ಕೊನೆಯಾಶೆ

ಹೊಸದಿನದ ಹೊಸತುತ್ತೂರಿಯ ದನಿ- ಯು ಹೃದಯವನು ಸೇರೆ, ಕುದಿರಕ್ತ ತಳಮಳಿಸಲಾ ನವಜವ್ವನೋತ್ಸಾ- ಹದಲಿ ಪಂಜರದೊಳಿಹ ಗಿಳಿಯ ಹೊ- ರಗೆಳೆದು ತೂರಿ ತೇಲಲು ಬಿಟ್ಟು, "ಸೌಖ್ಯದಾಕಾಶದಲಿ ಮುಗಿಲು- ಹಣ್ಣುಗಳ ಸವಿದು ಶಾಂತಿಸರಕಿ- ಳಿದು ತಿಳಿನೀರನೀಂಟಿ ಸತಿ...

ತುತ್ತೂರಿ

ಕಾರ್ಮೋಡ ಮುತ್ತಿಗೆಯ ಕಿತ್ತೊಗೆದ ಅನಂತಾನಂದಮಯಮಾಕಾಶ! ಗಿರಿಗಹ್ವಕರಗಳಾಚೆಯಲಿ ಗಗನದಲಿ ತೇಲಿ ತಿರುಗುತಿಹ ಗಿಳಿವಿಂಡು! ಸರಸಿಜಳ ಸೆರೆಬಿಟ್ಟು ಸ್ವರ್ಣೋಜ್ವ- ಲೋದಯದ ಸುಮಂಗಲ ಪಾಡಿ ಕುಲುನಗೆಯ ಕುಸುಮಗಳ ಮೂಸಿ ಮುತ್ತಿಟ್ಟು ಮಧುವನೀಂಟುತಿಹ ತುಂಬಿಗಳು! ಏನಿದಚ್ಚರಿಯಮಮ! ಕೊನೆಯಿಲ್ಲದಾನಂದಮಯ ಕಡಲು! ನಭೋಮಂಡಲದಾಚೆಯಲಿ...

ನಾದಭೇದ

೧ ಢಣಢಣನಾದವು ಕೇಳಿಸಿತೆಂದರೆ, ದೇವರಪ್ರಾಣವು ಹಾರುವುದು. ಧರ್ಮಕ್ಕೆ ಬೆಂಕಿಯ ಬೀಳುವದು. ಸೂರ್ಯನ, ಸಾಗರ ನುಂಗುವುದು. ದೈತ್ಯರ ಮೇಳವು ಕೂಡುವುದು. ಕಾಲನ ನೃತ್ಯವು ನಡೆಯುವುದು. ಭೈರವಿರಾಗವು ಕೇಳುವುದು. ನರಕವು ಸ್ವಾಗತಗೈಯುವುದು. ಢಣಢಣನಾದವು ಕೇಳಿಸಿತೆಂದರೆ! ೨ ಝಣಝಣನಾದವು...

ಗೆಳೆಯನ ಗಂಡುಮಗು

(ನನ್ನ ಗೆಳೆಯನೋರ್ವನಿಗೆ ಗಂಡುಮಗು ಹುಟ್ಟಿತೆಂಬ ವಾರ್ತೆ ಕೇಳಿದಾಗ ಬರೆದು ಕಳಿಸಿದುದು.) ೧ ಗಂಡು ಜನಿಸಿತೇನು ಗೆಳೆಯ, ಗಂಡು ಗಂಡಸಾಗಲಿ! ಹಾಲು, ಹಣ್ಣು ಕದ್ದುತಿಂದು ಪುಂಡ ಹುಡುಗನಾಗಲಿ ! ೨ ಶಾಲೆಗವನ ಅಟ್ಟಿ, ಬಿಟ್ಟ, ಮನೆಯ...

ಸುಖ-ದುಃಖ

ಸತಿ:- ತೇಲು ಮೋಡಗಳ ತೀಡಿ ಮುಡಿಗಟ್ಟಿ ಮಲ್ಲಿಗೆ ಮುಡಿದು ಮುಗುಳುನಗೆ ಚೆಲ್ವ ಮುಗಿಲುಚೆನ್ನೆಯ ನೋಡಿ ನಗದಿರ್ಪ ಕವಿಯು ಕವಿಯೇನೆಂಬೆ! ಚೆನ್ನ ಚಿನ್ಮಯನೆ, ಚೆಲುನಗೆಯನೊಮ್ಮೆ ಬೀರು, ಸುಪ್ರಭಾತದ ಸುಮನ ಸಂಚಯದಂತೆ! ಕಿರುನೃತ್ಯಗೈಯೊಮ್ಮೆ ಮಧುವನೀಂಟಿ ಮೈ- ಮರೆತ...

ಗಂಡಸಿನ ‘ಹೂಂಕಾರ’!

ಸೂಳೆಕುದುರೆಯ ಬಿಟ್ಟು ಮೂಜಗದಿ ಸಂಚರಿಸಿದೆವು, ಕಟಿ ಹಾಕುವ ಕಲಿಯು ಒಬ್ಬನಿಲ್ಲವು ಎಂಬ ಹೆಬ್ಬುಬ್ಬಿನೀ ಚಿಹ್ನ ಗಂಡಸಿನ ಹೃದಯ `ಹೂಂಕಾರ'! ಮುದುಕನಾಹುತಿ ಕೊಟ್ಟು ಹುಡುಗಿಯ ತಲೆಬುರುಡಿಯನು ಕೆಂಪು ಬಟ್ಟೆಯೊಳದ್ದಿ ಪೂರ್ವ-ಪಶ್ಚಿಮದಿ ಮೆರೆಯಿಸಿದೆವೆಂದು ಗಂಡಸಿನ ಹೃದಯ `ಹೂಂಕಾರ'!...

ಬೇಂದ್ರೆ ಯವರ ‘ಗರಿ’

(ನಾಲ್ಕೈದು ಗೆಳೆಯರು ಕೂಡಿ ಸಾಹಿತ್ಯ ಕ್ರೀಡೆಯಾಡುತಲಿದ್ದೆವು. ಗೆಳೆಯನೋರ್ವನು ನನಗೆ ಪುಚ್ಛ, ಪಲ್ಲಕ್ಕಿ, ಪರಮೇಶ, ಪರ್ವತ, ಪಟ ಈ ಐದು ಶಬ್ದಗಳನ್ನು ಪ್ರಯೋಗಿಸಿ, ಜನಪದ ಶೈಲಿಯಲ್ಲಿ ಈ ಕೂಡಲೆ ಒಂದು ಪದ ಕಟ್ಟು ಎಂದ. ಆಗೆ...

ಕಣ್ಣು ಮುಚ್ಚಾಟ!

೧ ಅಜ್ಜ ಕಣ್ಣು ಮುಚ್ಚಿ ಬಿಟ್ಟ! ಕೈಯ ಹಿಡಿದು ಕೇಳಿಬಿಟ್ಟ! ೨ "ಇವಳಬಿಟ್ಟು ಇವಳುಯಾರು? ಇವನಬಿಟ್ಟು ಇವನುಯಾರು?” ೩ ಇವಳುಗಂಗೆ, ಇವಳುಗೌರಿ! ಬ್ರಹ್ಮ, ವಿಷ್ಣು, ರುದ್ರರಿವರು! ೪ "ಹೋಗೆ ಗಂಗಿ, ಹೋಗೆ ಗೌರಿ! ಹೋಗೊ...

ಧರ್ಮ

೧ ಕೂಳಿಲ್ಲದಿಹ ನನಗೆ ಕಲ್ಲಿನಾರ್ಚನೆಯಂತೆ! ಸೆರೆಮನೆಯ ಸೋಬತಿಗೆ ಸೂರ್ಯ ಜಪ ತಪವಂತೆ! ೨ ನಾನೊಲ್ಲದಿಹ ನಾರಿ ನನಗಾಗಿ ಇಹಳಂತೆ! ಪಿತನ ನುಡಿ ಮೀರಿ ನಡೆಯೆ ನರಕವಂತೆ! ೩ ಹೆಣ್ಣಿನಾ ಹಣೆಬರಹ ಪುರುಷ ಬರೆದುದೆ ಅಂತೆ!...

ಭಿಕ್ಷುಕಿ

ಭಿಕ್ಷುಕಿ:- ಬಿಕ್ಷಾಂದೇಹಿ! ಭಿಕ್ಷಾಂದೇಹಿ! (ಅರಸನು ಬೀದಿಯಲ್ಲಿಯ ಇವಳನ್ನು ನೋಡಿ) ಅರಸ:- ಹಗಲಿರುಳು ಗಣಿಸದಲೆ, ಮಳೆಗಾಳಿಯೆಣಿಸದಲೆ ಮನೆಮಾರು ನೆನೆಯದಲೆ, ಬಳಗವನು ಕೂಡದಲೆ ಹರಕು ಸೀರೆಯನುಟ್ಟು, ಮಾಸಿದಾ ತಲೆಬಿಟ್ಟು ಕರದಿ ಜೋಳಿಗೆ ತೊಟ್ಟು, ಕಣ್ಣೆರಡು ಒಳನಟ್ಟು ಬೀದಿ...