ಮಗು ಚಿತ್ರ ಬರೆಯಿತು
- ಬೇಡ… - January 23, 2021
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021
ಮಗು ಚಿತ್ರ ಬರೆಯಿತು ಬೆರಳುಗಳ ಕೊರಳ ಆಲಿಸಿ ಗೆರೆಯನೆಳೆಯಿತು. ಪುಟ್ಟ ಮನೆಯೊಂದ ಕಟ್ಟಿ ಮನೆಯ ಮುಂದೊಂದು ಮರವ ನೆಟ್ಟು ರೆಂಬೆ ಕೊಂಬೆಗೆ ಎಲೆಯನಿಟ್ಟು ಎಲೆಯ ನಡುವೆ ಹೂವನರಳಿಸಿ ಹೂವಿನ ಜೊತೆಗೆ ಹಣ್ಣನಿರಿಸಿ ಹಿಗ್ಗಿ ನಲಿಯಿತು. ಮಗು ಚಿತ್ರ ಬರೆಯಿತು ಬೆರಳುಗಳ ನಡೆ ನೋಡಿ ಗೆರೆಯನೆಳೆಯಿತು. ಮನೆಯ ಹಿಂದೊಂದು ಗುಡ್ಡವ ಕರೆದು ಗುಡ್ಡದ ಮೇಲೊಬ್ಬ ಸೂರ್ಯನ ಉರಿಸಿ […]