Home / ಚಂದ್ರನನ್ನು ಕರೆಯಿರಿ ಭೂಮಿಗೆ

Browsing Tag: ಚಂದ್ರನನ್ನು ಕರೆಯಿರಿ ಭೂಮಿಗೆ

ರುಮು ರುಮು ಗಾಳಿ ಬೀಸಿತು ಝಳ ಝಳ ನದಿ ಹರಿಯಿತು ತೊಟ ತೊಟ ಹನಿ ಉದುರಿತು ಮಿಣ ಮಿಣ ತಾರೆ ಮಿನುಗಿತು. ಏಯ್! ಯಾರಲ್ಲಿ? ಇದೆಲ್ಲಾ ಯಾಕೆ ನಡೆಯುತಿದೆ ಇಲ್ಲಿ? ಘಮ ಘಮ ಹೂ ಪರಿಮಳಿಸಿತು ಧಗ ಧಗ ಬೆಂಕಿ ಉರಿಯಿತು ಪಟ ಪಟ ರೆಕ್ಕೆ ಬೀಸಿತು …..ಹಕ್ಕ...

ಇಲ್ಲ…. ನಾನು ಕಣದಲ್ಲಿಲ್ಲ ಚಪ್ಪರ ಹಾರ ತುರಾಯಿಗಳೆ ಚಪ್ಪಾಳೆ ಶಿಳ್ಳೆ ಕೇಕೆಗಳೆ ನಾನು ಕಣದಲ್ಲಿಲ್ಲ. ಹೊಗಳಿಕೆಯ ಹೊನ್ನ ಶೂಲಗಳೆ ಭರವಸೆಯ ಬಿರುಸು ಬಾಣಗಳೆ ನಾನು ಕಣದಲ್ಲಿಲ್ಲ. ಎದುರಾಳಿಯ ಇರಿಯಲು ಸಿದ್ದವಾಗಿರುವ ಕತ್ತಿಗಳೆ ನನ್ನನ್ನು ಕಾಪಾ...

ಮಗು ಚಿತ್ರ ಬರೆಯಿತು ಬೆರಳುಗಳ ಕೊರಳ ಆಲಿಸಿ ಗೆರೆಯನೆಳೆಯಿತು. ಪುಟ್ಟ ಮನೆಯೊಂದ ಕಟ್ಟಿ ಮನೆಯ ಮುಂದೊಂದು ಮರವ ನೆಟ್ಟು ರೆಂಬೆ ಕೊಂಬೆಗೆ ಎಲೆಯನಿಟ್ಟು ಎಲೆಯ ನಡುವೆ ಹೂವನರಳಿಸಿ ಹೂವಿನ ಜೊತೆಗೆ ಹಣ್ಣನಿರಿಸಿ ಹಿಗ್ಗಿ ನಲಿಯಿತು. ಮಗು ಚಿತ್ರ ಬರೆಯಿತು...

ಎಲ್ಲ ನೆನಪುಗಳಿಗೆ ವಿರಾಮ ಹೋಗಿ ಬರುವೆ ರಾಮ ಇರಿಸುವೆ ನನ್ಹೆಸರ ಉರಿಸಿಕೊ ನಿನ್ನೊಳಗೆ ಹೋಗಿ ಬರುವೆ ರಾಮ…. ನಾ ಬಲ್ಲೆ ನಿನ್ನೊಲುಮೆ ಇತ್ತ ಬಿತ್ತಿ ಬೆಳೆದಿಹ ಪ್ರೇಮ ಅತ್ತ ಒತ್ತಿ ಸುತ್ತಿಹ ನೇಮ ಕೊರಗದಿರು ಮರುಗದಿರು ಹೋಗಿ ಬರುವೆ ರಾಮ&#823...

ಹೂವು ಮುಳ್ಳಿನ ಬಗ್ಗೆ ಮುಳ್ಳು ಹೂವಿನ ಬಗ್ಗೆ ಏನು ಹೇಳುತ್ತಿದೆಯೋ ಅರ್‍ಥವಾಗುತ್ತಿಲ್ಲ. ಹಗಲು ರಾತ್ರಿಯ ಬಗ್ಗೆ ರಾತ್ರಿ ಹಗಲಿನ ಬಗ್ಗೆ ಏನು ಹೇಳುತ್ತಿದೆಯೊ ಅರ್‍ಥವಾಗುತ್ತಿಲ್ಲ. ನಗು ಅಳುವಿನ ಬಗ್ಗೆ ಅಳು ನಗುವಿನ ಬಗ್ಗೆ ಏನು ಹೇಳುತ್ತಿದೆಯೊ ಅರ್...

ಬಿಸಿಲು ಕುದುರೆಯನೇರಿ ಹೋಗಬೇಡೋ ಗೆಳೆಯಾ ಬೆಂಗಾಡಿನಲಿ ಸುತ್ತಿ ಬೆವರ ಸುರಿಸಲು ಬೇಡ ಬಯಕೆ ಬೆಟ್ಟವ ಹತ್ತಿ ಹೋಗಬೇಡೋ ಗೆಳೆಯಾ ಬಂಡೆಯಂತೆ ಉರುಳಿ ಬೆರಗಾಗಲು ಬೇಡ ||ಬಿಸಿಲು|| ಬಿಸಿಲು ಮಚ್ಚಿನ ಮೇಲೆ ಬಿರಿದಿರಲು ಬಳಿ ಸೂರ್‍ಯ ಕಿಸುರ ಕಣ್ಣ ಒರೆಸಿ ತು...

ಮುಳ್ಳು ಬಿತ್ತಿದ ಕೈಗೆ ಹೂವು ನೀಡಕ್ಕ…. ಹಾವು ಹೆಡೆ ಬಿಚ್ಚಿದರೆ ಹಾಲು ನೀಡಕ್ಕ ಸೀದ ಮಡಿಕೆಗೂ ದುಃಖ ಸುಟ್ಟ ಕಟ್ಟಿಗೆಗೂ ದುಃಖ ಬೆಂದ ಬೆಳ್ಳಿಯಂತೆ ಬದುಕು ಕಾಣಕ್ಕ….. ||ಮುಳ್ಳು|| ಉದುರಿದ ಎಲೆಗಳಿಗೂ ದುಃಖ ಅದುರಿದ ಭೂಮಿಗೂ ದುಃಖ ಏ...

ಅವ್ವ ಕೇಳೇ ನಾನೊಂದ ಕನಸ ಕಂಡೇ…. ಅವ್ವ ಕೇಳೇ ಕನಸೊಂದ ಕಂಡೆನೆ…. ಮುಂಗೋಳಿ ಕೂಗಿತ್ತು ಮೂಡಲ್ಲಿ ಕೆಂಪಿತ್ತು ಬೆಳ್ಳಿಯೂ ಮರಳಿತ್ತು ಹಕ್ಕಿಯೂ ಹಾಡಿತ್ತು ಮಲ್ಲಿಗೆ ಸಂಪಿಗೆ ಘಮ್ಮೆಂದು ಬಿರಿದಿತ್ತು ಹಾದಿಲಿ ಇಬ್ಬನಿಯು ಮುತ್ತಾಗಿ ಸುರಿ...

ಅವ್ವ…. ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ ಮುದ್ದು ಮುದ್ದಾಗಿ ಮಾತಾಡಿ ಸೂರ್‍ಯಂಗೂ ಚಂದ್ರಂಗೂ ಮಂಕುಬೂದಿಯನೆರಚಿ ಹೂವು, ಎಲೆ, ಗಂಧ ಗಾಳಿಯ ಗಮನ ಎತ್ತೆತ್ತಲೋ ಸೆಳೆದು ಚಿಕ್ಕೆಯ ಬಳಗಕ್ಕೆ ಮಾಯಕಿನ್ನರಿ ನುಡಿಸಿ ಮೈಮರೆಸಿ ನದಿಯೂ ಬೆಟ್ಟವೂ...

ಕಾಮನಬಿಲ್ಲು ಅಷ್ಟೂ ಬಣ್ಣಗಳನ್ನು ಚೆಲ್ಲಿತು ನನಗೆ ನಾನೆ ಕೇಳಿಕೊಂಡೆ ನಿನಗೆ ಯಾವ ಬಣ್ಣ ಇಷ್ಟ? ಗೊರಟೆ, ಗುಲಾಬಿ, ಸೇವಂತಿಗೆ ದಾಸವಾಳ, ಕನಕಾಂಬರ, ಮಲ್ಲಿಗೆ ಹೆಣೆದು ನಿಂತವು ಅನ್ನಿಸಿತು: ಆಯ್ಕೆ ಬಹಳ ಕಷ್ಟ. ೨ ಹುಲಿ, ಕರಡಿ, ಆನೆ, ಅಳಿಲು? ಜಿಂಕೆ,...

123...5

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...