ಮುಳ್ಳು ಬಿತ್ತಿದ ಕೈಗೆ ಹೂವು ನೀಡಕ್ಕ….
ಹಾವು ಹೆಡೆ ಬಿಚ್ಚಿದರೆ ಹಾಲು ನೀಡಕ್ಕ

ಸೀದ ಮಡಿಕೆಗೂ ದುಃಖ ಸುಟ್ಟ ಕಟ್ಟಿಗೆಗೂ ದುಃಖ
ಬೆಂದ ಬೆಳ್ಳಿಯಂತೆ ಬದುಕು ಕಾಣಕ್ಕ….. ||ಮುಳ್ಳು||

ಉದುರಿದ ಎಲೆಗಳಿಗೂ ದುಃಖ ಅದುರಿದ ಭೂಮಿಗೂ ದುಃಖ
ಏರಿಳಿವ ಅಲೆಯಂತೆ ಬದುಕು ಕಾಣಕ್ಕ….. ||ಮುಳ್ಳು||

ಉರಿವ ಬೆಂಕಿಗೂ ದುಃಖ ಹರಿವ ನೀರಿಗೂ ದುಃಖ
ಬೀಸೋ ಗಾಳಿಯಂತೆ ಬದುಕು ಕಾಣಕ್ಕ….. ||ಮುಳ್ಳು||

ಮಿಡಿವ ತಂತಿಗೂ ದುಃಖ ನುಡಿವ ಮುದ್ದಲೆಗೂ ದುಃಖ
ನೇಯೋ ಮಗ್ಗದಂತೆ ಬದುಕು ಕಾಣಕ್ಕ….. ||ಮುಳ್ಳು||

ಬಲೆಯೊಳಗಿದ್ದರೂ ದುಃಖ ಬಯಲೊಳಗಿದ್ದರೂ ದುಃಖ
ಬೇವಿನ ಕಹಿಯಂತೆ ಬದುಕು ಕಾಣಕ್ಕ….. ||ಮುಳ್ಳು||

ಬಲೆಯೊಳಗಿದ್ದರೂ ದುಃಖ ಬಯಲೊಳಗಿದ್ದರೂ ದುಃಖ
ಬೀಸೋ ಕಲ್ಲಿನ ನಡುವೆ ಬದುಕು ಕಾಣಕ್ಕ….. ||ಮುಳ್ಳು||
*****