ಚಂದ್ರ ಸೂರ್‍ಯರಲ್ಲಿರುತಿಹರಂತೆ ! ಜಗವನು ಬೆಳಗಲು ನಿಂದಿಹರಂತೆ ! ರಾಹು ಕೇತುಗಳು ಪ...
ಬಿಚ್ಚುಗನ್ನಡದಿ ಬರೆವ ಕವಿತೆಗಳ ಕಂಡು ಕಟ್ಟಳೆಗೆಟ್ಟ ಕುಲಗೇಡಿಯೆಂಬಭಿಧಾನವಿತ್ತು ಮನಸಾರೆ ನಗುವಿಯೇತಕೆ ಅಣ್ಣ? ನೀ ನಗುವಿಯೆಂಬುದ ಮರೆತು ನಾ ಕವಿತ ಕಟ್ಟಿಲ್ಲ. ನೀ ‘ಕವಿತೆ’ಯೆನಲೆಂದು ಕವಿತೆ ಬರೆದಿಲ್ಲ. ಕವಿಕಂಠೀರವರ ಕೀರ್‍ತಿಯನೆ ಬಯಸಿಲ್ಲ. ನನ್ನ...














