ಅದೆಷ್ಟೋ ಯೋಜನಗಳನ್ನು
ದಾಟಿ ಬರುವ ಹಕ್ಕಿಗಳನ್ನು
ಯಾರೂ ಹೂಮಾಲೆ ಹಾಕಿ
ಬರಮಾಡಿಕೊಳ್ಳುವುದಿಲ್ಲ.
ಸಪ್ತಮದಲ್ಲಿ ಹಾಡಿದರೂ
ಕೋಗಿಲೆಗೆ ಯಾರೂ
ಶಾಲು ಹೊದಿಸಿ ಸನ್ಮಾನಿಸುವುದಿಲ್ಲ
ಹುಲ್ಲು-ಕಡ್ಡಿ ಹೆಕ್ಕಿ ಹೆಣೆದ
ಗುಬ್ಬಿಯ ಗೂಡಿಗೆ
ಯಾರೂ ಪ್ರಶಸ್ತಿ ನೀಡುವುದಿಲ್ಲ.
ಅದು ಯಾವತ್ತೂ ಹಾಗೆ…
ಸಲ್ಲಬೇಕಾದವರಿಗೆ
ಪರದಕಗಳು, ಪದವಿಗಳು,
ಪ್ರಶಸ್ತಿಗಳು ಸಲ್ಲುವುದಿಲ್ಲ.
ಸ್ಯೂಲ್ ಪದ್ಯಗಳು – ೧೯೮೮ರಲ್ಲಿ ಸ್ಯೋಲ್‌ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ನೆನಪಿನಲ್ಲಿ ಬರೆದ ಕವನಗಳು
*****
Latest posts by ಸವಿತಾ ನಾಗಭೂಷಣ (see all)
- ಬೇಡ… - January 23, 2021
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021