
ಅದೆಷ್ಟೋ ಯೋಜನಗಳನ್ನು ದಾಟಿ ಬರುವ ಹಕ್ಕಿಗಳನ್ನು ಯಾರೂ ಹೂಮಾಲೆ ಹಾಕಿ ಬರಮಾಡಿಕೊಳ್ಳುವುದಿಲ್ಲ. ಸಪ್ತಮದಲ್ಲಿ ಹಾಡಿದರೂ ಕೋಗಿಲೆಗೆ ಯಾರೂ ಶಾಲು ಹೊದಿಸಿ ಸನ್ಮಾನಿಸುವುದಿಲ್ಲ ಹುಲ್ಲು-ಕಡ್ಡಿ ಹೆಕ್ಕಿ ಹೆಣೆದ ಗುಬ್ಬಿಯ ಗೂಡಿಗೆ ಯಾರೂ ಪ್ರಶಸ್ತಿ ನೀಡು...
ನಿನ್ನೊಳಗೊಂದು ಚಿರತೆಯಿತ್ತು ನಿನಗದು ಪದಕ ತಂದುಕೊಟ್ಟಿತು. ನಿನ್ನೊಳಗೊಂದು ನರಿಯೂ ಇತ್ತು ಅದು ನಿನ್ನನ್ನೆ ತಿಂದು ತೇಗಿತು. ಸ್ಯೂಲ್ ಪದ್ಯಗಳು – ೧೯೮೮ರಲ್ಲಿ ಸ್ಯೋಲ್‌ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ನೆನಪಿನಲ್ಲಿ ಬರೆದ ಕವನಗಳು **...
ಸೂರ್‍ಯ ಪ್ರತಿದಿನ ಕಡಲಲ್ಲಿ ಹನ್ನೆರಡು ತಾಸಿನ ಈಜಿನ ಅಭ್ಯಾಸ ನಡೆಸಿದ್ದಾನೆ. ಚಂದ್ರ ಮೈಲಿಗಟ್ಟಲೆ ಓಡಿದರೂ ದಣಿಯದೆ ನಸುನಗುತ್ತಾನೆ. ಕೋಟಿ ವರುಷಗಳಿಂದ ಈಜು ಮತ್ತು ಓಟದ ದಾಖಲೆಗಳು ಸೂರ್‍ಯಚಂದ್ರರ ಹೆಸರಿನಲ್ಲೆ ಇವೆ. ಇಬ್ಬರೂ ಸೇರಿ ಸಂಪಾದಿಸಿದ ಪದ...
ನಮ್ಮ ಕ್ರೀಡಾಪಟುಗಳು ಜಿಂಕೆಯಿಂದ ಓಟದ ಪಾಠ ಕಲಿತುಕೊಳ್ಳಲಿಲ್ಲ. ಮರಿಮೀನುಗಳನ್ನು ಗುರುವೆಂದು ಒಪ್ಪಿಕೊಳ್ಳಲಿಲ್ಲ ಆನಿಯಿಂದ ಭಾರ ಎತ್ತುವ ಕಲೆ ಕರಗತಗೊಳಿಸಿಕೊಳ್ಳಲಿಲ್ಲ. ಹಾಗಾಗಿ ಸಿಯೋಲ್‌ನಲ್ಲಿ ಒಂದೂ ಪದಕ ಸಿಗಲಿಲ್ಲ. ಸ್ಯೂಲ್ ಪದ್ಯಗಳು – ...
ನಿನ್ನ ಸಿಟ್ಟು ಸೆಡವುಗಳನ್ನು ದಿಕ್ಕರಿಸುತ್ತೇನೆ. ನಿನ್ನ ಪಂಜಿನಂತಹ ಕೈಗಳು ಸುಕೋಮಲ ಹೂಗಳನ್ನು ಹೊಸಕಿ ಹಾಕುವುದನ್ನೂ ನಿನ್ನ ಕೆಂಡದಂತಹ ಕಣ್ಣುಗಳು ಕೋಗಿಲೆಯ ಹಾಡುಗಳನ್ನು ನಿಷ್ಕರುಣೆಯಿಂದ ಸುಡುವುದನ್ನೂ ಧಿಕ್ಕರಿಸುತ್ತೇನೆ. ನೀನು ಮೈಯೆಲ್ಲಾ ಕಿಡ...
ಕಾನ್ಪುರದ ಎಲ್ಲ ಬೀದಿಗಳಲ್ಲಿ ಎಲ್ಲ ಮೆನಗಳಲ್ಲಿ ಮನೆಯ ಮಾಳಿಗೆಯಲ್ಲಿ ಮೂರು ಹೆಣಗಳು ತೂಗಿದವು ನಿಶ್ಚಿಂತೆಯಲ್ಲಿ. ಗುಲಾಬಿಯಷ್ಟೇ ಮೃದು ಮನಸಿನ ಜೀವಿಗಳು ಸಾವಿನಲ್ಲೂ ನೋವಿನ ಮುಖವನ್ನೇ ಹೊತ್ತಿದ್ದವು. ಮದುವೆಯ ಮಾರುಕಟ್ಟೆಯಲ್ಲಿ ಬಿಕರಿಯಾಗದ ಜೀವಗಳು...
ನಿನ್ನ ಪ್ರೀತಿಯನ್ನಷ್ಟೇ ಉಟ್ಟು ಹೊರಟು ನಿಂತಿದ್ದೇನೆ- ಇಗೋ ಹೊರಟೆ- ಎಲ್ಲವ ದಾಟಿ ಹೋಗಿಯೇ ಬಿಡುತ್ತೇನೆ ನೀ ಬಿಟ್ಟು ಹೋದ ತುಂಡು ನೆಲವನ್ನು ಉತ್ತು ಬಿತ್ತಿ ಫಸಲು ತೆಗೆಯುತ್ತೇನೆ ಚಳಿ-ಗಾಳಿಯೊಡನೆ ಗುದ್ದಾಡಿ ಕಲ್ಲುಗಳ ಜತೆಗೂಡಿ ಹಾಡಿ ಮೈಮರೆಯುತ್ತ...














